ಮಂಗಳೂರು: ಅಂಗಡಿಯೊಂದರಲ್ಲಿ ಮಲ್ಲಿಗೆ ಹೂ ಕಳವು ಮಾಡಿದ್ದ ಕಳ್ಳನ ಕೃತ್ಯದ ಸಿಸಿಟಿವಿ ದೃಶ್ಯಾವಳಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಮಳಿಗೆ ಮಾಲೀಕ ಹರಿಬಿಟ್ಟಿದ್ದಾನೆ. 'ಈತ ಕಂಡರೆ ಸುಳಿವು ಕೊಡುವಂತೆ' ಮನವಿ ಮಾಡಿಕೊಂಡಿದ್ದಾನೆ.
ನಗರದ ಕದ್ರಿ ಮಲ್ಲಿಕಟ್ಟೆಯಲ್ಲಿರುವ ಎಸ್.ಎನ್. ಪ್ಲವರ್ ಹೂವಿನ ಅಂಗಡಿಯಲ್ಲಿ ಮಲ್ಲಿಗೆ ಹೂವಿನ ಅಟ್ಟಿಯನ್ನು ರಾತ್ರಿ ವೇಳೆ ಕಳ್ಳನೋರ್ವ ಕದಿಯುತ್ತಿರುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಈ ಸಿಸಿಟಿವಿ ದೃಶ್ಯಾವಳಿಗಳ್ನು ವೈರಲ್ ಮಾಡಿರುವ ಅಂಗಡಿ ಮಾಲೀಕ, 'ನಿತ್ಯ ಇದೇ ರೀತಿಯಲ್ಲಿ ಮಲ್ಲಿಗೆ ಹೂವಿನ ಅಟ್ಟಿಗಳು ಕಳು ಆಗುತ್ತಿವೆ. ಈತನನ್ನು ಕಂಡಲ್ಲಿ 9845524203 ಸಂಖ್ಯೆಗೆ ಕರೆ ಮಾಡಿ' ಎಂದು ಆಡಿಯೋ ವೈರಲ್ ಮಾಡಿದ್ದಾರೆ.