ETV Bharat / state

ಅನಿವಾಸಿ ಭಾರತೀಯ ವಕ್ವಾಡಿ ಪ್ರವೀಣ್ ಕುಮಾರ್​ಗೆ 10 ವರ್ಷಗಳ ದುಬೈ ಗೋಲ್ಡನ್ ವೀಸಾ! - Mnaglore NRI Bagwadi Praveen Kumar News

ಈ ಹೋಟೆಲನ್ನು ವೀಕ್ಷಿಸಲು ದುಬೈನ ಡೈರೆಕ್ಟರ್ ಜನರಲ್ ಆಫ್ ಡಿಟಿಸಿಎಂ ಹೆಲಾಲ್ ಸಯೀದ್ ಅಲ್-ಮರಿಯವರು ಬಂದಿದ್ದು, ಇದೊಂದು ಗೌರವದ ವಿಚಾರ. ಕೊರೊನಾ ಭೀತಿಯ ಕಾಲದಲ್ಲಿಯೂ ಇಂತಹ ಬೃಹತ್, ವಿಶೇಷ ಸವಲತ್ತುಗಳನ್ನು ಹೊಂದಿರುವ ಹೋಟೆಲ್ ನಿರ್ಮಾಣದ ಬಗ್ಗೆ ಹೆಲಾಲ್ ಸಯೀದ್ ಅಲ್-ಮರಿಯವರು ಸಂತೋಷ ವ್ಯಕ್ತಪಡಿಸಿದ್ದರು..

Bhagwadi Praveen Kumar
ದುಬೈಯ ಡೈರೆಕ್ಟರ್ ಜನರಲ್ ಆಫ್ ಡಿಟಿಸಿಎಂ ಹೆಲಾಲ್ ಸಯೀದ್ ಅಲ್-ಮರಿ ಭೇಟಿ
author img

By

Published : Jan 8, 2021, 5:18 PM IST

Updated : Jan 8, 2021, 8:04 PM IST

ಮಂಗಳೂರು : ಅನಿವಾಸಿ ಭಾರತೀಯ, ಪ್ರತಿಷ್ಠಿತ ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ ಮಾಲೀಕ ಕುಂದಾಪುರ ಮೂಲದ ವಕ್ವಾಡಿ ಪ್ರವೀಣ್ ಕುಮಾರ್ ಅವರಿಗೆ 10 ವರ್ಷಗಳ ದುಬೈ ಗೋಲ್ಡನ್ ವೀಸಾ ಲಭ್ಯವಾಗಿದೆ. ದುಬೈನಲ್ಲಿ ಬೆರಳೆಣಿಕೆಯಷ್ಟು ಭಾರತೀಯರಿಗೆ ಮಾತ್ರ ಈ ಗೋಲ್ಡನ್ ವೀಸಾ ಲಭ್ಯವಾಗಿದೆ. ಇದು ಬಹಳ ಗೌರವ ಹಾಗೂ ಪ್ರತಿಷ್ಠೆಯ ವಿಚಾರ. ಈ ರೀತಿ ಗೋಲ್ಡನ್ ವೀಸಾ ಪಡೆದ ಕರಾವಳಿಯ ಎರಡನೆಯ ವ್ಯಕ್ತಿ ಪ್ರವೀಣ್‌ ಕುಮಾರ್‌‌.

ವಕ್ವಾಡಿ ಪ್ರವೀಣ್ ಶೆಟ್ಟಿಯವರು ದುಬೈನಲ್ಲಿ ಏಳು ಫಾರ್ಚೂನ್ ಗ್ರೂಪ್ ಹೋಟೆಲ್​ನ ಮಾಲೀಕರಾಗಿದ್ದಾರೆ‌. ಇವರು ಇತ್ತೀಚೆಗೆ ದುಬೈನಲ್ಲಿ ಹೊಸದಾಗಿ 4 ಸ್ಟಾರ್ ಹೋಟೆಲ್ ಆರಂಭಿಸಿದ್ದು, ಫಾರ್ಚೂನ್ ಅಕ್ಕಿಯಮ್ ಹೋಟೆಲ್ ಎಂಬ ಹೆಸರಿನ ಇದು ಭವ್ಯವಾಗಿಯೂ, ವಿಶೇಷ ಸವಲತ್ತುಗಳನ್ನು ಹೊಂದಿರುವ ಹೋಟೆಲ್ ಆಗಿದೆ.

Bhagwadi Praveen Kumar
ದುಬೈಯ ಡೈರೆಕ್ಟರ್ ಜನರಲ್ ಆಫ್ ಡಿಟಿಸಿಎಂ ಹೆಲಾಲ್ ಸಯೀದ್ ಅಲ್-ಮರಿ ಭೇಟಿ

ಈ ಹೋಟೆಲನ್ನು ವೀಕ್ಷಿಸಲು ದುಬೈನ ಡೈರೆಕ್ಟರ್ ಜನರಲ್ ಆಫ್ ಡಿಟಿಸಿಎಂ ಹೆಲಾಲ್ ಸಯೀದ್ ಅಲ್-ಮರಿಯವರು ಬಂದಿದ್ದು, ಇದೊಂದು ಗೌರವದ ವಿಚಾರ. ಕೊರೊನಾ ಭೀತಿಯ ಕಾಲದಲ್ಲಿಯೂ ಇಂತಹ ಬೃಹತ್, ವಿಶೇಷ ಸವಲತ್ತುಗಳನ್ನು ಹೊಂದಿರುವ ಹೋಟೆಲ್ ನಿರ್ಮಾಣದ ಬಗ್ಗೆ ಹೆಲಾಲ್ ಸಯೀದ್ ಅಲ್-ಮರಿಯವರು ಸಂತೋಷ ವ್ಯಕ್ತಪಡಿಸಿದ್ದರು.

ಈ ಬಗ್ಗೆ ಹೋಟೆಲ್​ನ ಮಾಲೀಕ ವಕ್ವಾಡಿ ಪ್ರವೀಣ್ ಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿರುವ ಹೆಲಾಲ್ ಸಯೀದ್ ಅಲ್-ಮರಿಯವರು, 10 ನಿಮಿಷಕ್ಕೆಂದು ಬಂದವರು ಸುಮಾರು 40 ನಿಮಿಷ ಕಾಲ ಕಾಲಕಳೆದರು.

ಹೋಟೆಲ್ ವ್ಯವಸ್ಥೆಯನ್ನು ಕಂಡು ಸಂತೋಷಗೊಂಡು ಗೋಲ್ಡನ್ ವೀಸಾ ನೀಡಿರುವುದಲ್ಲದೆ ದುಬೈ ಪ್ರವಾಸೋದ್ಯಮ ಇಲಾಖೆಯಿಂದ ಯಾವ ಸಹಾಯ ಬೇಕಾದ್ರೂ ನೀಡುವ ಭರವಸೆ ನೀಡಿದರು. ಅಲ್ಲದೆ ಹೋಟೆಲ್​ನ ಎಲ್ಲರಿಗೂ ಉಚಿತ ಕೊರೊನಾ ಲಸಿಕೆ ನೀಡುವ ಆಶ್ವಾಸನೆಯನ್ನ ಹೆಲಾಲ್ ಸಯೀದ್ ಅಲ್-ಮರಿಯವರು ನೀಡಿದ್ದಾರೆ.

Last Updated : Jan 8, 2021, 8:04 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.