ಮಂಗಳೂರು: ಒಎಲ್ಎಕ್ಸ್ನಲ್ಲಿ ಸೊತ್ತು ಮಾರಾಟ ಮಾಡಲು ಹೋಗಿ ವ್ಯಕ್ತಿಯೋರ್ವ 16 ಸಾವಿರ ರೂ. ಕಳೆದುಕೊಂಡಿರುವ ಘಟನೆ ನಡೆದಿದೆ.
ಒಎಲ್ಎಕ್ಸ್ನಲ್ಲಿ 4 ಸಾವಿರ ರೂ.ಗೆ ತಮ್ಮ ಸೊತ್ತು ಮಾರಾಟ ಮಾಡಲು ಜಾಹೀರಾತು ಹಾಕಿದ್ದರು. ಈ ಜಾಹೀರಾತು ನೋಡಿ ರವಿವಾರ ಶ್ರೀಕಾಂತ್ ಎಂಬಾತ ಕರೆ ಮಾಡಿ, ಆ ಸೊತ್ತು ತನಗೆ ಬೇಕು ಎಂದಿದ್ದ. ಅಲ್ಲದೆ ತಾನು ಕಳುಹಿಸಿರುವ ಕ್ಯೂಆರ್ ಕೋಡ್ನನ್ನು ಸ್ಕ್ಯಾನ್ ಮಾಡಲು ತಿಳಿಸಿದ್ದಾನೆ.
ಓದಿ:ಪಣಂಬೂರು ಬೀಚ್ಗೆ ಹರಿದು ಬರುತ್ತಿದೆ ಜನಸಾಗರ... ಇಲ್ಲಿಲ್ಲ ಕೊರೊನಾ ಭಯ!
ಆದ್ದರಿಂದ ಫಿರ್ಯಾದಿದಾರರು ಆತ ಹೇಳಿದಂತೆ ಕ್ಯೂಆರ್ ಕೋಡ್ ಮೂರು ಬಾರಿ ಸ್ಕ್ಯಾನ್ ಮಾಡಿದ್ದಾರೆ. ಕೆಲವೇ ಕ್ಷಣಗಳಲ್ಲಿ ಅವರ ಆ್ಯಕ್ಸಿಸ್ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ 16 ಸಾವಿರ ರೂ. ಕಟ್ ಆಗಿದೆ. ಆಗ ಅವರಿಗೆ ತಾವು ಮೋಸ ಹೋಗಿರೋದು ತಿಳಿದು ಬಂದಿದೆ. ಮಂಗಳೂರು ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.