ಸುಳ್ಯ: ಸುಳ್ಯದಿಂದ ನಾಪತ್ತೆಯಾಗಿದ್ದ ಅಸ್ಸೋಂ ಮೂಲದ ವಿವಾಹಿತ ಮಹಿಳೆಯೋರ್ವರು ಕುಂದಾಪುರದಲ್ಲಿ ಪ್ರಿಯಕರನೊಂದಿಗೆ ಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಅಸ್ಸೋಂ ಮೂಲದ ಈ ಮಹಿಳೆಯು ಜ. 25ರಂದು ಸುಳ್ಯದ ಪೈಚಾರು ಎಂಬಲ್ಲಿಂದ ತಾನಿದ್ದ ಬಾಡಿಗೆ ಮನೆಯಿಂದ ಏಕಾಏಕಿ ನಾಪತ್ತೆಯಾಗಿದ್ದಳು. ಸಂಜೆಯಾದರೂ ಮನೆಗೆ ಬಾರದ ಹಿನ್ನೆಲೆ ಆಕೆಯ ಪತಿ ಕೋಗನ್ ತಾತಿ ಎಂಬವರು ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕಳೆದ ನಾಲ್ಕು ತಿಂಗಳಿನಿಂದ ಸುಳ್ಯದ ಪೈಚಾರು ಎಂಬಲ್ಲಿರುವ ಸಂಸ್ಥೆಯೊಂದರಲ್ಲಿ ಈ ಕುಟುಂಬ ತೆಂಗಿನಕಾಯಿ ಸುಲಿಯುವ ಕೆಲಸವನ್ನು ಮಾಡಿಕೊಂಡಿತ್ತು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಪತಿ, ಪತ್ನಿ ಮತ್ತು ಮಕ್ಕಳು, ಸಂಸ್ಥೆಯವರು ನೀಡಿದ ರೂಮ್‌ನಲ್ಲಿ ವಾಸವಾಗಿದ್ದರು. ಮಹಿಳೆಯ ಪತಿ ನೀಡಿದ ದೂರಿನನ್ವಯ ತನಿಖೆ ಕೈಗೆತ್ತಿಕೊಂಡ ಸುಳ್ಯ ಪೊಲೀಸರು ಮಹಿಳೆಯ ಬಳಿಯಿದ್ದ ಮೊಬೈಲ್ ನೆಟ್ ವರ್ಕ್ ಲಭ್ಯತೆಯ ಆಧಾರದಲ್ಲಿ ಈಕೆ ಕುಂದಾಪುರದಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ಪಡೆದರು. ಕೂಡಲೇ ಸುಳ್ಯ ಪೊಲೀಸರು ಕುಂದಾಪುರ ಪೊಲೀಸರಿಗೆ ಈ ಮಾಹಿತಿಯನ್ನು ರವಾನಿಸಿದರು. ಅಲ್ಲಿನ ಪೊಲೀಸರು ಮಹಿಳೆಯನ್ನು ಪತ್ತೆಹಚ್ಚಿದ್ದಾರೆ. ತನಿಖೆ ವೇಳೆ ತಾನು ಪ್ರಿಯಕರನ ಜೊತೆಗೆ ಬಂದಿದ್ದಾಗಿ ಮತ್ತು ತನ್ನ ಗಂಡನ ಬಳಿ ಹೋಗುವುದಿಲ್ಲ. ಪ್ರಿಯಕರ ಚಂದನ್ ಎಂಬಾತನೊಂದಿಗೆ ಇರುವುದಾಗಿ ಮಹಿಳೆ ಹಠ ಹಿಡಿದಿದ್ದಾಳೆ ಎನ್ನಲಾಗ್ತಿದೆ.
ಆಕೆಗೆ ಬುದ್ಧಿವಾದ ಹೇಳಿದ ಪೊಲೀಸರು, ಮನವೊಲಿಸಿ ಬುಧವಾರದಂದು ಆಕೆಯನ್ನು ಪತಿಯೊಂದಿಗೆ ಕಳುಹಿಸಿಕೊಟ್ಟಿದ್ದು, ಇಂದು ಸುಳ್ಯ ಪೊಲೀಸರು ಮಹಿಳೆ ಮತ್ತು ಆಕೆಯ ಪತಿಯನ್ನು ಸುಳ್ಯ ಠಾಣೆಗೆ ಕರೆಸಿ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. ಉಡುಪಿಯಲ್ಲಿ ಈಕೆಯೊಂದಿಗೆ ಇದ್ದ ಪ್ರಿಯಕರ ಚಂದನ್ ಎಂಬಾತ ಅಸ್ಸೋಂ ಮೂಲದವನಾಗಿದ್ದು, ಮಂಗಳೂರಿನ ಹೋಟೆಲ್ ಒಂದರಲ್ಲಿ ಚೈನೀಸ್ ಫುಡ್ ಮೇಕರ್ ಆಗಿ ಕೆಲಸ ಮಾಡುತ್ತಿದ್ದ. ಒಮ್ಮೆ ಇವರು ಕೆಲಸ ಮಾಡುತ್ತಿದ್ದ ಸುಳ್ಯಕ್ಕೆ ಬಂದು ಹೋಗಿದ್ದಾನೆ ಎನ್ನಲಾಗ್ತಿದೆ.
ಓದಿ: ಬಿಜೆಪಿ ಎನ್ನುವ ವೈರಸ್ಗೆ ಕಾಂಗ್ರೆಸ್ ವ್ಯಾಕ್ಸಿನ್: ಪ್ರಿಯಾಂಕ್ ಖರ್ಗೆ ವ್ಯಂಗ್ಯ