ETV Bharat / state

ನಾಳೆ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ

author img

By

Published : Mar 9, 2023, 4:14 PM IST

ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ಕಾರಣ ನಿಗೂಢವಾಗಿದೆ.

a second puc student commits suicide
ನಾಳೆ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಬೇಕಾಗಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ

ಬಂಟ್ವಾಳ: ನಾಳೆ ಪರೀಕ್ಷೆ ಬರೆಯಬೇಕಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಬೆಳಗ್ಗೆ ಬಂಟ್ವಾಳ ತಾಲೂಕಿನ ಬಾಳ್ತಿಲ ಎಂಬಲ್ಲಿ ನಡೆದಿದೆ. ಕಲ್ಲಡ್ಕ ಶ್ರೀರಾಮ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ವೈಷ್ಣವಿ (17) ಸಾವನ್ನಪ್ಪಿದ ಬಾಲಕಿ. ಶಿಕ್ಷಕ ದಂಪತಿಗಳಾದ ಚಂದ್ರಶೇಖರ ಮತ್ತು ಸೌಮ್ಯಾ ಅವರ ಮೂವರು ಮಕ್ಕಳಲ್ಲಿ ಮೊದಲನೆಯವಳಾದ ವೈಷ್ಣವಿ ಬೆಳಗ್ಗೆ ಸುಮಾರು 10 ಗಂಟೆಯ ಆಸುಪಾಸಿನಲ್ಲಿ ಈ ಕೃತ್ಯವೆಸಗಿದ್ದಾಗಿ ಸಂಶಯಿಸಲಾಗಿದೆ. ದಿಢೀರನೆ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಎಂಬುದು ಇನ್ನೂ ಪತ್ತೆಯಾಗಿಲ್ಲ.

ವೈಷ್ಣವಿಯ ತಾಯಿ ಸೌಮ್ಯಾ ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಶಿಕ್ಷಕಿಯಾಗಿದ್ದರೆ, ತಂದೆ ಚಂದ್ರಶೇಖರ್​ ಅವರು ರಾಮಕುಂಜದಲ್ಲಿ ಶಿಕ್ಷಕರಾಗಿದ್ದಾರೆ. ಇವರಿಗೆ ಇಬ್ಬರು ತಂಗಿಯರಿದ್ದು, ಇಬ್ಬರೂ ಶ್ರೀರಾಮ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಪ್ರತಿಭಾನ್ವಿತ ವಿದ್ಯಾರ್ಥಿನಿಯಾದ ವೈಷ್ಣವಿ, ಪಿಯುಸಿಯಲ್ಲಿ ಕಾಮರ್ಸ್ ಕಲಿಯುತ್ತಿದ್ದು, ಆಕೆಯ ಪರೀಕ್ಷೆ ನಾಳೆ ನಿಗದಿಯಾಗಿತ್ತು. ಪರೀಕ್ಷೆಯ ಸಿದ್ಧತೆಯಲ್ಲಿದ್ದ ವೈಷ್ಣವಿ ಬೆಳಗ್ಗೆ ತಾಯಿ ಜೊತೆ ಶಾಲೆಗೆ ಹೋಗಿ ಮರಳಿದ್ದಳು. ಎಂದಿನಂತೆ ತಾಯಿ ಮಗಳಿಗೆ ಕರೆ ಮಾಡಿದ್ದು, ಹಲವು ಕರೆಗಳಾದರೂ ಸ್ವೀಕರಿಸಿರಲಿಲ್ಲ.

ಈ ಹಿನ್ನೆಲೆಯಲ್ಲಿ ನೆರೆಮನೆಯವರಿಗೆ ತಾಯಿ ಕರೆ ಮಾಡಿದ್ದಾರೆ. ನೆರೆಮನೆಯವರು ಮನೆಗೆ ತೆರಳಿದಾಗ ವಿಷಯ ಗೊತ್ತಾಗಿದೆ. ಕೂಡಲೇ ಮನೆಯವರಿಗೆ ವಿಷಯ ತಿಳಿಸಿದ್ದು, ಬಾಲಕಿಯನ್ನು ಕಲ್ಲಡ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅದಾಗಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಬಾಲಕಿ ಯಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಕ್ಕೆ ನಿಖರ ಕಾರಣ ಇನ್ನಷ್ಟೇ ತಿಳಿದು ಬರಬೇಕಾಗಿದೆ.

ಇವರು ಕಾಮರ್ಸ್ ವಿಭಾಗದಲ್ಲಿ ಓದುತ್ತಿದ್ದ ಕಾರಣ, ಇಂಜಿನಿಯರ್, ವೈದ್ಯೆಯಾಗುವ ಒತ್ತಡಗಳು, ಸಿಇಟಿಯಂಥ ಕೋಚಿಂಗ್​ ಒತ್ತಡಗಳು ಇವರಿಗೆ ಇರಲಿಲ್ಲ. ಜತೆಗೆ ತಾನಾಯಿತು. ಮನೆಯಾಯಿತು ಎಂಬಂತೆ ಹೋಗಿ ಬರುತ್ತಿದ್ದ ಇವರು ದಿಢೀರನೇ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಕಾರಣ ನಿಗೂಢವಾಗಿದೆ.

ಮನೆ ಬೀಗ ತೆಗೆದು ನಗ, ನಗದು ಕಳ್ಳತನ: ಒಂದು ಕಡೆ ಆತ್ಮಹತ್ಯೆ ಸುದ್ದಿಯಾದರೆ, ಮತ್ತೊಂದು ಕಡೆ ಕಳ್ಳತನದ ವರದಿಯಾಗಿದೆ. ಮನೆಯ ಬೀಗ ತೆಗೆದು ಲಕ್ಷಾಂತರ ರೂ ಮೌಲ್ಯದ ಆಭರಣ ಹಾಗೂ ನಗದು ಕಳವು ಮಾಡಿದ ಘಟನೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಇರಾದಲ್ಲಿ ನಡೆದಿದೆ.

ಒಟ್ಟು 3,11,550 ರೂ ಮೌಲ್ಯದ ಚಿನ್ನಾಭರಣ ಕಳವಾಗಿದ್ದು, ಸಣ್ಣ ಪ್ಲಾಸಿಕ್ ಬಾಕ್ಸ್​ನಲ್ಲಿ ಇಟ್ಟಿದ್ದ 10 ಗ್ರಾಂ ತೂಕದ ಕಿವಿಯ ಬೆಂಡೋಲೆ, 8 ಗ್ರಾಂ ತೂಕದ 3 ಉಂಗುರಗಳು, 20 ಗ್ರಾಂ ತೂಕದ ಹವಳದ ಸರ ಹಾಗೂ 35 ಗ್ರಾಂ ತೂಕದ ಕರಿಮಣಿ ಸರ, 20 ಗ್ರಾಂ ತೂಕದ 2 ಕೈಬಳೆಗಳು ಕಳವಾಗಿವೆ. ಒಟ್ಟು 93 ಗ್ರಾಂ ತೂಕದ ಚಿನ್ನಾಭರಣಗಳು ಕಳವಾಗಿವೆ. ಮನೆಯಲ್ಲಿ ಯಾರೂ ಇಲ್ಲದಾಗ ಹಗಲು ಹೊತ್ತಿನಲ್ಲಿ ಮನೆಯಿಂದ ಚಿನ್ನಾಭರಣ ಕಳವಾಗಿದೆ ಎಂದು ಗ್ರಾಮಾಂತರ ಪೊಲೀಸ್ ಠಾಣೆಗೆ ಮನೆಯ ಮಾಲೀಕರು ದೂರು ನೀಡಿದ್ದಾರೆ.

ಮನೆಯಲ್ಲಿರುವವರು ಕೆಲಸಕ್ಕೆಂದು ಬೆಳಗ್ಗೆ ಹೋಗಿದ್ದರು. ಈ ಸಂದರ್ಭ ಮನೆಗೆ ಬೀಗ ಹಾಕಿ, ಕೀಲಿ ಕೈಯನ್ನು ಬಚ್ಚಲು ಕೋಣೆಯಲ್ಲಿರಿಸಿ ಹೋಗುತ್ತಿದ್ದರು. ಅದೇ ರೀತಿ ಬೀಗದ ಕೈಯನ್ನು ಇಟ್ಟು ಹೋಗಿದ್ದರು. ಕೆಲಸಕ್ಕೆ ಹೋಗಿದ್ದ ಪತಿ ಹಾಗೂ ಪತ್ನಿ ಸಂಜೆ ಮನೆಗೆ ಬಂದು ನೋಡಿದಾಗ ಮನೆಗೆ ಹಾಕಿದ ಬೀಗ ಹಾಕಿದ ಹಾಗೆಯೇ ಇತ್ತು. ಆದರೆ ಬೀಗ ತೆಗೆದು ಮನೆ ಒಳಗೆ ಹೋದಾಗ ಮನೆಯಲ್ಲಿ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಮಹಿಳೆಯಾಗಿ ಬದಲಾಗಿದ್ದ ಪುರುಷ ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.