ETV Bharat / state

ಕಾಂತಾರ ಸಿನಿಮಾದಲ್ಲಿ ದಲಿತರಿಗೆ ಅವಮಾನ: ಪ್ರದರ್ಶನ ನಿಲ್ಲಿಸಿ ಕತ್ತರಿ ಪ್ರಯೋಗಕ್ಕೆ ಆಗ್ರಹ - Kanthara movie Hurt the sentiments of Dalits

ಕಾಂತಾರ ಸಿನೆಮಾದಲ್ಲಿ ದಲಿತರನ್ನು ಕೆಟ್ಟದಾಗಿ ಬಿಂಬಿಸಲಾಗಿದೆ. ಸಿನೆಮಾದಲ್ಲಿ ಅಸ್ಪೃಶ್ಯತೆ ವಿಚಾರಗಳನ್ನು ತೋರಿಸಲಾಗಿದ್ದು, ಈ ಭಾಗಗಳಿಗೆ ಸೆನ್ಸಾರ್​ ಮಂಡಳಿ ಕತ್ತರಿ ಹಾಕಬೇಕು ಎಂದು ಸಮತಾ ಸೈನಿಕದಳದ ರಾಜ್ಯ ಕಾರ್ಯದರ್ಶಿ ಲೋಲಾಕ್ಷ ಒತ್ತಾಯಿಸಿದರು.

dalits-are-insulted-in-kantara-movie
ಕಾಂತಾರ ಸಿನಿಮಾದಲ್ಲಿ ದಲಿತರಿಗೆ ಅವಮಾನ : ಪ್ರದರ್ಶನ ನಿಲ್ಲಿಸಿ ಕತ್ತರಿ ಪ್ರಯೋಗಕ್ಕೆ ಆಗ್ರಹ
author img

By

Published : Nov 12, 2022, 5:27 PM IST

ಮಂಗಳೂರು: 'ಕಾಂತಾರ' ಕನ್ನಡ ಸಿನಿಮಾದಲ್ಲಿ ಅಸ್ಪೃಶ್ಯತೆಯ ವಿಚಾರಗಳನ್ನು ತೋರಿಸಿದ್ದಲ್ಲದೇ, ದಲಿತರನ್ನು ಕೆಟ್ಟದಾಗಿ ಬಿಂಬಿಸಲಾಗಿದೆ. ಆದ್ದರಿಂದ ಇಂತಹ ವಿಕೃತಿಯ ಭಾಗಗಳಿಗೆ ಕತ್ತರಿ ಹಾಕಬೇಕೆಂದು ಸೆನ್ಸಾರ್ ಮಂಡಳಿ ಒತ್ತಾಯಿಸುತ್ತೇವೆ ಎಂದು ಸಮತಾ ಸೈನಿಕದಳದ ರಾಜ್ಯ ಕಾರ್ಯದರ್ಶಿ ಲೋಲಾಕ್ಷ ಹೇಳಿದರು.

ಮಂಗಳೂರಿನಲ್ಲಿ ಮಾತನಾಡಿದ ಅವರು, ಈ ಬಗ್ಗೆ ನಾವು ದ.ಕ.ಜಿಲ್ಲಾಧಿಕಾರಿಯವರಿಗೆ ಪತ್ರ ಮುಖೇನ ಮನವಿ ಮಾಡುತ್ತೇವೆ. ಕಾಂತಾರ ಸಿನಿಮಾದ ಕೆಲವೊಂದು ಪಾತ್ರಗಳಲ್ಲಿ ದಲಿತ ವಿರೋಧಿ ವಿಚಾರಗಳಿದೆ. ಇದು ದೈವಾರಾಧನೆಯಲ್ಲಿ ತೊಡಗಿರುವ ದಲಿತರ ಭಾವನೆಗಳಿಗೆ ಧಕ್ಕೆ ಮಾಡಿದೆ. ನಮಗೆ ಸಿನಿಮಾ ತಂಡದ ಬಗ್ಗೆ ಆಕ್ಷೇಪಣೆ ಇಲ್ಲ.

ಆದರೆ, ಸೆನ್ಸಾರ್ ಮಂಡಳಿ ಕಾನೂನಿನ ಚೌಕಟ್ಟಿನಲ್ಲಿ ಸಿನಿಮಾವನ್ನು ಕೂಲಂಕಷವಾಗಿ ಪರಿಶೀಲಿಸಿ ಆಕ್ಷೇಪಣೆ ಇರುವ ಭಾಗಗಳಿಗೆ ಕತ್ತರಿಯನ್ನು ಹಾಕಬೇಕಿತ್ತು ಎಂದು ಹೇಳಿದರು.

ಕಾಂತಾರ ಸಿನಿಮಾದಲ್ಲಿ ದಲಿತರಿಗೆ ಅವಮಾನ : ಪ್ರದರ್ಶನ ನಿಲ್ಲಿಸಿ ಕತ್ತರಿ ಪ್ರಯೋಗಕ್ಕೆ ಆಗ್ರಹ

ಆದರೆ, ದೈವಾರಾಧನೆಯ ಬಗ್ಗೆ ಸೆನ್ಸಾರ್ ಬೋರ್ಡ್ ಗೆ ಅರಿವು ಇಲ್ಲದಿದ್ದಲ್ಲಿ ಈ ಬಗ್ಗೆ ಅಧ್ಯಯನ ಮಾಡಿರುವ ಸಂಶೋಧಕರನ್ನು ಇರಿಸಿಕೊಂಡು ಈ ಕೆಲಸ ಮಾಡಬೇಕಿತ್ತು. ಆದರೆ, ಸೆನ್ಸಾರ್ ಮಂಡಳಿ ಇದಾವುದನ್ನೂ ಮಾಡದೆ ನಿರ್ಲಕ್ಷ್ಯ ವಹಿಸಿದೆ. ಅಲ್ಲದೇ ದೈವಗಳು ಅಭಯ ನೀಡುತ್ತದೆಯೇ ಹೊರತು ಕತ್ತಿಯಿಂದ ಇರಿದು ಕೊಲ್ಲುವ ಕಾರ್ಯವನ್ನು ಮಾಡುವುದಿಲ್ಲ. ಇದು ದೈವಾರಾಧನೆಯ ವಿಕೃತಿಯಾಗಿದೆ‌. ಸಿನಿಮಾದಲ್ಲಿ ಇಂತಹ ಹಲವಾರು ನಿಂದನಕಾರಿ ಅಂಶಗಳಿದ್ದು,ನಾವು ಇದನ್ನು ವಿರೋಧಿಸುತ್ತೇವೆ ಎಂದು ಹೇಳಿದರು.

ಈ ಸಿನಿಮಾದ ಬಗ್ಗೆ ನಾವು ಹೇಳಿರುವ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ ಸಿನಿಮಾದ ಸಾರ್ವಜನಿಕ ಪ್ರದರ್ಶನವನ್ನು ಸ್ಥಗಿತ ಮಾಡಬೇಕು. ಎರಡು ವಾರಗಳ ಕಾಲಾವಕಾಶವನ್ನು ನಾವು ಅವರಿಗೆ ನೀಡುತ್ತೇವೆ. ಆ ಬಳಿಕವೂ ಇದು ಸರಿಯಾಗದಿದ್ದಲ್ಲಿ ಮತ್ತೆ ಪರಿಶಿಷ್ಟ ಜಾತಿ ಹಾಗೂ ಬುಡಕಟ್ಟುಗಳ ಸಂಘಟನೆಗಳು ನಾವು ಮತ್ತೆ ಸಭೆ ಸೇರಿ ಯಾವ ರೀತಿ ಕಾನೂನಾತ್ಮಕ ಹೋರಾಟ ನಡೆಸಬಹುದು ಎಂದು ಚಿಂತನೆಯನ್ನು ನಡೆಸುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ : ತುಳುನಾಡ ದೈವ ಕೊರಗಜ್ಜನಿಗೆ ಉಕ್ರೇನ್ ಕುಟುಂಬದಿಂದ ಅಗೇಲು ಸೇವೆ.. ದೈವ ಶಕ್ತಿಗೆ ನಮನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.