ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಸರಣಿ ಹತ್ಯೆಯಿಂದ ಉಂಟಾದ ಉದ್ವಿಗ್ನ ಪರಿಸ್ಥಿತಿ ತಿಳಿಗೊಳಿಸಲು ನಗರದಲ್ಲಿ ಬಂದೋಬಸ್ತ್ ಗಾಗಿ ಆಗಮಿಸಿದ್ದ ಪೊಲೀಸರು ಊಟದ ವಿಚಾರಕ್ಕೆ ವಾಗ್ವಾದ ನಡೆಸಿರುವ ಘಟನೆ ನಡೆದಿದೆ.
ನಗರದಲ್ಲಿ ಬಂದೋಬಸ್ತ್ ಗಾಗಿ ಚಿಕ್ಕಮಗಳೂರು ಜಿಲ್ಲೆಯ ಪೊಲೀಸರು ಇಲ್ಲಿಗೆ ಬಂದಿದ್ದರು. ಇವರಿಗೆ ಸುರತ್ಕಲ್ ಬಂಟರ ಭವನದಲ್ಲಿ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇಲ್ಲಿ ವಾಸ್ತವ್ಯ ಇದ್ದ ಪೊಲೀಸರಿಗೆ ಸುರತ್ಕಲ್ ಪೊಲೀಸ್ ಸಿಬ್ಬಂದಿ ಊಟ ತೆಗೆದುಕೊಂಡು ಹೋಗಿದ್ದಾರೆ. ಈ ಸಂದರ್ಭ ಹಳಸಿದ ಆಹಾರ ನೀಡಿದ್ದಾರೆ ಎಂದು ಆರೋಪಿಸಿ ಸುರತ್ಕಲ್ ಪೊಲೀಸರ ಜೊತೆ ಚಿಕ್ಕಮಗಳೂರು ಪೊಲೀಸರು ವಾಗ್ವಾದ ನಡೆಸಿದ್ದಾರೆ.
ಬಂದೋಬಸ್ತ್ಗೆ ಚಿಕ್ಕಮಗಳೂರು , ಉಡುಪಿ , ಉತ್ತರ ಕನ್ನಡ ಜಿಲ್ಲೆಯಿಂದ ಕೆಎಸ್‌ಆರ್‌ಪಿ , ಪೊಲೀಸ್ ಸಿಬ್ಬಂದಿ , ಅಧಿಕಾರಿಗಳು ಆಗಮಿಸಿದ್ದರು. ಪೊಲೀಸರ ವಾಗ್ವಾದದ ವಿಚಾರ ಹಿರಿಯ ಅಧಿಕಾರಿಗಳ ಗಮನಕ್ಕೂ ಬಂದಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಲ್ಲರಿಗೂ ಒಂದೇ ರೀತಿಯ ಊಟ ನೀಡಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಓದಿ :ಮಂಗಳೂರು ಕೊಲೆ ಪ್ರಕರಣಗಳು: ಎಡಿಜಿಪಿ ನೇತೃತ್ವದಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳ ಸಭೆ