ETV Bharat / state

ಕೊರೊನಾ ವಾರಿಯರ್ಸ್ ಗುರುತಿಸಿದ ಅಬ್ಬಕ್ಕ ಸಮಿತಿಯ ಗೌರವ ಇಮ್ಮಡಿ - ullala

ಕೋವಿಡ್ ವಾರಿಯರ್ಸ್ ನೆಲೆಯಲ್ಲಿ ಉಳ್ಳಾಲ ನಗರಸಭಾ ಸದಸ್ಯರು, ಪತ್ರಿಕಾ, ದೃಶ್ಯ ಮಾಧ್ಯಮ, ಅಬ್ಬಕ್ಕ ವನಿತಾ ವಾರಿಯರ್ಸ್, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು, ನಗರಸಭಾ ಪೌರ ಕಾರ್ಮಿಕರನ್ನು ಗೌರವಿಸಲಾಯಿತು..

ullala
ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ
author img

By

Published : Sep 6, 2020, 10:26 PM IST

ಉಳ್ಳಾಲ : ಅನ್ಯರ ಆರೋಗ್ಯ ರಕ್ಷಣೆಯ ಪಣತೊಟ್ಟು ಕೆಲಸ ಮಾಡಿದ ಕೊರೊನಾ ವಾರಿಯರ್ಸ್​ಗಳನ್ನು ಗುರುತಿಸಿ ಅಭಿನಂದಿಸಿದ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಗೌರವ ಇಮ್ಮಡಿಯಾಗಿದೆ ಎಂದು ಮಂಗಳೂರು ವಿವಿ ಕುಲಪತಿ ಪ್ರೊ.ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ ಅಭಿಪ್ರಾಯಪಟ್ಟರು.

ಕೊರೊನಾ ವಾರಿಯರ್ಸ್​ಗೆ ಅಭಿನಂದನೆ..

ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಮತ್ತು ಕೆಆರ್‌ಇಸಿ/ಎನ್‍ಐಟಿಕೆ-76 ಸಹಯೋಗದಲ್ಲಿ ಕೊರೊನಾ ವಾರಿಯರ್ಸ್​ಗೆ ಭಾನುವಾರ ಉಳ್ಳಾಲ ನಗರಸಭೆಯ ಮಹಾತ್ಮ ಗಾಂಧಿ ರಂಗಮಂದಿರದಲ್ಲಿ ನಡೆದ ಸೇವಾಭಿನಂದನೆಯಲ್ಲಿ ಅವರು ಮಾತನಾಡಿದರು. ನನ್ನ ಆರೋಗ್ಯ ನನ್ನಲ್ಲಿಲ್ಲ, ಇತರರ ಆರೋಗ್ಯವನ್ನು ಅವಲಂಬಿಸಿದೆ ಎಂಬ ಕಾಲಘಟ್ಟದಲ್ಲಿ ನಾವಿಂದು ಜೀವಿಸುತ್ತಿದ್ದೇವೆ. ಆದಷ್ಟು ಬೇಗನೆ ಸಮಾಜವು ಕೋವಿಡ್ ಮುಕ್ತವಾಗಲಿ ಎಂದು ಆಶಿಸಿದರು.

ಕೋವಿಡ್ ವಾರಿಯರ್ಸ್ ನೆಲೆಯಲ್ಲಿ ಉಳ್ಳಾಲ ನಗರಸಭಾ ಸದಸ್ಯರು, ಪತ್ರಿಕಾ, ದೃಶ್ಯ ಮಾಧ್ಯಮ, ಅಬ್ಬಕ್ಕ ವನಿತಾ ವಾರಿಯರ್ಸ್, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು, ನಗರಸಭಾ ಪೌರ ಕಾರ್ಮಿಕರನ್ನು ಗೌರವಿಸಲಾಯಿತು. ನಿವೃತ್ತ ಶಿಕ್ಷಕರಾದ ಎಂ. ವಾಸುದೇವ ರಾವ್, ಡಿ ಎನ್ ರಾಘವ, ಸರೋಜ ಕುಮಾರಿ, ಲೀಲಾವತಿ ಎಮ್ ಹಾಗೂ ಆನಂದ ಕೆ ಅಸೈಗೋಳಿ ಅವರನ್ನು ಸನ್ಮಾನಿಸಲಾಯಿತು.

ದೆಹಲಿ ಐಟಿಸಿ ಹೋಟೆಲ್ಸ್​ನ ನಿವೃತ್ತ ಎಕ್ಸಿಕ್ಯೂಟಿವ್ ವೈಸ್ ಪ್ರೆಸಿಡೆಂಟ್ ಕೆಆರ್‌ಇಸಿ/ಎನ್‌ಐಟಿಕೆ -76ನ ಆಲ್ವಿನ್ ನೊರೊನ್ಹಾ, ಎಂಸಿಎಫ್​ನ ನಿವೃತ್ತ ಜನರಲ್ ಮ್ಯಾನೇಜರ್ ಕೆಆರ್‌ಇಸಿ/ಎನ್‌ಐಟಿಕೆ-65ನ ನಿರ್ಮಲ್‌ಕುಮಾರ್ ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.