ETV Bharat / state

ಪುತ್ತೂರು ಉದ್ಯಮಿಗೆ ಹಣಕ್ಕೆ ಬೇಡಿಕೆಯಿಟ್ಟ ಕಿರಾತಕರು.. ಪೊಲೀಸರ ಚಾಣಾಕ್ಷತೆಯಿಂದ ರೌಡಿ ಶೀಟರ್​ಗಳು ಅಂದರ್​ - ಪುತ್ತೂರಿನಲ್ಲಿ ಉದ್ಯಮಿಯಿಂದ ಹಣಕ್ಕೆ ಬೇಡಿಕೆಯಿಟ್ಟಿದ್ದ ರೌಡಿ ಶೀಟರ್​ಗಳ ಬಂಧನ

ಜ.14ರಂದು ಅಪರಿಚಿತರು ಕಾರಿನಲ್ಲಿ ಬಂದು ಕುರಿಯ ಸಮೀಪ ಉದ್ಯಮಿಯಿಂದ ಹಣ ಪಡೆದು ಹೋಗುತ್ತಿದ್ದಂತೆ ಸಂಪ್ಯ ಎಸ್ಐ ಉದಯ ರವಿ ಅವರ ನೇತೃತ್ವದ ತಂಡ ಆರೋಪಿಗಳನ್ನು ಸುತ್ತುವರಿದು ಬಂಧಿಸಿದ್ದಾರೆ.

ರೌಡಿ ಶೀಟರ್​ಗಳ ಬಂಧನ
ರೌಡಿ ಶೀಟರ್​ಗಳ ಬಂಧನ
author img

By

Published : Jan 15, 2022, 4:20 PM IST

ಪುತ್ತೂರು(ದಕ್ಷಿಣ ಕನ್ನಡ): ಉದ್ಯಮಿಯೋರ್ವರಿಗೆ ವಿವಿಧ ಮೊಬೈಲ್‌ಗಳಿಂದ ಕರೆ ಮಾಡಿ ಬೆದರಿಕೆಯೊಡ್ಡಿ, ಹಣ ವಸೂಲಿ ಮಾಡಲು ಯತ್ನಿಸುತ್ತಿದ್ದ ಇಬ್ಬರು ರೌಡಿ ಶೀಟರ್‌ಗಳನ್ನು ಸಂಪ್ಯ ಠಾಣಾ ಎಸ್​​ಐ ಉದಯ ರವಿ ನೇತೃತ್ವದ ಪೊಲೀಸರ ತಂಡ ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಹೆಡೆಮುರಿ ಕಟ್ಟಿದೆ.

ಬಂಟ್ವಾಳ ತಾಲೂಕು ಗೋಳ್ತಮಜಲು ಕಲ್ಲಡ್ಕ ಮಸೀದಿ ಬಳಿಯ ನಿವಾಸಿ ಅಬ್ದುಲ್ಲಾ ಅವರ ಪುತ್ರ ಖಲಂದರ್ ಶರೀಫ್‌ಶಾಫಿ ಹಾಗೂ ಮಂಗಳೂರು ಮಂಜನಾಡಿ ಕುಚ್ಚಿಗದ್ದೆ ಹಂಝರವರ ಪುತ್ರ ಹಸನಬ್ಬಂಹಸನ್ ಅಚ್ಚುಚುನ್ ಬಂಧಿತರು. ಆರೋಪಿಗಳು ರೌಡಿಶೀಟರ್​ಗಳು ಎಂದು ತಿಳಿದುಬಂದಿದೆ.

ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಕುರಿಯ ನಿವಾಸಿ ದರ್ಬೆಯಲ್ಲಿರುವ ನಸೀಬ್ ಬೋರ್‌ವೆಲ್ ಮಾಲೀಕ ಅಬೂಬಕ್ಕರ್ ಮುಲಾರ್ ಅವರಿಗೆ, ಕಳೆದ ಒಂದು ವಾರದಿಂದ ಅಪರಿಚಿತ ವ್ಯಕ್ತಿಯು ವಿವಿದ ಮೊಬೈಲ್​​ಗಳಿಂದ ಕರೆ ಮಾಡಿ, 'ಯಾರೋ ಒಬ್ಬ ವ್ಯಕ್ತಿ ಜೈಲಿನಲ್ಲಿದ್ದಾನೆ. ಅವನನ್ನು ಬಿಡಿಸಲು ಹಣ ಬೇಕು, ಅವನನ್ನು ಬಿಡಿಸಲು ರೂ. 13,00,000/- ತಗಲುತ್ತದೆ. ಅದಕ್ಕಾಗಿ ನೀನು ಹಣ ಕೊಡಬೇಕು, 2 ದಿನದೊಳಗೆ ರೂ. 3,50,000/- ಹಣ ರೆಡಿ ಮಾಡಬೇಕು, ಇಲ್ಲದಿದ್ದರೆ ನಿನ್ನನ್ನು ಮತ್ತು ನಿನ್ನ ಮಕ್ಕಳನ್ನು ಜೀವ ಸಹಿತ ಬಿಡುವುದಿಲ್ಲ. ನಿನ್ನ ಮಕ್ಕಳ ಜೀವನ ಹಾಳು ಮಾಡುತ್ತೇನೆ. ಈ ವಿಚಾರವನ್ನು ಇತರರಲ್ಲಿ ತಿಳಿಸಿದರೆ ನಿನ್ನ ಹೆಣ ಖಂಡಿತ ಬೀಳುತ್ತದೆ. ನೀನು ಜೀವಂತ ಬದುಕಲು ಸಾಧ್ಯವಿಲ್ಲ’ ಎಂದು ತಮಗೆ ಜೀವ ಬೆದರಿಕ ಒಡ್ಡಿರುವುದಾಗಿ ಉದ್ಯಮಿ ಅಬೂಬಕ್ಕರ್ ಮುಲಾರ್ ಜ.5ರಂದು ಸಂಪ್ಯ ಪೊಲೀಸರಿಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ವಿರುದ್ಧ ಅ.ಕ್ರ: 03/2022 ಕಲಂ; 504,506,507,387 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಪ್ರಕರಣ ತನಿಖೆ ನಡೆಸಲು ಮುಂದಾಗಿದ್ದ ಪೊಲೀಸರು ಜ.14ರಂದು ಉದ್ಯಮಿಯಿಂದ ಹಣ ಪಡೆದುಕೊಂಡು ಹೋಗುವ ಸಮಯದಲ್ಲಿ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಿ, ಉದ್ಯಮಿಯಿಂದ ವಸೂಲಿ ಮಾಡಿದ ₹50,000 ಹಾಗೂ ಕೃತ್ಯಕ್ಕೆ ಬಳಸಿದ ಕಾರು ಮತ್ತು ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಸಿನಿಮಾ ಸ್ಟೈಲಲ್ಲಿ ಕಾರ್ಯಾಚರಣೆ:

ಉದ್ಯಮಿಯಿಂದ ದೂರು ಸ್ವೀಕರಿಸಿದ ಪೊಲೀಸರು, ತನಿಖೆ ನಡೆಸಿ ಹಣದ ಬೇಡಿಕೆಯಿಟ್ಟ ಅಪರಿಚಿತರಿಗೆ ಉದ್ಯಮಿಯ ಮೂಲಕವೇ ಹಣ ನೀಡುವ ಕುರಿತು ಮಾತುಕತೆ ನಡೆಸಿ ಕುರಿಯ ಸಮೀಪವೇ ಹಣ ನೀಡುವ ಸ್ಥಳ ನಿಗದಿ ಪಡಿಸಿದ್ದರು. ಹಾಗೆ ಜ.14ರಂದು ಅಪರಿಚಿತರು ಕಾರಿನಲ್ಲಿ ಬಂದು ಕುರಿಯ ಸಮೀಪ ಉದ್ಯಮಿಯಿಂದ ಹಣ ಪಡೆದು ಹೋಗುತ್ತಿದ್ದಂತೆ ಸಂಪ್ಯ ಎಸ್ಐ ಉದಯ ರವಿ ಅವರ ನೇತೃತ್ವದ ತಂಡ ಆರೋಪಿಗಳನ್ನು ಸುತ್ತುವರಿದು ಬಂಧಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.