ಚಿತ್ರದುರ್ಗ : ಬಿಜೆಪಿ ನಾಯಕರು ಮಾಡಿರುವ ಸಿಡಿ ಆರೋಪದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಮುಖಂಡ ವಿ ಎಸ್ ಉಗ್ರಪ್ಪ ಆಗ್ರಹಿಸಿದರು. ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಮಿತ್ರರೊಂದಿಗೆ ಮಾತನಾಡಿದ ಅವರು, ಸಿಡಿಯಲ್ಲಿ ಏನಿದೆ ಎಂಬುದು ಅವರ ನಾಯಕರಿಗೆ ಗೊತ್ತಿದೆ ಎಂದರು.
ಹೆಚ್. ವಿಶ್ವನಾಥ್, ಸಿ ಪಿ ಯೋಗೇಶ್ವರ್, ರೇಣುಕಾಚಾರ್ಯ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಸಿಡಿ ಇರುವ ಬಗ್ಗೆ ಗೊತ್ತಿದೆ. ಯತ್ನಾಳ್ ಅವರು ಸಿಡಿ ನೋಡಿರುವುದಾಗಿ ಹೇಳಿದ್ದಾರೆ. ಸಿಡಿಯಲ್ಲಿ ಭ್ರಷ್ಟಾಚಾರದ ವಿಡಿಯೋ ಇದಿಯೋ ಅಥವಾ ಬೇರೆ ಇದೆಯೋ ನನಗೆ ಗೊತ್ತಿಲ್ಲ. ಈ ಕುರಿತು ನ್ಯಾಯಾಂಗ ತನಿಖೆ ಆಗುವಂತೆ ಒತ್ತಾಯಿಸಿದರು.
ಓದಿ: ಸಿಡಿ ಆರೋಪ, ಆಪರೇಷನ್ ಕಮಲದಲ್ಲಿ ಹಣದ ಪ್ರಭಾವದ ಬಗ್ಗೆ ತನಿಖೆಯಾಗಲಿ: ಸಿದ್ದರಾಮಯ್ಯ ಒತ್ತಾಯ
ಇನ್ನು, ಸಿಡಿಯಲ್ಲಿ ಏನೂ ಇಲ್ಲ ಅಂದಿದ್ರೆ ನ್ಯಾಯಾಂಗ ತನಿಖೆಗೆ ಆದೇಶ ಮಾಡಿ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಸವಾಲೆಸೆದರು. ಸಿಡಿ ಕುರಿತು ಭಯವಿಲ್ಲದಿದ್ದರೆ, ತನಿಖೆ ಮಾಡಿಸಬೇಕು. ಈ ವಿಚಾರವಾಗಿ ಸಿಎಂ ಬಿಎಸ್ವೈ ಸಂಪೂರ್ಣ ಮೌನವಾಗಿದ್ದಾರೆ. ಇದನ್ನೆಲ್ಲ ನೋಡಿದ್ರೆ ಸಿಡಿಯಲ್ಲಿ ಏನೋ ಇದೆ ಎಂದು ತಿಳಿಯುತ್ತದೆ ಎಂದರು.
ದುಡ್ಡು ತಗೊಂಡು, ಬಕೆಟ್ ಹಿಡಿಯುವವರಿಗೆ ಹಾಗೂ ಬ್ಲ್ಯಾಕ್ಮೇಲ್ ಮಾಡುವವರಿಗೆ ಸಚಿವ ಸ್ಥಾನ ನೀಡುತ್ತಿದ್ದಾರೆ ಎಂದು ಅವರ ಪಕ್ಷದವರು ಹೇಳುತ್ತಿದ್ದಾರೆ. ಆದ್ದರಿಂದ ಸಿಡಿಯಲ್ಲಿ ಏನೋ ಇದೆ ಎಂಬ ಸಂಶಯ ವ್ಯಕ್ತಪಡಿಸಿದರು.