ETV Bharat / state

ಕ್ರೆಡಿಟ್ ಲಿಮಿಟ್ ಹೆಚ್ಚಿಸುವುದಾಗಿ ನಂಬಿಸಿ ಮಂಗಳೂರಿನ ವ್ಯಕ್ತಿಗೆ 6.94 ಲಕ್ಷ ರೂ. ವಂಚನೆ - Mangalore latest crime news

ಕ್ರೆಡಿಟ್ ಲಿಮಿಟ್ ಹೆಚ್ಚಿಸುವ ಭರವಸೆ ನೀಡಿ ವ್ಯಕ್ತಿಯೋರ್ವನಿಗೆ ಸುಮಾರು 6,94,918ರೂ.ವಂಚಿಸಿರುವ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
author img

By

Published : Oct 31, 2021, 1:24 PM IST

ಮಂಗಳೂರು: ಬ್ಯಾಂಕ್ ಕ್ರೆಡಿಟ್ ಕಾರ್ಡ್​ನ ಕ್ಯಾಶ್ ಹಾಗು ಕ್ರೆಡಿಟ್ ಲಿಮಿಟ್ ಹೆಚ್ಚಿಸುವ ಭರವಸೆ ನೀಡಿ ವ್ಯಕ್ತಿಯೊಬ್ಬನ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ 6,94,918ರೂ. ವಂಚನೆ ಮಾಡಿರುವ ಬಗ್ಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಂಗಳೂರು ನಗರದ ವ್ಯಕ್ತಿಯೋರ್ವರಿಗೆ ಅ.29ರಂದು ಮಧ್ಯಾಹ್ನ 3.18ರ ಸುಮಾರಿಗೆ ಅಪರಿಚಿತ ಮಹಿಳೆಯೋರ್ವರು ಕರೆ ಮಾಡಿದ್ದಾರೆ. 7089961456 ಮೊಬೈಲ್ ಸಂಖ್ಯೆಯಿಂದ ಕರೆ ಮಾಡಿರುವ ಆಕೆ ತಾನು ಎಸ್.ಬಿ.ಐ ಕ್ರೆಡಿಟ್ ಕಾರ್ಡ್ ಕಚೇರಿಯಿಂದ ಕರೆ ಮಾಡಿರುವುದಾಗಿ ಹೇಳಿಕೊಂಡಿದ್ದಾಳೆ.

ಆಕೆ ತಾನು ಕ್ರೆಡಿಟ್ ಕಾರ್ಡ್ ಪರಿಶೀಲನೆ ಮಾಡುವ ಬಗ್ಗೆ ಕರೆ ಮಾಡಿರುವುದಾಗಿ ಹೇಳಿ, ವಂಚನೆಗೊಳಗಾದವರ ಕ್ರೆಡಿಟ್ ಕಾರ್ಡ್​ನ ಕ್ಯಾಶ್ ಲಿಮಿಟ್ ಹಾಗೂ ಕ್ರೆಡಿಟ್ ಲಿಮಿಟ್​​ಗಳನ್ನು ಹೆಚ್ವಿಸುವುದಾಗಿ ನಂಬಿಸಿದ್ದಾಳೆ. ಬಳಿಕ ಅವರ ಮೊಬೈಲ್ ಸಂಖ್ಯೆಗೆ ಬಂದಿರುವ ಓಟಿಪಿ ಸಂಖ್ಯೆಯನ್ನು ತಿಳಿಸುವಂತೆ ಹೇಳಿದ್ದಾರೆ. ಆತ ತಮ್ಮ ಮೊಬೈಲ್ ಗೆ ಬಂದ ಓಟಿಪಿ ಸಂಖ್ಯೆ ತಿಳಿಸಿದ ತಕ್ಷಣ ಅವರ ಎಸ್​​ಬಿಐ ಕ್ರೆಡಿಟ್ ಕಾರ್ಡ್​ನಿಂದ 99,274 ರೂ. ವರ್ಗಾವಣೆಯಾಗಿದೆ.

ಬಳಿಕ ಆಕೆ ಸುಮಾರು 3.51 ಗಂಟೆಯವರೆಗೆ ಪೋನ್​​ನಲ್ಲಿ ಮಾತನಾಡುತ್ತಾ 6 ಬಾರಿ ಒಟಿಪಿ ಸಂಖ್ಯೆಯನ್ನು ಪಡೆದುಕೊಂಡಿದ್ದಾಳೆ. ಪರಿಣಾಮ ವಂಚನೆಗೊಳಗಾದ ವ್ಯಕ್ತಿಯ ಕ್ರೆಡಿಟ್ ಕಾರ್ಡ್​ನಿಂದ ಹಂತ-ಹಂತವಾಗಿ ಒಟ್ಟು 6,94,918 ರೂ. ವರ್ಗಾವಣೆಯಾಗಿದೆ.

ತಮ್ಮ ಕ್ರೆಡಿಟ್ ಕಾರ್ಡ್​ನಿಂದ ಹಣ ವರ್ಗಾಯಿಸಿ ವಂಚನೆ ಮಾಡಿರುವ ಮಹಿಳೆಯ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿ ವಂಚನೆಗೊಳಗಾದ ವ್ಯಕ್ತಿ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.