ಸುಳ್ಯ: ತಲ್ವಾರ್ ಹಿಡಿದು ಊರಿಡಿ ಸುತ್ತಿ ಭಯದ ವಾತಾವರಣ ನಿರ್ಮಿಸಿದ ಯುವಕನನ್ನು ಸುಳ್ಯ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಿದ್ದಾರೆ. ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೂಕ್ಷ್ಮ ವಾತಾವರಣವಿರುವ ಹಿನ್ನೆಲೆ ಇದ್ದರೂ ಇಲ್ಲೋರ್ವ ಯುವಕ ಕ್ಷುಲ್ಲಕ ಕಾರಣಕ್ಕೆ ತಲ್ವಾರ್ ಹಿಡಿದುಕೊಂಡು ರಸ್ತೆಯಲ್ಲಿ ತಿರುಗಾಟ ನಡೆಸಿ ಹುಚ್ಚಾಟ ಪ್ರದರ್ಶಿಸಿದ್ದಾರೆ.
ಇದರಿಂದ ಸ್ಥಳೀಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಈತನ ಅತಿರೇಕದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಿದ್ದಾರೆ.
ಈ ಬಗ್ಗೆ 'ಈಟಿವಿ ಭಾರತ'ಕ್ಕೆ ಪ್ರತಿಕ್ರಿಯಿಸಿದ ಸುಳ್ಯ ಸಬ್ಇನ್ಸ್ಪೆಕ್ಟರ್ ದಿಲೀಪ್ ಜಿ.ಆರ್. ಅವರು, ಸಂದೀಪ್ ಎಂಬ ಸುಳ್ಯದ ಕನಕಮಜಲಿನ ಈ ಯುವಕ ಎಂಟು ತಿಂಗಳಿನಿಂದ ಮದ್ಯಪಾನ ಬಿಟ್ಟಿದ್ದರಂತೆ. ಆದರೆ, ಇದ್ದಕ್ಕಿದ್ದಂತೆ ಘಟನೆಯಾಗಿರುವ ದಿನ ಅವರು ಕುಡಿದಿದ್ದಾರೆ. ಇದರಿಂದಾಗಿ ತಲ್ವಾರ್ ಹಿಡಿದುಕೊಂಡು ಓಡಾಡಿದ್ದಾರೆ ಎಂದು ಮಾಹಿತಿ ನೀಡಿದ್ರು.
ಈ ಯುವಕ ಯಾರಿಗೂ ಸಮಸ್ಯೆ ಮಾಡುವ ಉದ್ದೇಶ ಹೊಂದಿರಲಿಲ್ಲ ಎಂದು ತಿಳಿದು ಬಂದಿದೆ. ಮದ್ಯದ ಅಮಲಿನಲ್ಲಿ ಸುಮ್ಮನೆ ಮನೆಯ ಕಡೆಗೆ ತಲ್ವಾರ್ ಹಿಡಿದುಕೊಂಡು ಹೋಗುತ್ತಿದ್ದರು ಎನ್ನುವುದು ವಿಚಾರಣೆ ವೇಳೆ ತಿಳಿದು ಬಂದಿದೆ. ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಎಸ್ ಐ ತಿಳಿಸಿದ್ದಾರೆ.
ಇದನ್ನೂ ಓದಿ: ಫೇಮಸ್ ಆಗಲು ರಾಕೇಶ್ ಟಿಕಾಯಿತ್ಗೆ ಮಸಿ.. ಚಾರ್ಜ್ಶೀಟ್ನಲ್ಲಿ ಆರೋಪಿಗಳ ಹೇಳಿಕೆ ದಾಖಲು