ETV Bharat / state

ಭದ್ರಾ ಜಲಾಶಯದಿಂದ ವಿವಿ ಸಾಗರಕ್ಕೆ ನೀರು.. 100 ಅಡಿ ತಲುಪಿದ ನೀರಿನ ಮಟ್ಟ - ಚಿತ್ರದುರ್ಗ ಜಿಲ್ಲೆಯ ವಿವಿ ಸಾಗರಕ್ಕೆ ಭದ್ರಾ ಜಲಾಶಯದಿಂದ ನೀರು ಬಿಡುಗಡೆ

ಜಲಾಶಯಕ್ಕೆ ನೀರು ಹರಿದು ಬರುತ್ತಿರುವುದ್ದನ್ನು ವೀಕ್ಷಿಸಲು ಪ್ರವಾಸಿಗರು ಹಾಗೂ ರೈತರ ದಂಡು ಜಲಾಶಯದತ್ತ ಬರುತ್ತಿದ್ದಾರೆ. 11 ಟಿಎಂಸಿ ನೀರು ಜಲಾಶಯದಲ್ಲಿ ಸಂಗ್ರಹವಾಗಿದ್ದು, ನೀರಿನ ಮಟ್ಟ 100.05 ಅಡಿಗೆ ತಲುಪಿದೆ..

ಭದ್ರಾ ಜಲಾಶಯದಿಂದ ವಿವಿ ಸಾಗರಕ್ಕೆ ನೀರು
Water released from Bhadra Reservoir to Vani Vilasapura Dam
author img

By

Published : Nov 9, 2020, 2:02 PM IST

ಚಿತ್ರದುರ್ಗ: ಜಿಲ್ಲೆಯ ಜೀವನಡಿಯಾಗಿರುವ ವಾಣಿ ವಿಲಾಸ ಸಾಗರಕ್ಕೆ ಎರಡನೇ ಬಾರಿ ನೀರು ಹರಿಸಲಾಗಿದೆ. ಭದ್ರಾ ಜಲಾಶಯದಿಂದ 450 ಕ್ಯೂಸೆಕ್ ನೀರು ಹರಿಸಿದ್ದರಿಂದ ವಿವಿ ಜಲಾಶಯದ ನೀರಿನ ಮಟ್ಟ 100 ಅಡಿಗೆ ತಲುಪಿದೆ.

ಈ ಹಿಂದೆ ಜಲಾಶಯದ ನೀರಿನ ಮಟ್ಟ 91 ಅಡಿ ಇದ್ದು, ಕಳೆದೆರಡು ದಿನಗಳ ಹಿಂದೆ ತಾವರೆಕೆರೆ ಪಂಪ್ ಹೌಸ್‌ನಿಂದ ವಿವಿ ಸಾಗರಕ್ಕೆ ಪಂಪ್ ಮಾಡುವ ಮೂಲಕ ಪ್ರತಿದಿನ 450 ಕ್ಯೂಸೆಕ್ ನೀರನ್ನು ಹರಿಸಲಾಗಿದೆ. ಸತತ 57 ಬಾರಿ ವಿವಿ ಜಲಾಶಯ 100 ಅಡಿ ತಲುಪಿದ್ದು, ಇದೀಗ 58 ನೇ ಬಾರಿ 100 ಅಡಿಗೆ ತಲುಪಿದೆ.

ಜಲಾಶಯಕ್ಕೆ ನೀರು ಹರಿದು ಬರುತ್ತಿರುವುದ್ದನ್ನು ವೀಕ್ಷಿಸಲು ಪ್ರವಾಸಿಗರು ಹಾಗೂ ರೈತರ ದಂಡು ಜಲಾಶಯದತ್ತ ಬರುತ್ತಿದ್ದಾರೆ. 11 ಟಿಎಂಸಿ ನೀರು ಜಲಾಶಯದಲ್ಲಿ ಸಂಗ್ರಹವಾಗಿದ್ದು, ನೀರಿನ ಮಟ್ಟ 100.05 ಅಡಿಗೆ ತಲುಪಿದೆ.

ಭದ್ರಾ ಜಲಾಶಯದಿಂದ 650 ರಿಂದ 700 ಕ್ಯೂಸೆಕ್ ನೀರು ಹರಿಸುತ್ತಿದ್ದು, ಆ ನೀರು ಜಲಾಶಯಕ್ಕೆ 400 ರಿಂದ 450 ಕ್ಯೂಸೆಕ್ ಮಾತ್ರ ತಲುಪುತ್ತಿದೆ. ಇನ್ನು ಮಾರ್ಚ್ ಅಂತ್ಯದವರಿಗೆ ನೀರು ಹರಿಸಲಾಗುವುದೆಂದು ಹೇಳಲಾಗುತ್ತಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.