ಕಡಬ (ದಕ್ಷಿಣ ಕನ್ನಡ): ನಾಪತ್ತೆಯಾಗಿದ್ದ ವಿವಾಹಿತ ಮಹಿಳೆಯೊಬ್ಬಳು ಪ್ರಿಯಕರನೊಂದಿಗೆ ಪತ್ತೆಯಾದ ಘಟನೆ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೋಡಿಂಬಾಳ ಗ್ರಾಮದ ದಾಸರ ಗುಡ್ಡೆ ಗ್ರಾಮದ ನಿವಾಸಿ ಬಾಬು ಎಂಬುವರ ಪತ್ನಿ ಸೋಮವಾರದಂದು ನಾಪತ್ತೆಯಾಗಿದ್ದಳು. ಈ ಕುರಿತು ಪತಿ ಕಡಬ ಠಾಣೆಗೆ ದೂರು ನೀಡಿದ್ದರು.
ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೊಯಿಲ ಸಮೀಪದ ಸಂಪಡ್ಕ ಎಂಬಲ್ಲಿ ಮಹಿಳೆ ಹಾಗೂ ಆಕೆಯ ಪ್ರಿಯಕರನನ್ನು ಪತ್ತೆ ಹಚ್ಚಿ ಠಾಣೆಗೆ ಕರೆತಂದಿದ್ದಾರೆ.
ಈ ವೇಳೆ ಮಹಿಳೆಯು ತಾನು ತನ್ನ ಪ್ರಿಯಕರನೊಂದಿಗೆ ಜೀವನ ನಡೆಸುವುದಾಗಿ ಹೇಳಿಕೆ ನೀಡಿದ ಕಾರಣದಿಂದ ಆಕೆಯನ್ನು ಪೊಲೀಸರು ಪ್ರಿಯಕರನೊಂದಿಗೆ ಕಳುಹಿಸಿದ್ದಾರೆ.