ETV Bharat / state

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೇ ದಿನ 7 ಬಲಿ.. 297 ಸೋಂಕಿತರು ಪತ್ತೆ! - Mangalore corona news

ಕೊರೊನಾ ಕೆಂಗಣ್ಣು ಜಿಲ್ಲೆಯ ಮೇಲೆ ಬಿದ್ದಿದ್ದು ಇಂದು ಬರೋಬ್ಬರಿ 297 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ ಮತ್ತು 7 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 11,389ಕ್ಕೆ ಮತ್ತು ಮೃತರ ಸಂಖ್ಯೆ 337ಕ್ಕೆ ಏರಿಕೆಯಾಗಿ ಜನರ ನಿದ್ದೆಗೆಡಿಸಿದೆ.

Mangalore corona cases
Mangalore corona cases
author img

By

Published : Aug 27, 2020, 7:45 PM IST

ಮಂಗಳೂರು: ಮಹಾಮಾರಿ ಕೊರೊನಾಗೆ ದಕ್ಷಿಣ ಕನ್ನಡ ಜಿಲ್ಲೆಯ 7 ಮಂದಿ ಸಾವನ್ನಪ್ಪಿದ್ದು 297 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಕೊರೊನಾದಿಂದ ಇಂದು ಮೃತಪಟ್ಟ 7 ಮಂದಿಯಲ್ಲಿ ಐವರು ಮಂಗಳೂರು ತಾಲೂಕು ಮತ್ತು ಇಬ್ಬರು ಹೊರಜಿಲ್ಲೆಯವರಾಗಿದ್ದಾರೆ. ಈ ಮೂಲಕ ಮೃತರ ಸಂಖ್ಯೆ 337ಕ್ಕೆ ಏರಿಕೆಯಾಗಿ ಆತಂಕ ಮನೆಮಾಡಿದೆ.

ಮಂಗಳೂರು ತಾಲೂಕಿನ 160 ಮಂದಿಗೆ, ಬಂಟ್ವಾಳದ 36, ಪುತ್ತೂರಿನ 14, ಸುಳ್ಯದ 42, ಬೆಳ್ತಂಗಡಿಯ 21 ಮತ್ತು ಹೊರಜಿಲ್ಲೆಯ 24 ಮಂದಿಗೆ ಕೊರೊನಾ ತಗುಲಿರುವುದು ವರದಿಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 11,389ಕ್ಕೆ ತಲುಪಿದೆ.

ಇಂದು 257 ಮಂದಿ ಗುಣಮುಖರಾಗಿದ್ದು ಈವರೆಗೆ 8,680 ಸೋಂಕಿತರು ಸಂಪೂರ್ಣ ಗುಣಮುಖರಾಗಿದ್ದಾರೆ. ಸದ್ಯ 2,372 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.