ETV Bharat / state

ಗ್ಲಾಸ್​​ಗಳಲ್ಲಿ ಟಿಂಟ್ ಅಳವಡಿಸಿ ಅಕ್ರಮ ಚಟುವಟಿಕೆಯಲ್ಲಿ ತೊಡಗಿವೆಯಾ ಖಾಸಗಿ ಆ್ಯಂಬುಲೆನ್ಸ್​​ಗಳು? - tint case latest news

ಖಾಸಗಿ ಆ್ಯಂಬುಲೆನ್ಸ್​​ಗಳಲ್ಲಿ ಟಿಂಟ್​​ ಅಳವಡಿಸಿ ಅಕ್ರಮವಾಗಿ ಮದ್ಯ ಸಾಗಣೆ ಸೇರಿದಂತೆ ಹಲವು ರೀತಿಯ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡಿವೆ ಎನ್ನುವ ಆರೋಪಗಳು ಕೇಳಿ ಬಂದಿವೆ.

allegations as  Private ambulances involved in illegal activity through install tint in glass!
ಗ್ಲಾಸ್​​ಗಳಲ್ಲಿ ಟಿಂಟ್ ಅಳವಡಿಸಿ ಅಕ್ರಮ ಚಟುವಟಿಕೆಯಲ್ಲಿ ತೊಡಗಿದೆಯಾ ಖಾಸಗಿ ಆಂಬ್ಯುಲೆನ್ಸ್​​ಗಳು?
author img

By

Published : Nov 11, 2020, 1:56 PM IST

Updated : Nov 11, 2020, 3:22 PM IST

ಪುತ್ತೂರು: ವಾಹನಗಳ ಗ್ಲಾಸ್​​ಗಳಲ್ಲಿ ಟಿಂಟ್ ಅಳವಡಿಕೆ ನಿಷಿದ್ಧ ಎನ್ನುವ ತೀರ್ಪನ್ನು ಸುಪ್ರೀಂಕೋರ್ಟ್ ಈಗಾಗಲೇ ನೀಡಿದ್ದರೂ, ಕೂಡ ನಿಯಮಗಳನ್ನು ಕೆಲವು ವಾಹನಗಳು ಗಾಳಿಗೆ ತೂರುತ್ತಿರುವುದು ಕಂಡುಬರುತ್ತಿದೆ. ಅದರಲ್ಲೂ ಪುತ್ತೂರು ಭಾಗದಲ್ಲಿ ಸಂಚರಿಸುತ್ತಿರುವಂತಹ ಕೆಲವು ಖಾಸಗಿ ಆ್ಯಂಬುಲೆನ್ಸ್​​ಗಳು ನಿಯಮಗಳನ್ನು ಉಲ್ಲಂಘಿಸುತ್ತಿವೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.

ಸಾಮಾಜಿಕ ಕಾರ್ಯಕರ್ತ ಸುದರ್ಶನ್ ಪುತ್ತೂರು

ಆ್ಯಂಬುಲೆನ್ಸ್​​ಗಳಲ್ಲೂ ಟಿಂಟ್ ಬಳಸಬಾರದು ಎನ್ನುವ ನಿಯಮವಿದ್ದರೂ ಕೂಡ ಕೆಲವು ಆ್ಯಂಬುಲೆನ್ಸ್​​ಗಳಲ್ಲಿ ಟಿಂಟ್​ಗಳನ್ನು ಅಳವಡಿಸಲಾಗಿದೆ. ಈ ರೀತಿ ಟಿಂಟ್ ಹಾಕಿರುವ ಆ್ಯಂಬುಲೆನ್ಸ್​​ಗಳು ಅಕ್ರಮವಾಗಿ ಮದ್ಯ ಸಾಗಣೆ ಸೇರಿದಂತೆ ಹಲವು ರೀತಿಯ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿವೆ ಎನ್ನಲಾಗುತ್ತಿದೆ. ಅಲ್ಲದೇ ರೋಗಿಗಳನ್ನು ಸಾಗಿಸುವ ಕೆಲಸ ಮಾಡಬೇಕಿದ್ದ ಆ್ಯಂಬುಲೆಲ್ಸ್​​ಗಳು, ಬೇರೆ ರೀತಿಯ ಅವ್ಯವಹಾರಗಳಲ್ಲಿ ತೊಡಗಿಸಿಕೊಂಡಿರುವ ಹಿನ್ನೆಲೆಯಲ್ಲಿ ಎಲ್ಲಾ ಆ್ಯಂಬುಲೆನ್ಸ್​​ಗಳ ಬಗ್ಗೆ ಕಟ್ಟುನಿಟ್ಟಿನ ತನಿಖೆ ನಡೆಯಬೇಕಿದೆ ಎನ್ನುವ ಒತ್ತಾಯ ಕೇಳಿ ಬರುತ್ತಿದೆ.

ಆ್ಯಂಬುಲೆನ್ಸ್​​ಗಳಿಗೆ ಸಾಮಾನ್ಯವಾಗಿ ಎಲ್ಲಾ ರಸ್ತೆ ತನಿಖೆಗಳಿಂದ ಮುಕ್ತವಾಗಿ ಸಂಚಾರ ನಡೆಸಲು ಇರುವ ಅವಕಾಶವನ್ನೇ ಈ ಆ್ಯಂಬುಲೆನ್ಸ್​ಗಳ ಚಾಲಕರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ, ಕೆಲವು ಖಾಸಗಿ ಆ್ಯಂಬುಲೆನ್ಸ್​​​ಗಳು ಹಗಲು ಪೂರ್ತಿ ಯಾವುದೋ ಒಂದು ಕಡೆಯಲ್ಲಿ ಪಾರ್ಕ್ ಮಾಡಿಕೊಂಡು ರಾತ್ರಿಯಾಗುತ್ತಿದ್ದಂತೆ ತಮ್ಮ ಕಾರ್ಯ ಆರಂಭಿಸುತ್ತದೆ. ಹಗಲು ಯಾವುದೇ ತುರ್ತು ಕರೆ ಸ್ವೀಕರಿಸದ ಈ ಆ್ಯಂಬುಲೆನ್ಸ್​​ಗಳು ರಾತ್ರಿ ವೇಳೆಯಲ್ಲಿ ಮಾತ್ರ ಕಾರ್ಯಾಚರಣೆಗೆ ಇಳಿಯುವ ಹಿಂದಿನ ರಹಸ್ಯದ ಬಗ್ಗೆಯೂ ಇದೀಗ ಅನುಮಾನಗಳು ಮೂಡಲಾರಂಭಿಸಿದೆ. ಹಾಗಾಗಿ ತನಿಖೆ ನಡೆಯಬೇಕಿದೆ ಎನ್ನುವ ಒತ್ತಾಯ ಕೇಳಿ ಬರುತ್ತಿದೆ.

Last Updated : Nov 11, 2020, 3:22 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.