ETV Bharat / state

ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗೆ ಧಮ್ಕಿ ಹಾಕಿದ ನಕಲಿ ವರದಿಗಾರನ ಬಂಧನ - Kavoor Police Station, Mangalore

ಈ ಸಂದರ್ಭ ಆರೋಪಿಯು ಪಾನಮತ್ತನಾಗಿದ್ದ ಎಂದು ತಿಳಿದು ಬಂದಿದೆ. ಈ ಆರೋಪಿಯ ವಿರುದ್ಧ ಪ್ರಾಥಮಿಕ ಆರೋಗ್ಯ ಕೇಂದ್ರ ಸಿಬ್ಬಂದಿ ಕಾವೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ‌.

dwdd
ಪ್ರಾಥಮಿಕ ಆರೋಗ್ಯ ಕೇಂದ್ರ ಸಿಬ್ಬಂದಿಗೆ ವ್ಯಕ್ತಿಯಿಂದ ಧಮ್ಕಿ.!
author img

By

Published : Jun 17, 2020, 9:45 PM IST

ಮಂಗಳೂರು : ಖಾಸಗಿ ವಾಹಿನಿ ವರದಿಗಾರ ಎಂದು‌ ಸುಳ್ಳು ಹೇಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಸಿಬ್ಬಂದಿಗೆ ವ್ಯಕ್ತಿಯೋರ್ವ ಬೆದರಿಕೆ ಹಾಕಿದ ಘಟನೆ ನಗರದ ಬೊಂದೆಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.

ನಗರದ ಹೊರವಲಯದ ಮೂಡುಶೆಡ್ಡೆ ನಿವಾಸಿ ಲಾಯ್ ಜೋಸ್ಸಿ ಮೊಂತೆರೋ ಬೆದರಿಕೆ ಹಾಕಿರುವ ಆರೋಪಿ. ಈತನ ಪತ್ನಿ ಮೂರು ತಿಂಗಳ ಗರ್ಭಿಣಿಯಾಗಿದ್ದು, ವೈದ್ಯಾಧಿಕಾರಿ ಎಂಟು ತಿಂಗಳಲ್ಲಿ ಆರೋಗ್ಯ ಕಾರ್ಡ್​​ಗೆ ಸಹಿ ಮಾಡುವ ವಿಧಾನವಿದೆ. ಆದರೆ, ಖಾಸಗಿ ವಾಹಿನಿ ವರದಿಗಾರ ಎಂದು ಸುಳ್ಳು ಹೇಳಿ ಆರೋಗ್ಯ ಕಾರ್ಡ್​ಗೆ ಮೊದಲೇ ಸಹಿ ಹಾಕುವಂತೆ ಈತ ಒತ್ತಾಯಿಸಿದ್ದಾನೆ. ಅಲ್ಲದೆ ಓರ್ವ ವರದಿಗಾರನ ಬೇಡಿಕೆಗೆ ಆರೋಗ್ಯ ಸಿಬ್ಬಂದಿ ಪ್ರತಿಕ್ರಿಯಿಸಲು ಸಾಧ್ಯವಾಗದಿದ್ರೆ, ಸಾಮಾನ್ಯ ಜನರಿಗೆ ಯಾವ ರೀತಿ ಪ್ರತಿಕ್ರಿಯಿಸುತ್ತೀರಿ ಎಂದು ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಪ್ರಾಥಮಿಕ ಆರೋಗ್ಯ ಕೇಂದ್ರ ಸಿಬ್ಬಂದಿಗೆ ವ್ಯಕ್ತಿಯೊಬ್ಬನಿಂದ ಧಮ್ಕಿ..

ಈ ಸಂದರ್ಭ ಆರೋಪಿಯು ಪಾನಮತ್ತನಾಗಿದ್ದ ಎಂದು ತಿಳಿದು ಬಂದಿದೆ. ಆರೋಪಿಯ ವಿರುದ್ಧ ಪ್ರಾಥಮಿಕ ಆರೋಗ್ಯ ಕೇಂದ್ರ ಸಿಬ್ಬಂದಿ ಕಾವೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ‌.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.