ETV Bharat / state

ಮಂಗಳೂರು: ಹಳೇ ದ್ವೇಷ, ಸಹೋದ್ಯೋಗಿಗೆ ಚೂರಿ ಇರಿದು ಕೊಂದ ವ್ಯಕ್ತಿ - Mangaluru

ಹಳೇ ದ್ವೇಷದ ಹಿನ್ನೆಲೆ ಮದ್ಯ ಸೇವಿಸಿ ತನ್ನ ಸಹೋದ್ಯೋಗಿಗೆ ಚೂರಿಯಿಂದ ಇರಿದು ಹತ್ಯೆಗೈದಿರುವ ಘಟನೆ ಮಂಗಳೂರು ನಗರದಲ್ಲಿ ನಡೆದಿದೆ. ನಗರದ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Mangalore Panambur Police Station
ಮಂಗಳೂರು ಪಣಂಬೂರು ಪೊಲೀಸ್​ ಠಾಣೆ
author img

By ETV Bharat Karnataka Team

Published : Dec 10, 2023, 8:16 PM IST

ಮಂಗಳೂರು: ಹಳೇ ದ್ವೇಷದ ಹಿನ್ನೆಲೆ ಮದ್ಯ ಸೇವಿಸಿ ತನ್ನ ಸಹೋದ್ಯೋಗಿಗೆ ಚೂರಿಯಿಂದ ಇರಿದು ಹತ್ಯೆಗೈದಿರುವ ಘಟನೆ ನಗರದ ತಣ್ಣೀರುಬಾವಿ ಟೀ ಪಾರ್ಕ್ ಬಳಿ ಭಾನುವಾರ ಬೆಳಗ್ಗೆ ನಡೆದಿದೆ. ಕೇರಳದ ಕೊಲ್ಲಂ ನಿವಾಸಿ ಬಿನು (41) ಕೊಲೆಗೀಡಾದ ವ್ಯಕ್ತಿ ಎಂದು ಗುರುತಿಸಲಾಗಿದೆ.

ಕೇರಳದ ಕಣ್ಣೂರು ಜಿಲ್ಲೆಯ ತಳಿಪ್ಪರಂಬ್ ನಿವಾಸಿ ಜಾನ್ಸನ್ ಯಾನೆ ಬಿನೋಯ್ (52) ಎಂಬಾತ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಬಿನು ಮತ್ತು ಜಾನ್ಸನ್ ಇಬ್ಬರು ತಣ್ಣೀರು ಬಾವಿಯ ಟೀ ಪಾರ್ಕ್ ಬಳಿ ದೋಣಿ ನಿರ್ಮಾಣ ಸಂಸ್ಥೆಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಫ್ಯಾಕ್ಟರಿ ವಸತಿ ಸಮುಚ್ಚಯದಲ್ಲಿ ಇವರು ಬೇರೆ ಬೇರೆ ಮನೆಗಳಲ್ಲಿ ವಾಸವಿದ್ದರು. ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಶನಿವಾರ ರಾತ್ರಿ ಜಗಳ ನಡೆದಿತ್ತು. ಇದೇ ದ್ವೇಷ ಇಟ್ಟುಕೊಂಡು ಮದ್ಯ ಸೇವಿಸಿ ಬಂದಿದ್ದ ಆರೋಪಿ ಜಾನ್ಸನ್ ಫ್ಯಾಕ್ಟರಿ ವಸತಿಯಲ್ಲಿ ವಾಸವಿದ್ದ ಬಿನುಗೆ ಚೂರಿ ಇರಿದು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಪಣಂಬೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇದನ್ನೂಓದಿ:ವಿಜಯಪುರ: ತಲೆ ಮೇಲೆ ಕಲ್ಲು ಎತ್ತಿ ಹಾಕಿ ಯುವಕನ ಬರ್ಬರ ಕೊಲೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.