ಚಿತ್ರದುರ್ಗ: ಗಂಡನನ್ನು ಹುಡುಕಿಕೊಂಡು ಬಂದಿದ್ದ ಪತ್ನಿ ಮತ್ತು ಆಕೆಯ ಗೆಳೆಯ ಇಬ್ಬರೂ ನೇಣಿಗೆ ಶರಣಾಗಿರುವ ಘಟನೆ ಚಿತ್ರದುರ್ಗ ನಗರದ ಲಕ್ಷ್ಮೀ ಬಜಾರ್ನಲ್ಲಿರುವ ಬೃಂದಾವನ ಲಾಡ್ಜ್ನಲ್ಲಿ ನಡೆದಿದೆ.
ಮೃತರು ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕು ಮೂಲದವರು ಎನ್ನಲಾಗಿದೆ. ಇಬ್ಬರು ಮಕ್ಕಳು ಮಲಗಿದ್ದ ವೇಳೆ ಮೃತ ಪವನ್ ಗೆಳತಿಯನ್ನು ಕೊಲೆ ಮಾಡಿ ತಾನೂ ನೇಣು ಬಿಗಿದುಕೊಂಡಿರುವ ಶಂಕೆ ವ್ಯಕ್ತವಾಗಿದೆ. ವೇಲ್ನಿಂದ ನೇಣು ಬಿಗಿದ ಸ್ಥಿತಿಯಲ್ಲಿ ಬೃಂದಾವನ ಲಾಡ್ಜ್ನಲ್ಲಿ ಇಬ್ಬರ ಶವ ಪತ್ತೆಯಾಗಿದೆ.
ಇನ್ನು ಇಬ್ಬರೂ ಒಂದೇ ಕಡೆ ನೇಣಿಗೆ ಶರಣಾಗಿರುವುದು ಅಕ್ರಮ ಸಂಬಂಧದ ಶಂಕೆ ವ್ಯಕ್ತವಾಗಿದೆ. ವಿಷಯ ತಿಳಿದ ಚಿತ್ರದುರ್ಗ ನಗರ ಠಾಣೆ ಸಿಪಿಐ ಫೈಜುಲ್ಲಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವ ಮೂಲಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.