ಮಂಗಳೂರು : ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟವಾಗಿರುವ ಹಿನ್ನೆಲೆ ಪುನಶ್ಚೇತನಕ್ಕಾಗಿ ಕೃಷಿ ಸಾಲ ಸೇರಿದಂತೆ ₹300 ಕೋಟಿ ಸಾಲ ವಿತರಣೆಗೆ ನಿರ್ಧರಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‌ಸಿಡಿಸಿಸಿ) ಅಧ್ಯಕ್ಷ ಡಾ. ಎಂ ಎನ್ ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ರೈತ ಸ್ಪಂದನ ಎಂಬ ಕಾರ್ಯಕ್ರಮದ ಮೂಲಕ ರೈತರಿಗೆ, ಹೈನುಗಾರರಿಗೆ,ಮೀನುಗಾರರಿಗೆ, ಸ್ವಸಹಾಯ ಸಂಘಗಳಿಗೆ, ಎಲೆಕ್ಟ್ರಿಕ್ ವಾಹನ ಸಾಲ ಮೊದಲಾದ ಸಾಲಗಳನ್ನು ನೀಡಲಾಗುವುದು. 300 ಕೋಟಿ ಸಾಲವನ್ನು ಸುಮಾರು 700 ಗ್ರಾಹಕರಿಗೆ ನೀಡಲು ಚಿಂತಿಸಲಾಗಿದೆ. ಇದರಿಂದ ಆರ್ಥಿಕ ಚಟುವಟಿಕೆಗಳಿಗೆ ವೇಗ ಸಿಗಲಿದೆ ಎಂದರು.
ಕೊರೊನಾದಿಂದ ಮೃತಪಟ್ಟವರ ಒಂದು ಲಕ್ಷ ರೂ. ಸಾಲ ಮನ್ನಾ ಮಾಡಲು ನಿರ್ಧರಿಸಲಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿರುವ 152 ಮಂದಿ ಎಸ್‌ಸಿಡಿಸಿಸಿ ಬ್ಯಾಂಕ್‌ನಲ್ಲಿ ಸಾಲ ಪಡೆದ ಗ್ರಾಹಕರು ಮೃತಪಟ್ಟಿದ್ದಾರೆ. ಈ 152 ಮಂದಿ ಪಡೆದ ಒಂದು ಲಕ್ಷ ರೂ. ಸಾಲವನ್ನು ಮನ್ನಾ ಮಾಡಲಾಗುವುದು ಎಂದು ತಿಳಿಸಿದರು.