ETV Bharat / state

ಯುನಿಟ್ ಗೆ 2 ಸಾವಿರ ರೂ‌. ನಂತೆ ದ.ಕ.ಜಿಲ್ಲೆಯಲ್ಲಿ ಮರಳು ಲಭ್ಯ: ರಾಧಾಕೃಷ್ಣನ್ ಸ್ಪಷ್ಟನೆ - Mangalore latest news

ಜಿಲ್ಲೆಯಲ್ಲಿ ಮರಳು ಮಾಫಿಯಾ ನಿಲ್ಲಬೇಕೆಂಬ ಸದುದ್ದೇಶದಿಂದ ಯುನಿಟ್ ಗೆ 2 ಸಾವಿರ ರೂ‌.ನಂತೆ ಎಲ್ಲರಿಗೂ ಮರಳು ವಿತರಣೆ ಮಾಡುತ್ತೇವೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ರಾಧಾಕೃಷ್ಣನ್ ಹೇಳಿದ್ದಾರೆ.

press meet
ಸುದ್ದಿಗೋಷ್ಠಿ
author img

By

Published : Sep 21, 2020, 8:16 PM IST

ಮಂಗಳೂರು: ದ.ಕ.ಜಿಲ್ಲೆಯಲ್ಲಿ ಯುನಿಟ್ ಗೆ 2 ಸಾವಿರ ರೂ.ನಂತೆ ಎಲ್ಲರಿಗೂ ಮರಳು ದೊರಕಲಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ರಾಧಾಕೃಷ್ಣನ್ ಹೇಳಿದರು.

ದ.ಕ.ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲು ಅವರು ಇತ್ತೀಚೆಗೆ ದ.ಕ.ಜಿಲ್ಲೆಯಲ್ಲಿ ಕಾಂಗ್ರೆಸ್ ಸರ್ಕಾರ ಇರುವಾಗ ಮರಳು ಮಾಫಿಯಾ ನಡೆಯುತ್ತಿದ್ದು, ನಾವು 2 ಸಾವಿರ ರೂ.ಗೆ ಎಲ್ಲರಿಗೂ ಮರಳು ವಿತರಣೆ ಮಾಡುತ್ತೇವೆ ಎಂದು ಹೇಳಿದ್ದರು. ಇದಕ್ಕೆ ನಳಿನ್ ಕುಮಾರ್ ಪರವಾಗಿ ನಗರದ ಬಿಜೆಪಿ ಕಚೇರಿಯಲ್ಲಿ ಸ್ಪಷ್ಟನೆ ನೀಡಿದ ಅವರು, ಜಿಲ್ಲೆಯಲ್ಲಿ ಮರಳು ಮಾಫಿಯಾ ನಿಲ್ಲಬೇಕೆಂಬ ಸದುದ್ದೇಶದಿಂದ ಅವರು ಯುನಿಟ್​ಗೆ 2 ಸಾವಿರ ರೂ‌.ನಂತೆ ಎಲ್ಲರಿಗೂ ಮರಳು ವಿತರಣೆ ಮಾಡುತ್ತೇವೆ ಎಂದು ಅವರು ಹೇಳಿದರು.

ಬಿಜೆಪಿ ಜಿಲ್ಲಾ ವಕ್ತಾರ ರಾಧಾಕೃಷ್ಣನ್

ಸಂಸದ ನಳಿನ್ ಕುಮಾರ್ ಅವರ ಮಾತಿಗೆ ನಿನ್ನೆ ಮಾಜಿ ಸಚಿವ ರಮಾನಾಥ ರೈಯವರು ಸುದ್ದಿಗೋಷ್ಠಿಯೊಂದರಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು. ಅದಕ್ಕೆ ಈ ಮೂಲಕ ಸ್ಪಷ್ಟನೆ ನೀಡಿದ್ದೇವೆ. ಆದರೆ ಸುದ್ದಿಗೋಷ್ಠಿಯಲ್ಲಿ ರಮಾನಾಥ ರೈಯವರೊಂದಿಗೆ ಮರಳು ಮಾಫಿಯಾದಲ್ಲಿ ತೊಡಗಿಸಿಕೊಂಡವರೇ ಇದ್ದರು.‌ ರಮಾನಾಥ ರೈಯರ ಅಂದು ಹೇಳಿದನ್ನು ಕಂಡಾಗ ಬಹುಶಃ ಅವರ ಕಾಲದಲ್ಲಿದ್ದಂತೆ ಮರಳಿಗೆ 15-20 ಸಾವಿರ ರೂ. ಇರಲಿ ಎಂದು ಅಪೇಕ್ಷೆ ಎಂದೆನಿಸುತ್ತದೆ ಎಂದು ತಿರುಗೇಟು ನೀಡಿದರು.

ಈ ಮಾಫಿಯಾಗಳು ಹೊಸ ಮರಳು ನೀತಿ ಜಾರಿಗೆ ಬಾರದಂತೆ ಪಿತೂರಿ ಮಾಡುವ ವ್ಯವಸ್ಥೆ ಇದೆ. ಅದರ ಬಗ್ಗೆ ದ.ಕ.ಜಿಲ್ಲಾ ಬಿಜೆಪಿ ಪಕ್ಷ ಸಂಸದರು, ಶಾಸಕರುಗಳ ನೇತೃತ್ವದಲ್ಲಿ ಹೋರಾಟ ನಡೆಸಿ ಉತ್ತಮವಾದ ನೂತನ ಮರಳು ನೀತಿಯನ್ನು ಜಾರಿಗೆ ತರಲಿದೆ ಎಂದು ಹೇಳಿದರು.

ಡಿಸಿಯವರು 1,200 ರೂ. ನಲ್ಲಿ ನೇರವಾಗಿ ಟೆಂಡರ್ ಮೂಲಕ ಖರೀದಿಸಬಹುದು ಎಂದು ಹೇಳಿದರೆ, ನೀವು 2 ಸಾವಿರ ರೂ. ಎಂದು ಹೇಳುತ್ತಿದ್ದೀರಿ ಎಂಬ ಸುದ್ದಿಗಾರರೊಬ್ಬರ ಪ್ರಶ್ನೆಗೆ ರಾಧಾಕೃಷ್ಣನ್ ಅವರು ಪ್ರತಿಕ್ರಿಯಿಸಿ, ಮರಳು ಸಾಗಾಟದ ಲಾರಿ ವೆಚ್ಚ, ಕೆಲಸಗಾರರ ಸಂಬಳ ಸೇರಿ ಇಷ್ಟು ವೆಚ್ಚವಾಗುತ್ತದೆ. ಈ ಬಗ್ಗೆ ತಾಲೂಕು ತಾಲೂಕಿನಲ್ಲಿ ಬ್ಲಾಕ್ ಮಾಡಲಾಗುತ್ತದೆ. ಇದು ಅಂತಿಮಮವೂ ಅಲ್ಲ. ಬೇರೆ ಇನ್ನಷ್ಟು ನಿಯಮಾವಳಿಗಳು ಸೇರಲಿರುತ್ತದೆ ಎಂದು ಹೇಳಿದರು.

ಹಾಗಾದರೆ ಕನಿಷ್ಠ ಆರು ಸಾವಿರ ರೂ.ಗೆ ಮರಳು ದೊರೆಯಲಿದೆಯೇ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಧಾಕೃಷ್ಣನ್ ಯುನಿಟ್ ಗೆ ಎರಡು ಸಾವಿರವೆಂದರೆ ತಲುಪಲೇಬೇಕು ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.