ETV Bharat / state

ಕೋರ್ ಕಮಿಟಿ ಸಭೆಯಲ್ಲಿ ಚುನಾವಣೆ ಗೆಲ್ಲಲು ರಣತಂತ್ರ ಹೆಣೆದ ಅಮಿತ್ ಶಾ - ಅಮಿತ್ ಶಾ ಮಾರ್ಗದರ್ಶನ

ಮಂಗಳೂರಿನಲ್ಲಿ ನಡೆದ ಆರು ಜಿಲ್ಲೆಗಳ ಕೋರ್ ಕಮಿಟಿ ಸಭೆಯಲ್ಲಿ ಅಮಿತ್ ಶಾ ಅವರು ಮುಂಬರುವ ವಿಧಾನಸಭೆ ಚುನಾವಣೆ ಎದುರಿಸುವ ಬಗ್ಗೆ ಮಾರ್ಗದರ್ಶನ ನೀಡಿದರು.

core committee meeting
ಮಂಗಳೂರಿನಲ್ಲಿ ನಡೆದ ಆರು ಜಿಲ್ಲೆಗಳ ಕೋರ್ ಕಮಿಟಿ ಸಭೆಯಲ್ಲಿ ಅಮಿತ್ ಶಾ ಅವರು ಮುಂಬರುವ ವಿಧಾನಸಭೆ ಚುನಾವಣೆ ಎದುರಿಸುವ ಬಗ್ಗೆ ಮಾರ್ಗದರ್ಶನ ನೀಡಿದರು.
author img

By

Published : Feb 11, 2023, 10:14 PM IST

ಮಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ನಡೆಸಿದ ಕೋರ್ ಕಮಿಟಿ‌ ಸಭೆಯಲ್ಲಿ ರಾಜ್ಯಕ್ಕೆ ಇನ್ನೊಮ್ಮೆ ತಿಂಗಳ ನಂತರ ಬಂದು ಪರಿಶೀಲನೆ ನಡೆಸುತ್ತೇನೆ ಎಂದು ಹೇಳಿದ್ದಾರೆ. ಇಲ್ಲಿನ ಕೆಂಜಾರಿನ ಶ್ರೀದೇವಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಆರು ಜಿಲ್ಲೆಗಳ ಕೋರ್ ಕಮಿಟಿ ಸಭೆಯಲ್ಲಿ ಮುಂಬರುವ ಚುನಾವಣೆಯನ್ನು ಎದುರಿಸುವ ಬಗ್ಗೆ ಮಾರ್ಗದರ್ಶನಗಳನ್ನು ಅವರು ನೀಡಿದರು. ಈ ಸಭೆಯಲ್ಲಿ ಆರು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳ ಬಿಜೆಪಿ ಶಾಸಕರು, ಮಾಜಿ ಶಾಸಕರು, ಸಂಸದರು, ಜಿಲ್ಲಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ 118 ಆಹ್ವಾನಿತ ನಾಯಕರು ಭಾಗವಹಿಸಿದ್ದರು.

ವಿಧಾನಸಭೆ ಚುನಾವಣೆ ಗೆಲ್ಲಲು ರಣತಂತ್ರ: ಸಂಜೆ 6.15ರಿಂದ ಸುಮಾರು ಒಂದೂಕಾಲು ಗಂಟೆ ಮಂಗಳೂರು ಮತ್ತು ಶಿವಮೊಗ್ಗ ವಿಭಾಗೀಯ ಪ್ರಮುಖರ ಸಭೆಯಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಮುಖ ಚರ್ಚೆಗಳು ನಡೆದವು. ಆರು ಜಿಲ್ಲೆಗಳಲ್ಲಿ 33 ಕ್ಷೇತ್ರಗಳಿದ್ದು, ಇದರಲ್ಲಿ 29 ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಇದೆ. ಈ 29 ಕ್ಷೇತ್ರ ಉಳಿಸಿಕೊಂಡು ಉಳಿದ ನಾಲ್ಕು ಕ್ಷೇತ್ರದಲ್ಲಿ ಗೆದ್ದು ಬರುವಂತೆ ಮಾರ್ಗದರ್ಶನ ನೀಡಿದರು.

ಅಮಿತ್ ಶಾ ಮಾರ್ಗದರ್ಶನ: ಸಭೆಯ ಬಳಿಕ ಮಾತನಾಡಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ''ಮುಂದಿನ ಒಂದು ತಿಂಗಳಲ್ಲಿ ಸರ್ಕಾರದ ಸಾಧನೆಯನ್ನು ಮನೆ ಮನೆಗೆ ತಲುಪಿಸಬೇಕು. ಮತ್ತೆ ತಿಂಗಳ ನಂತರದ ಬಂದು ಇನ್ನೊಮ್ಮೆ ಪರಿಶಿಲನೆ ನಡೆಸುವುದಾಗಿ‌ ಅಮಿತ್ ಶಾ ಹೇಳಿದ್ದಾರೆ. ಅಭ್ಯರ್ಥಿ ವಿಚಾರವಾಗಿ ವಿಭಾಗ ಪ್ರಮುಖರ ಸಭೆಯಲ್ಲಿ ಯಾವುದೇ ಚರ್ಚೆ ಆಗಿಲ್ಲ'' ಎಂದು ತಿಳಿಸಿದ್ದಾರೆ. ''ಎರಡು ವಿಭಾಗದ 33 ವಿಧಾನಸಭಾ ಕ್ಷೇತ್ರಗಳಲ್ಲಿ 29 ಕ್ಷೇತ್ರಗಳಲ್ಲಿ ಬಿಜೆಪಿ ಇದೆ. ಅದನ್ನು ಉಳಿಸಿಕೊಂಡು ಉಳಿದ ನಾಲ್ಕು ಕ್ಷೇತ್ರ ಗೆಲ್ಲಲು ಅಮಿತ್ ಶಾ ಮಾರ್ಗದರ್ಶ‌ನ ನೀಡಿದ್ದಾರೆ. ಟಿಕೆಟ್ ಬಗ್ಗೆ ಏನೂ ಚರ್ಚೆ ಆಗಿಲ್ಲ'' ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

150ಕ್ಕೂ ಹೆಚ್ಚು ಸೀಟ್ ಗೆಲ್ಲುತ್ತೇವೆ: ಮಾಜಿ ಸಚಿವ ಈಶ್ವರಪ್ಪ ಮಾತನಾಡಿ, ''ಒಂದೂವರೆ ಗಂಟೆ ಸಭೆ ನಡೆಸಿದ್ದಾರೆ. ಸ್ಪೂರ್ತಿ ಬಂದಿದ್ದು, ಮುಂದಿನ ಚುನಾವಣೆಯನ್ನು ಯಾವ ರೀತಿ ಗೆಲ್ಲಬೇಕು ಅಂತ ಅಮಿತ್ ಶಾ ಮಾರ್ಗದರ್ಶನ ಮಾಡಿದ್ದು, ಅದೇ ರೀತಿ ಮುಂದುವರಿಯಲಿದ್ದೇವೆ. 150ಕ್ಕೂ ಹೆಚ್ಚು ಸೀಟ್ ಗೆಲ್ಲುತ್ತೇವೆ.‌ ಟಿಕೆಟ್ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ'' ಎಂದು ಹೇಳಿದರು.

ಗೆಲುವಿನ ಲೆಕ್ಕಾಚಾರದ ಬಗ್ಗೆ ಸುಧೀರ್ಘ ಚರ್ಚೆ ನಡೆಯಿತು ಸಚಿವ ಸುನಿಲ್ ಕುಮಾರ್ ಮಾತನಾಡಿ, ''33 ಕ್ಷೇತ್ರದ ಬಗ್ಗೆ ಚರ್ಚೆ ನಡೆಯಿತು. 33 ಕ್ಷೇತ್ರ ಗೆಲ್ಲುವ ಸೂತ್ರಗಳನ್ನು ನಮ್ಮ ಮುಂದೆ ಇಟ್ಟಿದ್ದಾರೆ. ಬಿಜೆಪಿ ಸರಕಾರ ಮತ್ತೆ ರಚನೆಯಾಗಲು ಈ 33 ಕ್ಷೇತ್ರದಲ್ಲಿ ಗೆಲುವು ಸಾಧಿಸಬೇಕು. 33ರಲ್ಲಿ 4 ಕಾಂಗ್ರೆಸ್ ಇದ್ದು, ಅಲ್ಲಿ ಯಾವ ರೀತಿ ಗೆಲ್ಲಬೇಕು ಎಂಬ ಸುಧೀರ್ಘ ಚರ್ಚೆ ನಡೆಯಿತು'' ಎಂದರು. ''ಮುಂದಿನ ಚುನಾವಣೆಯಲ್ಲಿ ಯಾವ ರೀತಿ ಗೆಲ್ಲಬೇಕು ಎಂದು ಸ್ಪುಟವಾಗಿ ಮಾರ್ಗದರ್ಶನ ನೀಡಿದ್ದಾರೆ. ಇದರಿಂದ ನಮ್ಮಲ್ಲಿ ರಣೋತ್ಸಾಹ ಹೆಚ್ಚಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಇದನ್ನೂ ಓದಿ: ಸರ್ಕಾರದ ಬಜೆಟ್ ಜಾಹೀರಾತು ಆಗಿರುತ್ತದೆ, ನಾನು ಅದರಲ್ಲಿ ಭಾಗವಹಿಸುವುದಿಲ್ಲ: ಹೆಚ್ ಡಿ ಕುಮಾರಸ್ವಾಮಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.