ETV Bharat / state

ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿರುವ ಆರೋಪ : ಪಿಡಬ್ಲ್ಯುಡಿ ಎಇಗೆ 25 ಲಕ್ಷ ದಂಡ, ಸಜೆ - ಈಟಿವಿ ಭಾರತ ಕನ್ನಡ ನ್ಯೂಸ್​​​

ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿರುವ ಆರೋಪದಲ್ಲಿ ಪಿಡಬ್ಲ್ಯುಡಿ ಎಇ ಎನ್.ನರಸಿಂಹರಾಜುಗೆ ಮಂಗಳೂರಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 25 ಲಕ್ಷ ರೂ ದಂಡ ಹಾಗೂ ಮೂರು ವರ್ಷ ಆರು ತಿಂಗಳು ಸಜೆ ವಿಧಿಸಿದೆ.

25-lakh-fine-for-pwd-ae-in-manglore
ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿರುವ ಆರೋಪ : ಪಿಡಬ್ಲ್ಯುಡಿ ಎಇಗೆ 25 ಲಕ್ಷ ದಂಡ, ಸಜೆ
author img

By

Published : Nov 10, 2022, 10:11 PM IST

ಮಂಗಳೂರು: ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿರುವ ಆರೋಪದಲ್ಲಿ ಪಿಡಬ್ಲ್ಯುಡಿ ಎಇ ಎನ್.ನರಸಿಂಹರಾಜುಗೆ ಮಂಗಳೂರಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 25 ಲಕ್ಷ ರೂ ದಂಡ ವಿಧಿಸಿದೆ. ಎನ್.ನರಸಿಂಹರಾಜು ಮೇಲಿನ ಆರೋಪ ಸಾಬೀತಾದ ಹಿನ್ನಲೆ, ಆರೋಪಿಗೆ ಮೂರು ವರ್ಷ 6‌ ಆರು ತಿಂಗಳು ಸಜೆ ಹಾಗೂ 25 ಲಕ್ಷ ರೂ ದಂಡ ವಿಧಿಸಿ ಆದೇಶಿಸಿದೆ.

ಬೆಂಗಳೂರು ದೇವನಹಳ್ಳಿ ಮದ್ದಯ್ಯ ರಸ್ತೆ ನಿವಾಸಿಯಾಗಿರುವ ಎನ್‌. ನರಸಿಂಹರಾಜು ವಿರುದ್ಧ 2010ರ ಮಾ.24ರಂದು ಆದಾಯಕ್ಕಿಂತ ಹೆಚ್ಚಿನ ಆಸ್ತಿಯನ್ನು ಹೊಂದಿರುವ ಆರೋಪ ಕೇಳಿಬಂದಿತ್ತು. ಈ ಹಿನ್ನಲೆಯಲ್ಲಿ ಮಂಗಳೂರು ಲೋಕಾಯುಕ್ತ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಅಂದಿನ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಸದಾನಂದ ಎಂ.ವರ್ಣೇಕರ್ ಅವರು ದೂರು ನೀಡಿ, ಪೊಲೀಸ್ ಉಪಾಧೀಕ್ಷಕ ವಿಠಲ್ ದಾಸ್ ಪೈ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು.

ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಬಿ.ಜಕಾತಿಯವರು ಆರೋಪಿ ಎನ್.ನರಸಿಂಹರಾಜು ಮೇಲಿನ ಆರೋಪ ಸಾಬೀತಾಗಿರುವ ಹಿನ್ನೆಲೆ, ಮೂರು ವರ್ಷ ಆರು ತಿಂಗಳು ಸಜೆ ಹಾಗೂ 25 ಲಕ್ಷ ರೂ ದಂಡ ವಿಧಿಸಿದ್ದಾರೆ. ದಂಡ ತೆರಲು ತಪ್ಪಿದ್ದಲ್ಲಿ ಮತ್ತೆ ಆರು ತಿಂಗಳುಗಳ ಹೆಚ್ಚಿನ ಸಜೆ ಅನುಭವಿಸಬೇಕೆಂದು ಆದೇಶಿಸಿದ್ದಾರೆ. ಲೋಕಾಯುಕ್ತ ಮಂಗಳೂರಿನ ವಿಶೇಷ ಅಭಿಯೋಜಕ ರವೀಂದ್ರ ಮುನ್ನಿಪಾಡಿ ಸರಕಾರದ ಪರ ವಾದಿಸಿದ್ದರು.

ಇದನ್ನೂ ಓದಿ : ಮಂಗಳೂರು: ವೈದ್ಯೆಯೊಂದಿಗೆ ಅಸಭ್ಯ ವರ್ತನೆ ತೋರಿದ ಬಸ್ ಕ್ಲೀನರ್ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.