ETV Bharat / state

ಬಸವೇಶ್ವರ ವೈದ್ಯಕೀಯ ಕಾಲೇಜಿನಲ್ಲಿ ವಿವಿಧ ಸೇವೆಗಳಿಗೆ ಮುರುಘಾ ಶರಣರಿಂದ ಚಾಲನೆ - Muruga Shri Inaugurated Various Services Inaugurated in BMC

ಚಿತ್ರದುರ್ಗದ ಬಸವೇಶ್ವರ ವೈದ್ಯಕೀಯ ಕಾಲೇಜಿನಲ್ಲಿ ವಿವಿಧ ವೈದ್ಯಕೀಯ ಸೇವೆಗಳಿಗೆ ಚಾಲನೆ ನೀಡಲಾಯಿತು.

Various Services Inaugurated in Basaveshwara Medical Colllage
ಬಿಎಂಸಿಯಲ್ಲಿ ವಿವಿಧ ಸೇವೆಗಳಿಗೆ ಚಾಲನೆ
author img

By

Published : Mar 30, 2021, 6:17 PM IST

ಚಿತ್ರದುರ್ಗ : ನಗರದ ಬಸವೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಲ್ಲಿ ಸೂಪರ್ ಸ್ಪೆಷಾಲಿಟಿ ಒಪಿಡಿ ಬ್ಲಾಕ್, ಎಸ್.ಜೆ.ಎಂ ಹೆಲ್ತ್ ಪ್ರಿವಿಲೇಜ್ ಕಾರ್ಡ್ ಮತ್ತು ಉಚಿತ ಆ್ಯಂಬುಲೆನ್ಸ್ ಸೇವೆಗೆ ಮುರುಘಾ ಶರಣರು ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಶ್ರೀಮಂತರಾಗುವುದಕ್ಕಿಂತ ಆರೋಗ್ಯವಂತರಾಗಬೇಕು. ಪರಿಶ್ರಮ ಪಡುವವರಿಗೆ ಯಾವ ರೋಗವೂ ಬರುವುದಿಲ್ಲ. ಅವರಲ್ಲಿ ರೋಗ ನಿರೋಧಕ ಶಕ್ತಿ ಜಾಸ್ತಿ ಇರುತ್ತದೆ. ಪ್ರತಿಯೊಬ್ಬರೂ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು. ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಉತ್ತಮ ಮತ್ತು ಸುಸಜ್ಜಿತ ಆಸ್ಪತ್ರೆ ನಿರ್ಮಿಸಬೇಕೆಂಬ ಕನಸಿತ್ತು, ಅದರಲ್ಲಿ ಸಫಲರಾಗಿದ್ದೇವೆ. ನಮ್ಮಲ್ಲಿ ನುರಿತ ತಜ್ಞ ವೈದ್ಯರಿದ್ದಾರೆ. ಆಸ್ಪತ್ರೆಯಲ್ಲಿ ಹೃದೃರೋಗ, ತುರ್ತುಚಿಕಿತ್ಸಾ ವಿಭಾಗ, ಸಂಪೂರ್ಣ ಹೃದಯ ತಪಾಸಣೆ, 24x7 ಕ್ಯಾತ್‍ಲ್ಯಾಬ್, ಸಿಸಿಯು/ಐಸಿಯು, ಔಷಧಾಲಯ, ಹೃದಯ ತುರ್ತು ಚಿಕಿತ್ಸೆ, ಇಕೋ ಟಿಎಂಟಿ ಸೌಲಭ್ಯಗಳಿವೆ. ಇಂದು ಸೂಪರ್ ಸ್ಪೆಷಾಲಿಟಿ ಒಪಿಡಿ ತೆರೆಯಲಾಗಿದೆ. ಹಿರಿಯೂರು, ಚಿತ್ರದುರ್ಗ, ಹೊಳಲ್ಕೆರೆ ಮತ್ತು ಚಳ್ಳಕೆರೆಗೆ ಉಚಿತ ಆ್ಯಂಬುಲೆನ್ಸ್ ಸೇವೆಗೆ ಚಾಲನೆ ನೀಡಲಾಗಿದೆ. ಹೆಲ್ತ್ ಪ್ರಿವಿಲೇಜ್ ಕಾರ್ಡ್ ಬಿಡುಗಡೆಗೊಳಿಸಲಾಗಿದ್ದು, ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಉತ್ತಮ ಚಿಕಿತ್ಸೆ ಪಡೆಯಲು ಸಹಕಾರಿಯಾಗಲಿದೆ ಎಂದರು.

ಶಾಸಕ ತಿಪ್ಪಾರೆಡ್ಡಿ, ಜಿಲ್ಲಾಧಿಕಾರಿ ಕವಿತ ಮನ್ನಿಕೆರಿ ಸೇರಿದಂತೆ ಅನೇಕ ಗಣ್ಯರು ಇದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.