ETV Bharat / state

ಮಂಗಳೂರಲ್ಲಿ ಕಾರುಗಳ ಗಾಜು ಒಡೆದು ಸರಣಿ ಕಳ್ಳತನ: ಯುಪಿ ಮೂಲದ ಆರೋಪಿಗಳಿಗಾಗಿ ಶೋಧ - ಮಂಗಳೂರು ಕ್ರೈಮ್​,

ನಗರದ ವಿವಿಧೆಡೆ ಕಾರಿನ ಗಾಜು ಒಡೆದು ಕಳ್ಳತನ ಮಾಡುವ ತಂಡ ಸಕ್ರಿಯವಾಗಿದೆ. ಶನಿವಾರ ನಗರದಲ್ಲಿ ಈ ಕೃತ್ಯ ಎಸಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಕದ್ದೊಯ್ದಿದ್ದಾರೆ.

a-team-of-thieves-targeted-cars-and-robbed-several-items
ನಗರದ ವಿವಿಧೆಡೆ ಕಾರಿನ ಗಾಜು ಒಡೆದು ಸರಣಿ ಕಳ್ಳತನ
author img

By

Published : Aug 8, 2021, 7:31 AM IST

ಮಂಗಳೂರು: ಉತ್ತರ ಭಾರತ ಮೂಲದವರು ಎನ್ನಲಾದ ಗುಂಪೊಂದು ಕಾರುಗಳ ಗಾಜು ಒಡೆದು ನಗರದ ಹಲವೆಡೆ ಸರಣಿ ಕಳ್ಳತನ ನಡೆಸಿರುವ ಘಟನೆ ನಡೆದಿದೆ. ಶನಿವಾರ ಬೆಳಗಿನ ಹೊತ್ತು ಕಾರುಗಳ ಟಾರ್ಗೆಟ್ ಮಾಡಿ ಗಾಜು ಒಡೆದು ಲಕ್ಷಾಂತರ ಮೌಲ್ಯದ ಸೊತ್ತುಗಳನ್ನು ಕದ್ದೊಯ್ದಿದ್ದಾರೆ.

ನಗರದ ಉರ್ವಸ್ಟೋರ್, ಬಂದರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ನಡೆಸಿರುವ ತಂಡ, ಕಾರಿನ ಗಾಜು ಒಡೆದು ಲ್ಯಾಪ್​ಟಾಪ್​​​, ಐಫೋನ್ ಮತ್ತು ಬ್ಯಾಂಕ್ ಚೆಕ್​​​ ಬುಕ್​ ಕಳವು ಮಾಡಿ ಪರಾರಿಯಾಗಿದ್ದಾರೆ. ಇದಾದ ಬಳಿಕ ಬಲ್ಮಠದಲ್ಲಿ ಕಾರೊಂದರ ಗ್ಲಾಸ್ ಒಡೆದು 40 ಸಾವಿರ ನಗದು ಎಗರಿಸಿ ಪರಾರಿಯಾಗಿದೆ. ಇದೇ ರೀತಿ ನಗರದ ನಾಲ್ಕು ಕಡೆಗಳಲ್ಲಿ ತಂಡ ಕೃತ್ಯವೆಸಗಿದೆ ಎಂದು ತಿಳಿದುಬಂದಿದೆ.

ಸದ್ಯ ಈ ಕೃತ್ಯದಲ್ಲಿ ಭಾಗಿಯಾದವರ ಶೋಧಕಾರ್ಯದಲ್ಲಿ ಪೊಲೀಸರು ತೊಡಗಿದ್ದು, ನಗರದ ಜನತೆ ಎಚ್ಚರ ವಹಿಸಬೇಕು ಎಂದು ಇಲಾಖೆ ಸೂಚಿಸಿದೆ.

ಓದಿ: ಅಕ್ರಮವಾಗಿ ತಿಮಿಂಗಿಲದ ವಾಂತಿ ಸಾಗಣೆ ಮಾಡುತ್ತಿದ್ದ ನಾಲ್ವರ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.