ಮಂಗಳೂರು: ಫ್ಯಾನ್ಸಿ ಅಂಗಡಿಗೆ ಖರೀದಿಗೆ ಬಂದ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಗೆ ಅಶ್ಲೀಲ ವಿಡಿಯೋ ತೋರಿಸಿದ ಆರೋಪದ ಮೇಲೆ ಅಂಗಡಿ ಮಾಲೀಕನನ್ನು ಮಂಗಳೂರಿನ ಕೋಣಾಜೆ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನ ಹೊರವಲಯದ ಮುಡಿಪುವಿನ ಫ್ಯಾನ್ಸಿ ಅಂಗಡಿ ಮಾಲಿಕ ಸಲೀಂ ಬಂಧಿತ ಆರೋಪಿ. ಈತ ಬ್ಯಾಗ್ ಖರೀದಿಗೆಂದು ಬಂದ ವಿದ್ಯಾರ್ಥಿನಿಗೆ ತನ್ನ ಮೊಬೈಲ್ನಲ್ಲಿದ್ದ ಅಶ್ಲೀಲ ವಿಡಿಯೋ ತೋರಿಸಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಕೋಣಾಜೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಹಿನ್ನೆಲೆಯಲ್ಲಿ ಪೋಕ್ಸೋ ಕಾಯ್ದೆಯಡಿ ಆರೋಪಿಯನ್ನು ಬಂಧಿಸಲಾಗಿದೆ.