ಮಂಗಳೂರು : ನಗರದ ಏಪಿಸ್ ಕಿಡ್ನಿ ಸ್ಟೋನ್ ಇನ್ಸ್ಸ್ಟಿಟ್ಯೂಟ್ನಲ್ಲಿ ಶಸ್ತ್ರಚಿಕಿತ್ಸೆ ಇಲ್ಲದೆ ಅತಿದೊಡ್ಡ ಕಿಡ್ನಿಸ್ಟೋನ್ ತೆಗೆಯಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಮತ್ತು ಹಿರಿಯ ವೈದ್ಯ ಡಾ ಮೊಹಮ್ಮದ್ ಸಲೀಂ ತಿಳಿಸಿದ್ದಾರೆ.
ಸಾಮಾನ್ಯವಾಗಿ ದೊಡ್ಡ ಗಾತ್ರದ ಮೂತ್ರಪಿಂಡದ ಕಲ್ಲುಗಳನ್ನು (2 ಸೆಂಟಿಮೀಟರ್ಗಿಂತ ದೊಡ್ಡದಾದ) ಕಿಡ್ನಿ ಪಂಕ್ಚರ್ ಮೂಲಕ ತೆಗೆಯಬೇಕು. ಸ್ಟಾಗಾರ್ನ್ ಕಲ್ಲುಗಳು ಎಂದು ಕರೆಯಲಾಗುವ ದೊಡ್ಡ ಗಾತ್ರದ ಕಿಡ್ನಿಸ್ಟೋನ್ ತೆರೆದ, ಲ್ಯಾಪ್, ಮಲ್ಟಿಪಲ್ ಕಿಡ್ನಿ ಪಂಕ್ಚರ್ ಸರ್ಜರಿ ಮೂಲಕ ತೆಗೆಯಲಾಗುತ್ತದೆ.
ಆದರೆ, ಏಪಿಸ್ ಕಿಡ್ನಿಸ್ಟೋನ್ ಇನ್ಸ್ಸ್ಟಿಟ್ಯೂಟ್ನಲ್ಲಿ ಅತ್ಯಾಧುನಿಕ ತಂತ್ರಜ್ಞಾನ RIRS-TFL-DS ಬಳಸಿ ಕಿಡ್ನಿ ಪಂಕ್ಚರ್ ಮಾಡದೆ ಅತೀದೊಡ್ಡ ಕಿಡ್ನಿಸ್ಟೋನ್ (5.5x2.5 ಸೆಂ.ಮೀ) ತೆಗೆಯಲಾಗಿದೆ.
ಕಿಡ್ನಿ ಪಂಕ್ಚರ್ ಮಾಡದೆ ಈ ಗಾತ್ರದ ಕಿಡ್ನಿಸ್ಟೋನ್ ತೆಗೆಯಲಾಗಿದೆ. ಇದು ಜಿಲ್ಲೆಯಲ್ಲಿ ಪ್ರಥಮ ಪ್ರಕರಣ, ಈ ರೀತಿಯ ನಡೆದಿರುವುದು ವಿರಳ ಎಂದಿದ್ದಾರೆ. ಇಡೀ ಪ್ರಕ್ರಿಯೆಯನ್ನು ಒಂದೇ ಸಿಟ್ಟಿಂಗ್ನಲ್ಲಿ ನಡೆಸಲಾಗಿದೆ ಮತ್ತು ರೋಗಿಯನ್ನು ಡೇಕೇರ್ ಆಧಾರದ ಮೇಲೆ 24 ಗಂಟೆಗಳ ಒಳಗೆ ಡಿಸ್ಚಾರ್ಜ್ ಮಾಡಲಾಗಿದೆ.