ಮಂಗಳೂರು: ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿಯಾಗಿಸಿರುವ ವ್ಯಕ್ತಿಯ ಮೇಲಿನ ಆರೋಪ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಪೊಕ್ಸೋ ನ್ಯಾಯಾಲಯದಲ್ಲಿ ಸಾಬೀತಾಗಿದೆ.
ಸತೀಶ ಅಲಿಯಾಸ್ ಶಶಿ ಈ ಕೃತ್ಯ ಎಸಗಿದಾತ. ಡಿ.4 ರಂದು ನ್ಯಾಯಾಧೀಶರು ಶಿಕ್ಷೆಯ ಪ್ರಮಾಣವನ್ನು ಘೋಷಿಸಲಿದ್ದಾರೆ. ಈ ಆರೋಪಿ ಬೆಳ್ತಂಗಡಿ ತಾಲೂಕಿನ ಕಾಶಿಪಟ್ಣ ಕುರುಪ್ಪಾಡಿ ಗ್ರಾಮದವನಾಗಿದ್ದು, ಬಾಲಕಿಯ ಮಾವನ ಜೊತೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ. ಈ ಸಂದರ್ಭದಲ್ಲಿ ಈ ಅಪ್ರಾಪ್ತೆಯ ಜೊತೆ ಸ್ನೇಹ ಬೆಳೆಸಿ ಕೃತ್ಯ ಎಸಗಿದ್ದಾನೆ.
2018ರ ಜನವರಿಯ ಕೊನೆಯ ವಾರದಲ್ಲಿ ಆರೋಪಿ ಸತೀಶ ಅಲಿಯಾಸ್ ಶಶಿಯು ಸಂತ್ರಸ್ತೆ ಅಪ್ರಾಪ್ತ ಬಾಲಕಿಯನ್ನು ಮನೆಯ ಪಕ್ಕದಲ್ಲಿರುವ ಗುಡ್ಡಕ್ಕೆ ಬರಲು ತಿಳಿಸಿದ್ದಾನೆ. ಅಲ್ಲಿಗೆ ಬಂದ ಅಪ್ರಾಪ್ತೆಯ ಬಳಿ ಆರೋಪಿಯು ಅಸಭ್ಯವಾಗಿ ವರ್ತಿಸಿ ಅತ್ಯಾಚಾರ ಮಾಡಿದ್ದಾನೆ. ಬಳಿಕವೂ ಸಾಕಷ್ಟು ಬಾರಿ ಇದೇ ರೀತಿ ಗುಡ್ಡಕ್ಕೆ ಕರೆದೋಯ್ದು ಅತ್ಯಾಚಾರ ಮಾಡಿದ್ದಾನೆ. ಪರಿಣಾಮ ಬಾಲಕಿ ಗರ್ಭವತಿಯಾಗಿದ್ದಾಳೆ.
2018 ಆಗಸ್ಟ್ 3ರಂದು ಬಾಲಕಿಯ ತಾಯಿ ಮೃತಪಟ್ಟಿದ್ದು, ಅಂದು ಮನೆಗೆ ಬಂದ ಬಾಲಕಿಯ ಮಾವ ಆಕೆಯ ಹೊಟ್ಟೆಯನ್ನು ಗಮನಿಸಿ ವಿಚಾರಿಸಿದಾಗ ಪ್ರಕರಣ ಬಯಲಿಗೆ ಬಂದಿದೆ. ತಕ್ಷಣ ಬಾಲಕಿಯ ಮಾವ ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.