ಮಂಗಳೂರು (ದ.ಕ): ದಮಾಮ್, ಯುಎಇ ಹಾಗೂ ದುಬೈನಲ್ಲಿ ಸಂಕಷ್ಟಕ್ಕೊಳಗಾಗಿರುವ ಅನಿವಾಸಿ ಕನ್ನಡಿಗರನ್ನು ತಾಯ್ನಾಡಿಗೆ ಹೊತ್ತು ತಂದ ಚಾರ್ಟರ್ಡ್ ವಿಮಾನಗಳು ಮಂಗಳೂರು ವಿಮಾನ ನಿಲ್ದಾಣವನ್ನು ತಲುಪಿದೆ.
ದಮಾಮ್ ವಿಮಾನ ನಿಲ್ದಾಣದಿಂದ ಅನಿವಾಸಿ ಕನ್ನಡಿಗರ ಸಂಘಟನೆ ಕರ್ನಾಟಕ ಕಲ್ಚರಲ್ ಫೌಂಡೇಶನ್(ಕೆಸಿಎಫ್) ಆಯೋಜಿಸಿದ ಸ್ಪೈಸ್‌ಜೆಟ್ ಚಾರ್ಟರ್ಡ್ ವಿಮಾನವು ಸಂಜೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.
ಈ ವಿಮಾನದಲ್ಲಿ ರೋಗಿಗಳು, ಗರ್ಭಿಣಿಯರು ಮತ್ತು ಮಕ್ಕಳು ಸಹಿತ 188 ಪ್ರಯಾಣಿಕರು ಸುರಕ್ಷಿತವಾಗಿ ಮಂಗಳೂರು ತಲುಪಿದ್ದಾರೆ. ಬಂದಿರುವ ಎಲ್ಲರನ್ನೂ ಖಾಸಗಿ ಹೋಟೆಲ್‌ನಲ್ಲಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.
ಅದೇ ರೀತಿ ಕೊರೊನಾದಿಂದಾಗಿ ದುಬೈ ಮತ್ತು ಯುಎಇಯಲ್ಲಿ ಸಿಲುಕಿದ್ದ 181 ಜನರನ್ನು ಹೊತ್ತ 2ನೇ ಚಾರ್ಟರ್ಡ್ ವಿಮಾನ ಬುಧವಾರ ದುಬೈನಿಂದ ಮಂಗಳೂರಿಗೆ ತಲುಪಿತ್ತು.