ಮಂಗಳೂರು : ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತನ ಕೊಲೆಯಲ್ಲಿ ಸಚಿವ ಕೆ ಎಸ್ ಈಶ್ವರಪ್ಪ ಅವರ ಕೈವಾಡ ಇದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಲಿ ಎಂದು ಎಐಸಿಸಿ ಕಾರ್ಯದರ್ಶಿ ಪಿ ವಿ ಮೋಹನ್ ಆರೋಪಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಕೊಲೆ ನಡೆದ ಕೂಡಲೇ ಅವರು ಕೊಲೆಯನ್ನು ಮುಸ್ಲಿಮರು ಮಾಡಿದ್ದಾರೆ ಎಂದು ಹೇಳಿದ್ದಾರೆ. ಅವರು ಸಾಕ್ಷ್ಯವಿಲ್ಲದೆ ಅಷ್ಟು ಬೇಗ ಮಾತಾಡಿದ್ದಾರೆ. ಅವರು ಕರ್ನಾಟಕಕ್ಕೆ ಶಾಪ ಎಂದರು.
ಇದನ್ನೂ ಓದಿ : ಶಿವಮೊಗ್ಗ ಹರ್ಷ ಕೊಲೆ ಪ್ರಕರಣ: ಎನ್ಐಎ ತನಿಖೆಗೆ ವಿಶ್ವ ಹಿಂದೂ ಪರಿಷತ್ ಆಗ್ರಹ
ಈಶ್ವರಪ್ಪ ಅವರು ಭಸ್ಮಾಸುರನಂತೆ. ಸ್ವತಃ ಅವರೇ ಆಹುತಿಯಾಗುವಂತಹ ಘಟನೆ ನಡೆದಿದೆ. ಅವರ ಹೇಳಿಕೆ ವಿರುದ್ಧ ಸದನದಲ್ಲಿ ನಡೆಯುತ್ತಿರುವ ಆಕ್ರೋಶವನ್ನು ಮತ್ತೊಂದೆಡೆ ತಿರುಗಿಸಲು ಇದನ್ನು ಮಾಡಿದ್ದಾರೆ. ಈ ಬಗ್ಗೆ ತನಿಖೆ ನಡೆಯಬೇಕು. ಅವರು ಬಹಳ ಅಪಾಯಕಾರಿ ಮನುಷ್ಯ ಎಂದು ಹೇಳಿದರು.