ETV Bharat / state

ಕಪ್ಪುಹಣ ಬಿಳಿ ಮಾಡುವ ಆಮಿಷಕ್ಕೆ ಬಲಿಯಾಗಿ 9.20 ಲಕ್ಷ ರೂ‌. ಕಳೆದುಕೊಂಡ ಗುತ್ತಿಗೆದಾರ - Magaluru crime news

ಕಪ್ಪುಬಣ್ಣದ ಕಾಗದವನ್ನು ಲಿಕ್ವಿಡ್ ನಂತೆ ತೋರುವ ನೀರಿಗೆ ಮುಳುಗಿಸಿ ತೆಗೆದಾಗ ಕಪ್ಪುಬಣ್ಣದ ಕಾಗದ 500 ರೂ ನೋಟಾಗಿ ಬದಲಾಗುವುದನ್ನು ತೋರಿಸಿ, ಗುತ್ತಿಗೆದಾರನಿಗೆ ಕೋಟಿಗಳಿಸುವ ಆಸೆಯುಟ್ಟಿ ಆತನಿಂದ ಇಬ್ಬರ ಚಾಲಾಕಿಗಳು 9.2 ಲಕ್ಷರೂ ಪಡೆದು ಪರಾರಿಯಾಗಿದ್ದಾರೆ.

9.20 ಲಕ್ಷ ರೂ‌. ಕಳೆದುಕೊಂಡ ಗುತ್ತಿಗೆದಾರ
9.20 ಲಕ್ಷ ರೂ‌. ಕಳೆದುಕೊಂಡ ಗುತ್ತಿಗೆದಾರ
author img

By

Published : Jul 30, 2021, 5:14 AM IST

ಮಂಗಳೂರು: ಕಪ್ಪುಹಣ ಬಿಳಿ ಮಾಡುವ ಆಮಿಷಕ್ಕೆ ಬಲಿಯಾಗಿ ಮಂಗಳೂರಿನ ಕಾವೂರು ಠಾಣಾ ವ್ಯಾಪ್ತಿಯ ವ್ಯಕ್ತಿಯೋರ್ವರು 9.20 ಲಕ್ಷ ರೂ‌. ಕಳೆದುಕೊಂಡ ಬಗ್ಗೆ ದೂರು ದಾಖಲಾಗಿದೆ‌.

ವೃತ್ತಿಯಲ್ಲಿ ಪಿ.ಡಬ್ಲ್ಯೂಡಿ ಗುತ್ತಿಗೆದಾರನಾಗಿರುವ ರೋಹಿದಾಸ್ ಎಂಬವರು, ಮನೆ ಕಟ್ಟಿ ಮಾರಾಟ ಮಾಡುವ ಉದ್ದೇಶದಿಂದ ದಿನ ಪತ್ರಿಕೆಯೊಂದರಲ್ಲಿ ಜಾಹೀರಾತು ನೀಡಿದ್ದರು. ಜಾಹೀರಾತು ನೀಡಿದ ಒಂದು ವಾರದಲ್ಲಿ 7829894477 ನಂಬರ್​ನಿಂದ ನಿತಿನ್ ರಾಜ್ ಬೆಂಗಳೂರು ಮತ್ತು ಧನರಾಜ್ ವಿಟ್ಲ ಎಂಬವರು ಕರೆ ಮಾಡಿ, ತಾವು ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಸಂಸ್ಥೆಯಲ್ಲಿ ನೌಕರಿ ಮಾಡುತ್ತಿದ್ದು ನಮ್ಮ ಸಂಸ್ಥೆಯ ಮಾಲಿಕರಿಗೆ ಮಂಗಳೂರಿನಲ್ಲಿ ಮನೆ ಅಗತ್ಯತೆಯಿದೆ ಎಂದು ತಿಳಿಸಿದ್ದಾರೆ.

ಅಲ್ಲದೆ ಅವರಿಂದ ಮನೆಗೆ 50 ಲಕ್ಷ ರೂ. ಸಾಲ ತೆಗೆಸಿಕೊಡುವುದಾಗಿಯೂ ಹೇಳಿದ್ದಾರೆ. ಬಳಿಕ ಧನರಾಜ್ ವಿಟ್ಲ ರವರು ರೋಹಿದಾಸ್​ರನ್ನು ಶ್ರೀರಂಗಪಟ್ಟಣಕ್ಕೆ ಬರಲು ಹೇಳಿದ್ದಾರೆ. ಈ ಸಂದರ್ಭ ನಿತಿನ್ ರಾಜ್ ಸಾಲದ ರೂಪವಾಗಿ 1.50 ಕೋಟಿ ರೂ. ಕಪ್ಪುಹಣವನ್ನು ನೀಡಿ, ಅದನ್ನು ಬಿಳಿ ಮಾಡಲು ತಿಳಿಸಿದ್ದಾರೆ. ಈ ಕಪ್ಪುಬಣ್ಣದ ಕಾಗದವನ್ನು ಲಿಕ್ವಿಡ್ ನಂತೆ ತೋರುವ ನೀರಿಗೆ ಮುಳುಗಿಸಿ ತೆಗೆದಾಗ ಕಪ್ಪುಬಣ್ಣದ ಕಾಗದ 500 ರೂ. ನೋಟಿನ ರೂಪ ತಾಳಿದೆ. ಇದೇ ರೀತಿ ಮಾಡುವಂತೆ ಹೇಳಿ 1.5 ಕೋಟಿ ರೂ.ವನ್ನು ರೋಹಿದಾಸ್​ಗೆ ನೀಡಿದ್ದಾರೆ.

ಇದನ್ನು ನಂಬಿ ರೋಹಿದಾಸ್ ಹಣದ ಬ್ಯಾಗ್ ಹಾಗೂ ಲಿಕ್ವಿಡ್​ಅನ್ನು ವಿಟ್ಲದ ಧನರಾಜ್ ಕಾರಿನ ಡಿಕ್ಕಿಯಲ್ಲಿರಿಸಿ ಹೊರಟು ಬಂದಿದ್ದಾರೆ‌. ಆದರೆ ಒಂದು ಕಿಲೋ ಮೀ. ಮುಂದೆ ಬಂದಾಗ ಕಾರಿನಲ್ಲಿ ಯಾವುದೋ ಶಬ್ದ ಬಂದಂತೆ ಕೇಳಿದ್ದು, ಧನರಾಜ್ ಕಾರು ನಿಲ್ಲಿಸಿ ಡಿಕ್ಕಿ ತೆರೆದು ನೋಡುವಾಗ ಲಿಕ್ವಿಡ್ ಕ್ಯಾನ್ ಕೆಳಗೆ ಬಿದ್ದು, ಎಲ್ಲವೂ ಚೆಲ್ಲಿದೆ. ತಕ್ಷಣ ಈ ಬಗ್ಗೆ ನಿತಿನ್ ರಾಜ್​ಗೆ ಕರೆಮಾಡಿ ನಡೆದ ವಿಷಯವನ್ನು ತಿಳಿಸಿದಾಗ ಆತ ಬಂದು ಲಿಕ್ವಿಡ್ ಚೆಲ್ಲಿರುವುದಕ್ಕೆ ಬೈಯ್ದು, ಈ ಲಿಕ್ವಿಡ್ 25 ಲಕ್ಷ ರೂ. ಬೆಳೆಬಾಳುವ ವಸ್ತು ಆಗಿದ್ದು, ಬೇಜಾಬ್ದಾರಿಯಿಂದ ಚೆಲ್ಲಿದ್ದು ಇನ್ನು ಇದು ಸಿಗುವುದು ಕಷ್ಟ ಎಂದು ಹೇಳಿದ್ದಾನೆ. ಅಲ್ಲದೆ ಯಾರೋ ಹುಡುಗಿಗೆ ಕರೆ ಮಾಡಿ ರೋಹಿದಾಸ್ ರೊಂದಿಗೆ ಮಾತನಾಡಲು ತಿಳಿಸಿದ್ದಾನೆ‌. ಆಕೆ ಬೇರೆ ಲಿಕ್ವಿಡ್ ಬೇಕಾದಲ್ಲಿ 25 ಲಕ್ಷ ರೂ. ನೀಡಬೇಕು ಎಂದಿದ್ದಾಳೆ. ಬಳಿಕ ನಿತಿನ್ ತಾನು 10 ಲಕ್ಷ ರೂ. ರೆಡಿ ಮಾಡುತ್ತೇನೆ. ನೀವಿಬ್ಬರೂ ಸೇರಿ 15 ಲಕ್ಷ ರೂ. ರೆಡಿ ಮಾಡಿ ಕೂಡಲೇ ನೀಡಬೇಕಾಗಿ ತಿಳಿಸಿದ್ದಾನೆ. ಬಳಿಕ ಕಾರಿನಲ್ಲಿರುವ ಕಪ್ಪುಬಣ್ಣದ ಕಾಗದದ ಬ್ಯಾಗನ್ನು ಆತನ ಕಾರಿನಲ್ಲಿ ಇರಿಸಿ ನೀವು ಕೂಡಲೇ ಊರಿಗೆ ಹೋಗಿ ಹಣವನ್ನು ನೀಡಿದರೆ ಲಿಕ್ವಿಡ್ ತರಿಸುವುದಾಗಿ ತಿಳಿಸಿದ್ದಾನೆ.

ಮರುದಿವಸ ವಿಟ್ಲದ ಧನರಾಜ್ ಕರೆ ಮಾಡಿ ತಾನು ಹೇಗಾದರೂ ಮಾಡಿ 7 ಲಕ್ಷ ರೂ. ಹಣ ರೆಡಿ ಮಾಡುತ್ತೇನೆ. ತಾವು ಕೂಡಾ ಏನಾದರೂ ಮಾಡಿ ಎಂದಿದ್ದಾನೆ. ಈ ಬಗ್ಗೆ ಆತ ಪದೇ ಪದೇ ಪೋನ್ ಮಾಡುತ್ತಿದ್ದರಿಂದ ರೋಹಿದಾಸ್ ಹೆಂಡತಿ ಮಕ್ಕಳ ಒಡವೆಗಳನ್ನು 7.20 ರೂ.ಗೆ ಅಡವಿಟ್ಟು ಅದಕ್ಕೆ ತನ್ನಲ್ಲಿದ್ದ 2 ಲಕ್ಷ ರೂ.ವನ್ನೂ ಇರಿಸಿ ಒಟ್ಟು 9.20 ಲಕ್ಷ ರೂ. ನೀಡಿದ್ದಾರೆ. ಆದರೆ ಆ ಬಳಿಕ ಅವರು ಲಿಕ್ವಿಡ್, ಕಪ್ಪುಹಣ ನೀಡದೆ ಇಬ್ಬರು ತಮಗೆ ವಂಚಿಸಿದ್ದಾರೆಂದು ರೋಹಿದಾಸ್ ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನು ಓದಿ:ಸ್ಕೂಟರ್ ಡಿಕ್ಕಿಯಲ್ಲಿದ್ದ 3.20ಲಕ್ಷ ರೂ ಹಣ ಕದ್ದೊಯ್ದ ಕಳ್ಳರು: ಸಿಸಿ ಕ್ಯಾಮೆರಾದಲ್ಲಿ ಸೆರೆಯಾಯ್ತು ಕಳ್ಳರ ಕೈಚಳಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.