ದಕ್ಷಿಣಕನ್ನಡ : ಸುಳ್ಯ ಹಾಗೂ ಕಡಬ ತಾಲೂಕುಗಳಲ್ಲಿ ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೊಳಗಾದವರಿಗೆ ಸುಳ್ಯ ಶಾಸಕರ ವಾರ್ ರೂಂ ಮತ್ತು ಸೇವಾ ಭಾರತಿ ಸುಳ್ಯ ನೇತೃತ್ವದಲ್ಲಿ ಈವರೆಗೂ ಒಟ್ಟು 23,300 ಆಹಾರದ ಕಿಟ್ಗಳನ್ನ ವಿತರಣೆ ಮಾಡಲಾಗಿದೆ ಎಂದು ಶಾಸಕ ಎಸ್.ಅಂಗಾರ ಹೇಳಿದ್ದಾರೆ.
ಸುಳ್ಯ ಶ್ರೀ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ಪತ್ರಕರ್ತರಿಗೆ ಮತ್ತು ಗೃಹರಕ್ಷಕ ದಳದ ಸಿಬ್ಬಂದಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಿ ಮಾತನಾಡಿದ ಶಾಸಕರು, ಸಂಸದರ ವಾರ್ ರೂಂ ಮೂಲಕವೂ ಕಿಟ್ಗಳು ಬಂದಿವೆ. ವಿವಿಧ ಸಂಘ ಸಂಸ್ಥೆಗಳು, ದೇವಸ್ಥಾನಗಳು ಮತ್ತು ದಾನಿಗಳು ಕಿಟ್ ವಿತರಣೆಗೆ ಕೈ ಜೋಡಿಸಿದ್ದಾರೆ.
ಮುಂದಿನ ದಿನಗಳಲ್ಲಿ ಆಹಾರ ಕೊರತೆ ಇರುವವರನ್ನು ಗುರುತಿಸಿ,ಅವರಿಗೆ ಕಿಟ್ ವಿತರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದರು.