ETV Bharat / state

ಚಂಡಮಾರುತ ಹೊಡೆತಕ್ಕೆ ಮುಳುಗಿದ್ದ ಬಾರ್ಜ್: ಈಜಿ ದಡ ಸೇರಿದ ದಕ್ಷಿಣ ಕನ್ನಡದ ಸಾಹಸಿಗರು - ರೋಪಿನ ಮೂಲಕ ರಕ್ಷಣೆ,

ಇತ್ತೀಚೆಗೆ ಅರಬ್ಬೀ ಸಮುದ್ರದಲ್ಲಿ ಬಾರ್ಜ್​ ಮುಳುಗಿ ಭಾರಿ ಅನಾಹುತ ಸಂಭವಿಸಿತ್ತು. ಇದರಲ್ಲಿ ಬಹುತೇಕರು ಉಸಿರು ಚೆಲ್ಲಿದ್ದರು. ತೌಕ್ತೆ ಚಂಡಮಾರುತದಿಂದ ಬಾರ್ಜ್​ ಮುಳುಗಡೆಯಾದರೂ ಸುಮಾರು 10 ಗಂಟೆಗಳ ಕಾಲ ಸಮುದ್ರದಲ್ಲಿ ಈಜಿ ಬದುಕುಳಿದ ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರು ಯುವಕರಿಗೆ ಒಎನ್​ಜಿಸಿ 1 ಲಕ್ಷ ರೂ. ನೀಡಿದೆ.

Chevanraj J V and Sukumar
ಚ್ಯವನ್ರಾಜ್ ಜೆ.ವಿ ಹಾಗೂ ಸುಕುಮಾರ್
author img

By

Published : Jun 2, 2021, 4:57 PM IST

Updated : Jun 2, 2021, 5:15 PM IST

ಬಂಟ್ವಾಳ: ಮುಂಬೈನಲ್ಲಿ ಇಂಧನ ಸಂಸ್ಥೆ ಒಎನ್​ಜಿಸಿಯ ರಿಗ್ ಮರುಜೋಡಣೆ(ರಿಲಾಂಚಿಂಗ್) ಕಾರ್ಯದಲ್ಲಿ ನಿರತರಾಗಿದ್ದ ವೇಳೆ ತೌಕ್ತೆ ಚಂಡಮಾರುತದಿಂದ ಬಾರ್ಜ್​ ಮುಳುಗಡೆಯಾಗಿತ್ತು. ಈ ವೇಳೆ ಸುಮಾರು 10 ಗಂಟೆಗಳ ಕಾಲ ಸಮುದ್ರದ ನೀರಿನಲ್ಲಿಯೇ ಈಜಿ ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರು ಯುವಕರು ಬದುಕಿ ಬಂದಿದ್ದಾರೆ. ಇವರು ತಮ್ಮ ಸಾಹಸ ಮತ್ತು ಧೈರ್ಯದಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಬದುಕಿ ಬಂದವರಲ್ಲಿ ಒಬ್ಬರು ಬಂಟ್ವಾಳದವರಾದರೆ, ಮತ್ತೊಬ್ಬರು ತೊಕ್ಕೊಟ್ಟಿನವರು. ಬಾರ್ಜ್​ನಲ್ಲಿ ಸುಮಾರು 260 ಮಂದಿ ಕೆಲಸ ಮಾಡುತ್ತಿದ್ದು, ಅದರಲ್ಲಿ ಕರ್ನಾಟಕದ ತೊಕ್ಕೊಟ್ಟು ಕಲ್ಲಾಪಿನ ಚ್ಯವನ್ರಾಜ್ ಜೆ.ವಿ ಹಾಗೂ ಬಂಟ್ವಾಳ ಪಾಣೆಮಂಗಳೂರಿನ ಸುಕುಮಾರ್ ಅವರು ಕೂಡ ಕಾರ್ಯನಿರ್ವಹಿಸುತ್ತಿದ್ದರು. ಮೆಕ್ಯಾನಿಕಲ್ ಇಂಜಿನಿಯರ್​ಗಳಾದ ಅವರು ಸುಮಾರು ಎರಡೂವರೆ ವರ್ಷಗಳಿಂದ ತಮ್ಮ ಕಂಪನಿಯ ಮೂಲಕ ಬಾರ್ಜ್​ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

ಬದುಕುವ ಆಸೆಯನ್ನೇ ಮರೆತು ಹರಸಾಹಸ

ಮೇ 17ರಂದು ಸಂಜೆ ಸುಮಾರು 4-5 ಗಂಟೆಯ ಸುಮಾರಿಗೆ ಇವರ ಬಾರ್ಜ್ ಮುಳುಗಲು ಆರಂಭಿಸಿತ್ತು. ಆಗ ಇವರು ಜೀವರಕ್ಷಣೆಗಾಗಿ ಸಮುದ್ರಕ್ಕೆ ಹಾರಿದ್ದಾರೆ. ಲೈಫ್​ ಜಾಕೆಟ್​ ಇದ್ದರೂ, ಅಲೆಗಳ ಅಬ್ಬರಕ್ಕೆ ಸಾಕಷ್ಟು ಬಾರಿ ಮುಳುಗಿ ಬಂದಿದ್ದಾರೆ. ರಾತ್ರಿಯಾಗುತ್ತಿದ್ದಂತೆ ಏನೂ ಕಾಣದೆ, ಸಂಪೂರ್ಣ ಕತ್ತಲ ನಡುವೆ ನೀರ ರಾಶಿಯಲ್ಲಿ ಬದುಕುವ ಆಸೆಗಳನ್ನೇ ಮರೆತು ಹರಸಾಹಸ ಪಟ್ಟಿದ್ದಾರೆ.

ರೋಪಿನ ಮೂಲಕ ರಕ್ಷಣೆ

ಎತ್ತ ಸಾಗುತ್ತಿದ್ದೇವೆ ಎಂಬ ಅರಿವೇ ಇಲ್ಲದೆ ನೀರಿನಲ್ಲಿ ಈಜಾಡಿದ್ದಾರೆ. ಅದೃಷ್ಟವಶಾತ್​ ರಾತ್ರಿಯಿಡೀ ಹೋರಾಟದ ಬಳಿಕ ಮೇ 18ರ ಮುಂಜಾನೆ 3-4 ಗಂಟೆಯ ಹೊತ್ತಿಗೆ ಇಂಡಿಯನ್ ನೇವಿಯವರು ಇವರನ್ನು ಗುರುತಿಸಿ ರಕ್ಷಣೆ ಮಾಡಿದ್ದಾರೆ. ಆ ಸಮಯಕ್ಕೆ ದೇಹದ ಶಕ್ತಿಯನ್ನು ಸಂಪೂರ್ಣ ಕಳೆದುಕೊಂಡಿದ್ದ ಇವರನ್ನು ರೋಪಿನ ಮೂಲಕ ಮೇಲಕ್ಕೆತ್ತಲಾಯಿತು.

ಒಎನ್​ಜಿಸಿಯಿಂದ 1 ಲಕ್ಷ ರೂ. ವಿತರಣೆ

ಉಪ್ಪು ನೀರಿನ ಪರಿಣಾಮ ರಕ್ಷಣೆಯ ಬಳಿಕ ಸುಮಾರು 4 ಗಂಟೆಗಳ ಕಾಲ ಇವರ ಕಣ್ಣುಗಳು ಕೂಡ ಮಂಜಾಗಿ ಏನೂ ಕಾಣುತ್ತಿರಲಿಲ್ಲ. ಬಳಿಕ ಕಣ್ಣಿನ ಔಷಧವನ್ನು ಹಾಕಿ ಆರೈಕೆ ಮಾಡಿದ ಬಳಿಕ ನಿಧಾನಕ್ಕೆ ಗೋಚರತೆ ಅನುಭವ ಆಯಿತು. ಸುಮಾರು 3 ದಿನಗಳವರೆಗೆ ಆಯಾಸ ಇದ್ದು, ಸದ್ಯಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಯುವಕರಿಬ್ಬರು ಹೇಳಿದ್ದಾರೆ. ಈ ಇಬ್ಬರು ಯುವಕರ ಸಾಹಸಕ್ಕೆ ದ. ಕ. ಸಂಸದ ನಳಿನ್​ ಕುಮಾರ್​ ಕಟೀಲ್​ ಅವರ ಶಿಫಾರಸ್ಸಿನ ಮೇರೆಗೆ ಒಎನ್​ಜಿಸಿ 1 ಲಕ್ಷ ರೂ.ಗಳನ್ನು ನೀಡಿದೆ.

ಓದಿ: ಶ್ರೀನಿವಾಸ ಪ್ರಸಾದ್ ರಹಸ್ಯ ಭೇಟಿ ನಂತರ ಹಳ್ಳಿಹಕ್ಕಿ ಅಚ್ಚರಿಯ ಹೇಳಿಕೆ!

Last Updated : Jun 2, 2021, 5:15 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.