ETV Bharat / state

ಲಾರಿ - ಬೈಕ್ ಡಿಕ್ಕಿ: ಇಬ್ಬರು ಯುವಕರ ದುರ್ಮರಣ - ಚಿತ್ರದುರ್ಗದಲ್ಲಿ ಲಾರಿ ಬೈಕ್ ಅಪಘಾತ

ಲಾರಿ ಮತ್ತು ಬೈಕ್ ಮಧ್ಯೆ​ ಡಿಕ್ಕಿ ಸಂಭವಿಸಿ ಬೈಕ್​ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ನಗರ ವ್ಯಾಪ್ತಿಯಲ್ಲಿ ಜರುಗಿದೆ.

accident
accident
author img

By

Published : Jun 25, 2021, 11:29 PM IST

ಚಿತ್ರದುರ್ಗ: ಬೈಕ್ ಮತ್ತು ಲಾರಿ ಮಧ್ಯೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್​ನಲ್ಲಿದ್ದ ಇಬ್ಬರು ಸ್ಥಳದಲ್ಲೆ ಮೃತಪಟ್ಟಿರುವ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ನಗರ ವಾರಿಯರ್ಸ್ ಶಾಲೆ ಮುಂಭಾಗ ನಡೆದಿದೆ. ಪರುಶುರಾಮಪುರದ ಭರತ್ (24) ಮತ್ತು ಮಣಿಕಂಠ(20) ಮೃತ ದುರ್ದೈವಿಗಳು.

ಸಿದ್ದಾಪುರ ಗ್ರಾಮದಲ್ಲಿನ ಸಂಬಂಧಿಕರ ಕಾರ್ಯಕ್ರಮವನ್ನು ಮುಗಿಸಿ​ ಪರುಶುರಾಮಪುರ ಗ್ರಾಮಕ್ಕೆ ತೆರಳುವಾಗ ಈ ದುರಂತ ನಡೆದಿದೆ. ಬಳ್ಳಾರಿಯಿಂದ ಬೆಂಗಳೂರು ಮಾರ್ಗವಾಗಿ ಚಲಿಸುತ್ತಿದ್ದ KA 01 AJ 0081 ನೋಂದಣಿಯ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ. ಸ್ಥಳಕ್ಕೆ ಆಗಮಿಸಿದ ಚಳ್ಳಕೆರೆ ಪೊಲೀಸರು ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.