ETV Bharat / state

ಬಳ್ಳಾರಿ ಜಿಲ್ಲೆಗೆ ಮೊಳಕಾಲ್ಮೂರು ತಾಲೂಕು ಸೇರ್ಪಡೆಗೆ ಪರ-ವಿರೋಧ

ಕಲಂ 371ಜೆ ಆ್ಯಕ್ಟ್ ಪ್ರಕಾರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಮೊಳಕಾಲ್ಮೂರ‌ನ್ನು ಬಳ್ಳಾರಿ ಜಿಲ್ಲೆಗೆ ಸೇರಿಸಬೇಕೆಂಬುದು ಈ ಭಾಗದ ಜನರ ಬೇಡಿಕೆ. ಮೊಳಕಾಲ್ಮೂರಿಂದ‌ ಚಿತ್ರದುರ್ಗ ಜಿಲ್ಲಾ ಕೇಂದ್ರ ದೂರ ಇರುವುದರಿಂದ ಈ ನಿರ್ಧಾರ‌ ಕೈಗೊಳ್ಳಲಾಗಿದೆಯಂತೆ..

author img

By

Published : Nov 27, 2020, 9:35 PM IST

ಬಳ್ಳಾರಿ ಜಿಲ್ಲೆಗೆ ಮೊಳಕಾಲ್ಮೂರು ಸೇರಿಸಲು ಆಗ್ರಹ

ಚಿತ್ರದುರ್ಗ : ಬಳ್ಳಾರಿಯಿಂದ ವಿಜಯನಗರವನ್ನು ಜಿಲ್ಲೆಯಾಗಿ ವಿಭಜಿಸಿದ ಬಳಿಕ ಮೊಳಕಾಲ್ಮೂರನ್ನು‌ ಬಳ್ಳಾರಿ ಜಿಲ್ಲೆಗೆ ಸೇರಿಸಿ ಎಂಬ ಕೂಗು ಕೇಳಿ ಬರುತ್ತಿದೆ.

ಬಳ್ಳಾರಿ ಜಿಲ್ಲೆಯಿಂದ ವಿಜಯನಗರ ವಿಭಜನೆಗೆ ಬಳ್ಳಾರಿಗರು ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ, ಚಿತ್ರದುರ್ಗ ಜಿಲ್ಲೆಯ ಗಡಿ ತಾಲೂಕು ಮೊಳಕಾಲ್ಮೂರನ್ನು ಬಳ್ಳಾರಿಗೆ ಸೇರಿಸಬೇಕು ಎಂಬುದು ಈ ಭಾಗದ ಜನರ ಒತ್ತಾಸೆಯಾಗಿದೆ.

ಕರ್ನಾಟಕ ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರ ಜಿಲ್ಲೆ ಗುರುತಿಸಿಕೊಳ್ಳಲಿದೆ. ಇದಕ್ಕೆ ರಾಜ್ಯ ಬಿಜೆಪಿ ಸರ್ಕಾರ ಕೂಡ ಅಸ್ತು ಎಂದಿದೆ. ವಿಜಯನಗರ ಜಿಲ್ಲೆಯಾಗುವುದು ಖಚಿತವಾಗಿದೆ.

ಬಳ್ಳಾರಿಯಿಂದ ವಿಜಯನಗರ ಜಿಲ್ಲೆಯಾಗಿ ವಿಭಜಿಸಲು ಸರ್ಕಾರ ಹಸಿರು ನಿಶಾ‌ನೆ ತೋರಿದ ಬೆನ್ನಲ್ಲೇ, ಬಳ್ಳಾರಿಯಲ್ಲಿ ದಿನೇದಿನೆ ವಿರೋಧದ ಹೆಚ್ಚಾಗುತ್ತಿದೆ. ಇದರ ಮಧ್ಯೆ ಚಿತ್ರದುರ್ಗ ಜಿಲ್ಲೆಯ ಗಡಿ ತಾಲೂಕು ಮೊಳಕಾಲ್ಮೂರನ್ನು ಬಳ್ಳಾರಿಗೆ ಸೇರಿಸಬೇಕು ಎಂಬ ಕೂಗು ಕೇಳಿ ಬರ್ತಿದೆ.

ಇದರ ಸಂಬಂಧವಾಗಿ ಈಗಾಗಲೇ ಮೊಳಕಾಲ್ಮೂರನ್ನು ಬಳ್ಳಾರಿಗೆ ಸೇರಿಸಲು ರಾಂಪುರದಲ್ಲಿ ಸಭೆ ಕೂಡ ನಡೆಸಲಾಗಿದೆ. ಮೊಳಕಾಲ್ಮೂರು ತಾಲೂಕು ಬಳ್ಳಾರಿಗೆ ಹತ್ತಿರ ಆಗುವುದರಿಂದ ಎಲ್ಲದಕ್ಕೂ ಉಪಯೋಗ ಆಗಲಿದೆ.

ಕಲಂ 371ಜೆ ಆ್ಯಕ್ಟ್ ಪ್ರಕಾರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಮೊಳಕಾಲ್ಮೂರ‌ನ್ನು ಬಳ್ಳಾರಿ ಜಿಲ್ಲೆಗೆ ಸೇರಿಸಬೇಕೆಂಬುದು ಈ ಭಾಗದ ಜನರ ಬೇಡಿಕೆ. ಮೊಳಕಾಲ್ಮೂರಿಂದ‌ ಚಿತ್ರದುರ್ಗ ಜಿಲ್ಲಾ ಕೇಂದ್ರ ದೂರ ಇರುವುದರಿಂದ ಈ ನಿರ್ಧಾರ‌ ಕೈಗೊಳ್ಳಲಾಗಿದೆಯಂತೆ.

ಕೆಲವರು ಮೊಳಕಾಲ್ಮೂರನ್ನು ಬಳ್ಳಾರಿ ಜಿಲ್ಲೆಗೆ ಸೇರಿಸ ಕೂಡದು ಎಂದು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ವಿರೋಧಕ್ಕೆ ಸಾಕಷ್ಟು ಜನ ಕೈ ಜೋಡಿಸಿದ್ದಾರೆ. ಮೊಳಕಾಲ್ಮೂರು ತಾಲೂಕು ತನ್ನದೇಯಾದ ವೈಶಿಷ್ಟ್ಯತೆಗಳನ್ನು ಹೊಂದಿದೆ.‌

ಈ ಸ್ಥಳ ಸಾಂಸ್ಕೃತಿಕ ಪರಂಪರೆ ಹಾಗೂ ಇತಿಹಾಸ ಪ್ರಸಿದ್ದ ಸ್ಥಳಗಳನ್ನು ತನ್ನ ಒಡಲಿನಲ್ಲಿಟ್ಟುಕೊಂಡಿದೆ. ಅದ್ದರಿಂದ ಇಲ್ಲಿ ಯಾವುದೇ ರೀತಿಯ ಬಡತನ ತಾಂಡವವಾಡ್ತಿಲ್ಲ ಎಂಬುದು ಮೊಳಕಾಲ್ಮೂರಿನ ಕೆಲ ನಾಗರಿಕರ ವಾದ.

ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀರಾಮುಲು ಅವರು ಪ್ರತಿನಿಧಿಸಿರುವ ಕ್ಷೇತ್ರ ಇದಾಗಿರೋದ್ರಿಂದ ಮೊಳಕಾಲ್ಮೂರು ಬಳ್ಳಾರಿಗೆ ಸೇರಿಸಲಾಗುತ್ತಾ ಎಂಬ ಅನುಮಾನ ಕೆಲವರಲ್ಲಿ ಮೂಡಿದೆ. ಅದೇನೆ ಆಗಲಿ ಐತಿಹಾಸಿಕ ಪರಂಪರೆ ಹೊಂದಿರೋ ಕೋಟೆನಾಡಿನಲ್ಲಿ ಮೊಳಕಾಲ್ಮೂರು ಒಂದು ಭಾಗವಾಗಿದೆ. ಆದ್ದರಿಂದ ಆ ತಾಲೂಕು ಚಿತ್ರದುರ್ಗದಲ್ಲೇ ಉಳಿಯಲಿ ಎಂಬುದು ಬಹುತೇಕರ ಆಶಯ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.