ETV Bharat / state

ಕುಕ್ಕೆ ಸುಬ್ರಹ್ಮಣ್ಯ: ಅಸ್ವಸ್ಥಗೊಂಡ ಕಾಡಾನೆ ಸಾವು - ಸುಬ್ರಹ್ಮಣ್ಯ ವಲಯ ಅಧಿಕಾರಿ ರಾಘವೇಂದ್ರ

ಅಸ್ವಸ್ಥಗೊಂಡು ಸಂಚಾರ ಮಾಡುತ್ತಿದ್ದ ಕಾಡಾನೆ ಸಾವನ್ನಪ್ಪಿದೆ.

a sick wild elephant
ಕಾಡಾನೆ
author img

By

Published : Apr 28, 2023, 10:12 AM IST

Updated : Apr 28, 2023, 12:39 PM IST

ಸಾವನ್ನಪ್ಪಿರುವ ಕಾಡಾನೆ ದೃಶ್ಯ

ಸುಬ್ರಹ್ಮಣ್ಯ(ದಕ್ಷಿಣ ಕನ್ನಡ): ಹಲವು ದಿನಗಳಿಂದ ಅಸ್ವಸ್ಥಗೊಂಡು ಸಂಚಾರ ಮಾಡುತ್ತಿದ್ದ ಕಾಡಾನೆ ಕೊನೆಗೂ ಮೃತಪಟ್ಟಿದೆ. ಸುಬ್ರಹ್ಮಣ್ಯದ ಕೆಂಜಾಳ, ಎರ್ಮಾಯಿಲ್ ಪರಿಸರದಲ್ಲಿ ಈ ಆನೆ ಸಂಚಾರ ಮಾಡುತ್ತಿತ್ತು. ಗುರುವಾರ ಈ ಕಾಡಾನೆ ಸಂಪೂರ್ಣವಾಗಿ ನಿತ್ರಾಣವಾದ ಸ್ಥಿತಿಯಲ್ಲಿ ಚೇರು ಎಂಬಲ್ಲಿ ಹಳ್ಳವೊಂದರಲ್ಲಿ ಪತ್ತೆಯಾಗಿತ್ತು.

ಅರಣ್ಯ ಅಧಿಕಾರಿಗಳು ಈ ಆನೆ ನೀರು ಸಹಾ ಕುಡಿಯುತ್ತಿಲ್ಲ ಎಂಬುದಾಗಿ ಮಾಹಿತಿ ನೀಡಿದ್ದರು. ಮತ್ತು ಈ ಕಾಡಾನೆ ವಯೋಸಹಜ ತೊಂದರೆಗಳಿಂದ ಬಳಲುತ್ತಿರುವ ಶಂಕೆ ವ್ಯಕ್ತಪಡಿಸಿದ್ದರು. ಈ ಆನೆಯ ಹಲ್ಲುಗಳು ಉದುರಿರುವುದು ಗಮನಕ್ಕೆ ಬಂದಿದೆ. ಈ ಕಾರಣದಿಂದಾಗಿ ಆನೆ ಆಹಾರ ಸೇವಿಸುವಾಗ ಜೀರ್ಣವಾಗದೇ ವಾಂತಿ ಮಾಡುತ್ತಿರಬಹುದು ಎನ್ನಲಾಗಿತ್ತು.

ಆದರೆ, ನಿನ್ನೆ ರಾತ್ರಿ ಸುಮಾರು ಹನ್ನೆರಡು ಗಂಟೆಗಳ ಸುಮಾರಿಗೆ ಇಲ್ಲಿನ ಬಗ್ಪುಣಿ ಎಂಬಲ್ಲಿ ಕಾಡಾನೆಯ ಮೃತದೇಹ ಪತ್ತೆಯಾಗಿದೆ. ಈ ಆನೆಗೆ ಅಂದಾಜು 50 ರಿಂದ 55 ವರ್ಷ ವಯಸ್ಸು ಇರಬಹುದೆಂದು ಅಂದಾಜಿಸಲಾಗಿದೆ. ಅರಣ್ಯ ಅಧಿಕಾರಿಗಳು, ವೈದ್ಯರು ಆಗಮಿಸಿದ ನಂತರದಲ್ಲಿ ಮಹಜರು ಸೇರಿದಂತೆ ಮುಂದಿನ ಕ್ರಮಗಳು ನಡೆಯಲಿದೆ.

ಇದನ್ನೂ ಓದಿ: ಬೆಳ್ತಂಗಡಿ ಸೋಮಾವತಿ ನದಿಗೆ ದುಷ್ಕರ್ಮಿಗಳಿಂದ ವಿಷಪ್ರಾಶನ , ಸಾವಿರಾರು ಮೀನುಗಳ ಮಾರಣಹೋಮ

ಹಳ್ಳದಲ್ಲಿ ಪತ್ತೆಯಾಗಿತ್ತು ಅಸ್ವಸ್ಥ ಕಾಡಾನೆ: ಮೃತಪಟ್ಟಿರುವ ಕಾಡಾನೆ ಈ ಮೊದಲು ಅಸ್ವಸ್ಥಗೊಂಡ ರೀತಿಯಲ್ಲಿ ಕಂಡು ಬಂದಿತ್ತು. ಅದರ ರಕ್ಷಣೆಗಾಗಿ ಅರಣ್ಯಧಿಕಾರಿಗಳು, ವೈದ್ಯಾಧಿಕಾರಿಗಳು ಮುಂದಾಗಿದ್ದರು. ಏಪ್ರಿಲ್​ 24 ರಂದು ಸುಬ್ರಹ್ಮಣ್ಯ ಸಮೀಪದ ಚೇರು ಭಾಗದಲ್ಲಿ ಈ ಕಾಡಾನೆ ಅಸ್ವಸ್ಥಗೊಂಡ ರೀತಿಯಲ್ಲಿ ಸಂಚಾರ ಮಾಡುತ್ತಿತ್ತು. ಸಾರ್ವಜನಿಕರು ಕಾಡಾನೆಯ ಎಡಗಾಲಿಗೆ ಏನೋ ಬಲವಾದ ಗಾಯವಾದಂತೇ ಗೋಚರಿಸುತ್ತಿತ್ತು, ಆನೆಯು ನಿಧಾನಗತಿಯಲ್ಲಿ ನಡೆಯುತ್ತಿರುವ ಬಗ್ಗೆ ಮತ್ತು ತಿಂದ ಆಹಾರವನ್ನು ಜಗಿದು ಅಲ್ಲಲ್ಲೆ ಉಗಿದು ಹೋಗುತ್ತಿದೆ ಎಂಬುದಾಗಿಯೂ ಸುಬ್ರಹ್ಮಣ್ಯ ವಲಯ ಅಧಿಕಾರಿ ರಾಘವೇಂದ್ರ ಅವರಿಗೆ ಜನರು ತಿಳಿಸಿದ್ದರು.

ಪತ್ತೆಯಾದ ತಕ್ಷಣವೇ ಚಿಕಿತ್ಸೆ ನೀಡುತ್ತೇವೆ ಎಂದಿದ್ದರು ವೈದ್ಯರು: ಜನರು ಮಾಹಿತಿ ನೀಡಿದ ಬಳಿಕ ಅರಣ್ಯಾಧಿಕಾರಿಗಳು, ಕಾಡಾನೆ ಪತ್ತೆ ಕಾರ್ಯದಲ್ಲಿ ತೊಡಗಿದ್ದರು. ಕಾಡಾನೆ ಪತ್ತೆಯಾದ ತಕ್ಷಣವೇ ಚಿಕಿತ್ಸೆ ನೀಡಲಾಗುತ್ತದೆ ಎಂದು ವೈದ್ಯರು ಹೇಳಿದ್ದರು. ಇನ್ನು ಕಾಡಾನೆ ದಟ್ಟ ಕಾಡಲ್ಲಿ ಇದ್ದಿದ್ದರಿಂದ ಪತ್ತೆ ಕಾರ್ಯಕ್ಕೆ ಅಡಚಣೆ ಆಗಿತ್ತು. ಇದರಿಂದ ವೈದ್ಯಕೀಯ ತಜ್ಞರಿಗೆ ಸರಿಯಾದ ಸಮಯಕ್ಕೆ ಆನೆಯನ್ನು ಹಿಡಿದು ಚಿಕಿತ್ಸೆ ನೀಡಲಾಗಲಿಲ್ಲ. ಅಲ್ಲದೇ ಆನೆಯು ಅದರ ವಯೋಸಹಜ ತೊಂದರೆಗಳಿಂದ ಬಳಲುತ್ತಿತ್ತು.

ಇದನ್ನೂ ಓದಿ: ದಕ್ಷಿಣ ಕನ್ನಡ: ಸುಬ್ರಹ್ಮಣ್ಯ ಸಮೀಪ ಅಸ್ವಸ್ಥಗೊಂಡ ಕಾಡಾನೆ ಸಂಚಾರ: ವಿಡಿಯೋ

ಇದನ್ನೂ ಓದಿ: ಅಸ್ವಸ್ಥಗೊಂಡ ಕಾಡಾನೆ ಹಳ್ಳದಲ್ಲಿ ನಿತ್ರಾಣ ಸ್ಥಿತಿಯಲ್ಲಿ ಪತ್ತೆ

Last Updated : Apr 28, 2023, 12:39 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.