ಚಿತ್ರದುರ್ಗ: ಜಿಲ್ಲಾ ಪಂಚಾಯತಿ ಉಪಾಧ್ಯಕ್ಷ ಸ್ಥಾನ ಅಂದ್ರೆ ಡಮ್ಮಿನಾ...? ಸದಸ್ಯರಾಗಲಿ, ಅಧಿಕಾರಿಗಳಾಗಲಿ, ಪ್ರತಿಯೊಂದು ವಿಷಯಕ್ಕೂ ಅಧ್ಯಕ್ಷರೇ ಅಂತೀರಾ. ನಾನಂದ್ರೆ ಯಾರಿಗೂ ಲೆಕ್ಕಕ್ಕಿಲ್ಲ ಎಂದು ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಎನ್.ಪಿ.ಸುಶೀಲಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಇಂದು ನಡೆದ ಜಿಪಂ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಇದುವರೆಗೂ ಯಾವೊಬ್ಬ ಅಧಿಕಾರಿ ಮುಖವನ್ನು ನಾನು ನೋಡಿಲ್ಲ. ಯಾರ ಬಳಿಯೂ ನನ್ನ ನಂಬರ್ ಕೂಡ ಇಲ್ಲ. ಎಲ್ಲರೂ ಅಧ್ಯಕ್ಷರೇ ಅಂತಾರೆ. ಉಪಾಧ್ಯಕ್ಷರು ಎಂದರೆ ಲೆಕ್ಕಕ್ಕಿಲ್ಲ ಅಂತಾನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾನಿಲ್ಲಿ ಇದ್ದೀನಿ ಅನ್ನೋದನ್ನ ಎಲ್ಲರೂ ಮರೆತಿದ್ದಾರೆ. ವಾಪಸ್ ಹೋಗ್ತಿನಿ ನೀವೇ ಸಭೆ ಮಾಡಿಕೊಳ್ಳಿ ಅಂತ ಎದ್ದು ಸಭೆಯಿಂದ ಹೊರ ನಡೆಯಲು ಮುಂದಾದರು. ಇನ್ನೂ ನನ್ನ ಕಚೇರಿಗೆ ಯಾವೊಬ್ಬ ಅಧಿಕಾರಿಯೂ ಬರೋದಿಲ್ಲ. ನನ್ನ ಏನನ್ನೂ ಕೇಳೋದಿಲ್ಲ ಎಂದು ಬೇಸರಗೊಂಡರು.
ಯಾವೊಬ್ಬ ಅಧಿಕಾರಿಯ ಮುಖವನ್ನೂ ನೋಡಿಲ್ಲ ಎಂದು ಸುಶೀಲಮ್ಮ ಹೇಳುತ್ತಿದ್ದಂತೆ ಅಧಿಕಾರಿಗಳು ಎದ್ದು ನಿಂತುಕೊಂಡರು.