ಮಂಗಳೂರು: ಪ್ರಧಾನಿ ಮೋದಿಯವರ ಬಗ್ಗೆ ವ್ಯಕ್ತಿಯೊಬ್ಬರು ಎಫ್ ಬಿಯಲ್ಲಿ ಅವಹೇಳಕಾರಿ ಪೋಸ್ಟ್ ಮಾಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸದಸ್ಯೆ ಸ್ಥಾನದಿಂದ ಆತನ ಪತ್ನಿಯನ್ನು ಪದಮುಕ್ತಗೊಳಿಸಲಾಗಿದೆ.
ಈ ಬಗ್ಗೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಪತ್ರ ಮುಖೇನ ನಫೀಸಾ ಮಿಸ್ರಿಯಾ ಅವರಿಗೆ ಅಕಾಡೆಮಿ ಸದಸ್ಯತ್ವದಿಂದ ಪದಮುಕ್ತಗೊಳಿಸಿರುವ ಬಗ್ಗೆ ಆದೇಶ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಫೇಸ್ಬುಕ್ ಪೇಜ್ನಲ್ಲಿ ಕಾಂಗ್ರೆಸ್ ಮುಖಂಡರು ಎನ್ನಲಾದ ಲುಕ್ಮಾನ್ ಅಡ್ಯಾರ್ ಅವಹೇಳನಕಾರಿ ಪೋಸ್ಟ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಆತನ ಪತ್ನಿಯನ್ನ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯೆ ಸ್ಥಾನದಿಂದ ಪದಮುಕ್ತಗೊಳಿಸಲಾಗಿದೆ. ನಫೀಸಾ ಮಿಸ್ರಿಯಾ ಅವರಿಗೆ ಅಕಾಡೆಮಿ ಪತ್ರ ಬರೆದು ಈ ವಿಷಯ ತಿಳಿಸಿದೆ.
'ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟೀಕೆಗಳಿಗೆ ಅವಕಾಶವಿದೆ. ಆದರೆ, ಪ್ರಧಾನಿಯವರ ಬಗ್ಗೆ ನಿಮ್ಮ ಪತಿ ಅತ್ಯಂತ ಕಠೋರವಾದ, ಕಾನೂನಿಗೆ ವಿರುದ್ಧವಾದ ಪೋಸ್ಟ್ ಮಾಡಿದ್ದಾರೆ. ಅಲ್ಲದೇ ದೇಶದ ಪ್ರಧಾನಿಯವರ ಸಾವನ್ನೂ ಬಯಸಿದ್ದಾರೆ. ಅಂತವರ ಪತ್ನಿಯಾದ ತಾವು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸದಸ್ಯೆಯಾಗಿ ಮುಂದುವರಿಯುವುದು ಸರಿಯಲ್ಲ. ಆದ್ದರಿಂದ ತಮ್ಮನ್ನು ತಕ್ಷಣ ಅಕಾಡೆಮಿ ನಾಮ ನಿರ್ದೇಶಿತ ಸದಸ್ಯತ್ವದಿಂದ ಪದಮುಕ್ತಗೊಳಿಸಲಾಗಿದೆ' ಎಂದು ಪತ್ರದಲ್ಲಿ ಆದೇಶಿಸಲಾಗಿದೆ.