ETV Bharat / state

ಆಸ್ಕರ್ ಫರ್ನಾಂಡಿಸ್ ಆರೋಗ್ಯದಲ್ಲಿ ಕೊಂಚ ಚೇತರಿಕೆ! - ಆಸ್ಕರ್ ಫರ್ನಾಂಡಿಸ್ ಆರೋಗ್ಯ

ತಲೆಗೆ ಪೆಟ್ಟಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾಂಗ್ರೆಸ್​ ಆಸ್ಕರ್​ ಫರ್ನಾಂಡಿಸ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.

ಆಸ್ಕರ್ ಫರ್ನಾಂಡಿಸ್
ಆಸ್ಕರ್ ಫರ್ನಾಂಡಿಸ್
author img

By

Published : Jul 25, 2021, 12:48 PM IST

ಮಂಗಳೂರು: ಯೋಗ ಮಾಡುತ್ತಿದ್ದ ವೇಳೆ ತಲೆಗೆ ಪೆಟ್ಟಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಜ್ಯಸಭಾ ಸದಸ್ಯ ಆಸ್ಕರ್​ ಫರ್ನಾಂಡಿಸ್​ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಸದ್ಯ ಅವರು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರೂ, ನಿನ್ನೆ ಕಣ್ಣು ಬಿಡಲು ಪ್ರಯತ್ನಿಸುತ್ತಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ.

ಆಸ್ಕರ್ ಫರ್ನಾಂಡಿಸ್​ ಅವರ ಸಹಜ ಉಸಿರಾಟ ಶೇಕಡಾ 11 ರಷ್ಟು ಏರಿಕೆಯಾಗಿದೆ. ಮೆದುಳು ಕೂಡ ಉತ್ತಮವಾಗಿ ಸ್ಪಂದಿಸುತ್ತಿದ್ದು, ರಕ್ತದೊತ್ತಡ, ಸಕ್ಕರೆ ಅಂಶ ಬಹುತೇಕ ಸಹಜ ಸ್ಥಿತಿಗೆ ಬಂದಿದೆ. ಕುಟುಂಬಸ್ಥರ ಮಾತಿಗೆ ಕೈ ಚಲನೆ ಮೂಲಕ ಪ್ರತಿಕ್ರಿಯೆ ನೀಡುತ್ತಿರುವ ಅವರು ಶನಿವಾರ ದ್ರವಾಹಾರ ಸೇವಿಸಿದ್ದಾರೆ ಎನ್ನಲಾಗ್ತಿದೆ.

ಇದನ್ನೂ ಓದಿ: ರಾಜಕೀಯ ಸ್ಥಿತ್ಯಂತರದ ಸಂದರ್ಭದಲ್ಲೂ ಬಿಎಸ್​ವೈ ಫುಲ್​ ಆ್ಯಕ್ಟಿವ್​.. ಬೆಳಗಾವಿ ನೆರೆಹಾನಿ ವೀಕ್ಷಣೆಗೆ ತೆರಳಿದ ಸಿಎಂ

ಆಸ್ಕರ್ ಫರ್ನಾಂಡಿಸ್ ದೇಹ ಸ್ಥಿತಿಯಲ್ಲಿ ಚೇತರಿಕೆ ಆಗುತ್ತಿರುವ ಹಿನ್ನೆಲೆ, ತಲೆಯಲ್ಲಿ ಹೆಪ್ಪುಗಟ್ಟಿರುವ ರಕ್ತ ತೆಗೆಯುವ ಶಸ್ತ್ರಚಿಕಿತ್ಸೆ ನಡೆಸಲು ವೈದ್ಯರು ಚಿಂತನೆ ನಡೆಸಿದ್ದಾರೆ. ಇನ್ನೊಂದೆರಡು ದಿನಗಳ ಬಳಿಕ ಈ ಕುರಿತು ವೈದ್ಯರು ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.