ETV Bharat / state

ಮೊಬೈಲ್​ ಬಾಕ್ಸ್​ನಲ್ಲಿ ಪೇಪರ್ ಉಂಡೆ; ಬೆಂಗಳೂರು ಮೂಲದ ಕಂಪನಿಯಿಂದ ಉಂಡೆನಾಮ!! - fake call news

ಬಹುಮಾನವಾಗಿ ಮೊಬೈಲ್ ಬಂದಿದೆ ಎಂದು ಫೋನ್ ಕರೆ ಬಂದ ಹಿನ್ನೆಲೆ ಅದನ್ನು ನಂಬಿ ಮೋಸ ಹೋದ ಯುವಕನೋರ್ವ ಸಾವಿರಾರು ರೂಪಾಯಿ ಕಳೆದುಕೊಂಡ ಘಟನೆ ಕಡಬದಲ್ಲಿ ನಡೆದಿದೆ.

Kadaba
Kadaba
author img

By

Published : Sep 26, 2020, 3:48 PM IST

ಕಡಬ(ದ.ಕ): ಕಂಪನಿಯ ಪ್ರಚಾರಾರ್ಥವಾಗಿ ಮೊಬೈಲ್ ನಂಬರ್​ಗಳ ಮೂಲಕ ಅದೃಷ್ಠಶಾಲಿಗಳ ಆಯ್ಕೆಯಲ್ಲಿ ನಿಮ್ಮ ಮೊಬೈಲ್ ನಂಬರಿಗೆ ಬಹುಮಾನದ ರೂಪದಲ್ಲಿ ಸ್ಮಾರ್ಟ್ ಮೊಬೈಲ್ ಹಾಂಡ್‍ಸೆಟ್ ಲಭಿಸಿದೆ ಎಂದು ಗ್ರಾಹಕರನ್ನು ನಂಬಿಸಿ ಪ್ಲಾಸ್ಟಿಕ್ ಸರ ಹಾಗೂ ಪೇಪರ್ ಕಟ್ಟು ಕಳುಹಿಸಿದ ಘಟನೆ ಕಡಬ ತಾಲೂಕಿನ ಅಲಂಕಾರಿನಿಂದ ವರದಿಯಾಗಿದೆ.

ತಾಲೂಕಿನ ಪೆರಾಬೆ ಗ್ರಾಮದ ಪೂಂಜ ನಿವಾಸಿ ಯುವಕನಿಗೆ ವಾರದ ಹಿಂದೆ ಒಂದು ಮೊಬೈಲ್ ಕರೆ ಬಂದಿತ್ತು. ಗುಡ್​ವಿಲ್ ಎಂಟರ್ಪ್ರೈಸಸ್ ಬೆಂಗಳೂರು ಎಂಬ ಕಂಪನಿಯಿಂದ ಕರೆ ಮಾಡುತ್ತಿದ್ದೇವೆ. ಕಂಪನಿಯ ಪ್ರಚಾರಾರ್ಥವಾಗಿ ಮೊಬೈಲ್ ನಂಬರ್ ಮೂಲಕ ಅದೃಷ್ಟಶಾಲಿಗಳ ಆಯ್ಕೆ ಪ್ರಕ್ರಿಯೆಯನ್ನು ನಮ್ಮ ಕಂಪನಿ ನಡೆಸುತ್ತಿದೆ. ಈ ಆಯ್ಕೆಯಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯು ಸ್ಮಾರ್ಟ್​​​​ಫೋನ್​ ಬಹುಮಾನವನ್ನು ಗೆದ್ದುಕೊಂಡಿದೆ. ಬಹುಮಾನವನ್ನು ಅಂಚೆಯಲ್ಲಿ ವಿಪಿಪಿ ಪಾರ್ಸೆಲ್‍ನ ಮೂಲಕ ನಿಮ್ಮ ವಿಳಾಸಕ್ಕೆ ಕಳುಹಿಸಿಕೊಡಲಾಗುವುದು. ಪಾರ್ಸೆಲ್‍ನ ವೆಚ್ಚವಾಗಿ ರೂ.1,425ನ್ನು ಸ್ಥಳೀಯ ಅಂಚೆ ಕಚೇರಿಯಲ್ಲಿ ನೀವು ಪಾವತಿಸಿ ಬಹುಮಾನ ಪಡೆದುಕೊಳ್ಳಿ ಎಂದು ಕಂಪನಿಯ ಯುವತಿಯೋರ್ವಳು ಮಾತನಾಡಿ ಯುವಕನ ಪೂರ್ಣ ವಿಳಾಸ ಪಡೆದು ಕೊಂಡಿದ್ದಳು.

Kadaba
ಬೆಂಗಳೂರು ಮೂಲದ ಕಂಪನಿಯಿಂದ ಬಂದ ಪಾರ್ಸಲ್​

ಕಂಪನಿ ಸಿಬ್ಬಂದಿಯ ಮಾತು ನಂಬಿದ ಯುವಕ ವಿಳಾಸ ನೀಡಿ ಪಾರ್ಸೆಲ್‍ಗಾಗಿ ಕಾಯುತ್ತಿದ್ದ. ಸೆ.24 ಗುರುವಾರ ಯುವಕನ ಅದೃಷ್ಟ ಖುಲಾಯಿಸಿತು. ಪಾರ್ಸೆಲ್ ಬಂದಿರುವ ಬಗ್ಗೆ ಆಲಂಕಾರು ಅಂಚೆ ಕಚೇರಿಯಿಂದ ಮಾಹಿತಿ ಸಿಕ್ಕಿದ ಕೂಡಲೇ ಹಣ ಹೊಂದಾಣಿಕೆ ಮಾಡಿಕೊಂಡು ಪಾರ್ಸೆಲ್ ಪಡೆದುಕೊಳ್ಳಲು ಆಲಂಕಾರು ಅಂಚೆ ಕಚೇರಿಗೆ ಧಾವಿಸಿ ಬಂದಿದ್ದ. ಪಾರ್ಸೆಲ್‍ಗೆ 1,425 ರೂ.ಯನ್ನು ಅಂಚೆ ಕಚೇರಿಯಲ್ಲಿ ಪಾವತಿಸಿ ಪಾರ್ಸೆಲ್ ಬಿಡಿಸಿದ. ಆದರೆ, ಪಾರ್ಸೆಲ್‍ನಲ್ಲಿ ಒಂದು ಪ್ಲಾಸ್ಟಿಕ್ ಸರ, ಮತ್ತು ಪೇಪರ್​ನಲ್ಲಿ ಸುತ್ತಿದ ಬಾಕ್ಸ್‌‌‌ ದರ್ಶನವಾಯಿತು. ಮೊಬೈಲ್‍ನ ಆಸೆಯಲ್ಲಿದ್ದ ಪ್ಯಾಕ್ ತೆರೆದು ನೋಡಿದರೆ ಮೊಬೈಲ್‍ನ ಬದಲು ಪೇಪರ್ ಪ್ಯಾಕ್ ಅದಾಗಿತ್ತು. ಮಾತ್ರವಲ್ಲದೇ ಪ್ಯಾಕ್‍ನಲ್ಲಿದ್ದ ಪ್ಲಾಸ್ಟಿಕ್ ಸರವು ತುಂಡಾಗಿತ್ತು. ಈ ಬಗ್ಗೆ ಕಂಪನಿ ದೂರವಾಣಿ ಮುಖಾಂತರ ಸಂಪರ್ಕಿಸಿದಾಗ ಪಾರ್ಸೆಲ್ ತಪ್ಪಾಗಿ ಬಂದಿರುತ್ತದೆ. ನಿಮಗೆ ಕಳುಹಿಸಬೇಕಾದ ಪಾರ್ಸೆಲ್ ಇಲ್ಲೇ ಇದೆ ಎಂದು ತಿಳಿಸಿ ಕರೆ ಕಡಿತಗೊಳಿಸಿದರು. ಬಳಿಕ ಸಂಪರ್ಕಕ್ಕೆ ಪ್ರಯತ್ನಿಸಿದರೂ ಕರೆ ಸ್ವೀಕರಿಸಲಿಲ್ಲ.

ಇದೀಗ ಮೊಬೈಲ್ ಸ್ವಿಚ್ಡ್​ ಆಫ್ ಆಗಿದೆ. ಒಂದು ವರ್ಷದ ಹಿಂದೆ ಇದೇ ಮಾದರಿಯ ಅನಾಮಧೇಯ ಪಾರ್ಸೆಲ್‍ಗಳು ಹೆಚ್‍ಹೆಚ್‍ಎಂ ಮಾರ್ಕೆಟಿಂಗ್ ಬಿ-24-7 ಮೈನ್‍ರೋಡ್ ಪೀಣ್ಯ 2ನೇ ಸ್ಟೇಜ್ ಬೆಂಗಳೂರು ಈ ವಿಳಾಸದಿಂದ ಬರುತ್ತಿವೆ. ಸಾರ್ವಜನಿಕರು ಎಚ್ಚರದಿಂದಿರಿ ಮತ್ತು ಯಾವುದೇ ಮೊಬೈಲ್ ಕರೆಗಳಿಗೆ ಮೋಸ ಹೋಗದಿರಿ ಎಂದು ಮಾಧ್ಯಮಗಳು ಎಚ್ಚರಿಸಿದ್ದವು. ಆದರೆ ಈ ವರ್ಷವೂ ಗುಡ್ ವಿಲ್ ಎಂಟರ್ಪ್ರೈಸಸ್ ಬೆಂಗಳೂರು ಎಂಬ ಕಂಪನಿಯ ವಿಳಾಸ ಹೇಳಿ ಕರೆ ಮಾಡಿ ಸಾರ್ವಜನಿಕರನ್ನು ಮೋಸಗೊಳಿಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.