ಚಿತ್ರದುರ್ಗ: ಚಿತ್ರದುರ್ಗದ ಮುರುಘಾ ಮಠದಲ್ಲಿ 47 ಫೋಟೋ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಹೊಸಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಮೋಹನ ಮೂರ್ತಿ ಅಲಿಯಾಸ್ ಸ್ವಾಮಿ, ಎಸ್.ಜೆ.ಎಂ. ಪಾಲಿಟೆಕ್ನಿಕ್ ಕಾಲೇಜು ಉಪನ್ಯಾಸಕ ಶಿವಾನಂದ ಸ್ವಾಮಿ ಅವರನ್ನು ಬಂಧಿಸಲಾಗಿದೆ.
ಪೊಲೀಸರು ಆರೋಪಿಗಳನ್ನು ಚಿತ್ರದುರ್ಗ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಪ್ರಮುಖ ಮೋಹನ ಮೂರ್ತಿ ಅಲಿಯಾಸ್ ಸ್ವಾಮಿಯನ್ನು ಎರಡು ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಮತ್ತೋರ್ವ ಆರೋಪಿ ಶಿವಾನಂದ ಸ್ವಾಮಿಯನ್ನು ಕೋರ್ಟ್ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಸದ್ಯ ಅಪಘಾತವೊಂದರಲ್ಲಿ ಆರೋಪಿ ಶಿವಾನಂದ ಸ್ವಾಮಿ ಕಾಲು ಮುರಿದುಕೊಂಡಿದ್ದಾನೆ.
ಆರೋಪಿಗಳು ಅಕ್ಟೋಬರ್ 6ರಂದು ಮುರುಘಾ ಮಠದ ರಾಜಾಂಗಣದ ಗೋಡೆ ಮೇಲಿದ್ದ ಫೋಟೋ ಕಳವು ಮಾಡಿದ್ದರು. ವಿವಿಧ ಗಣ್ಯರ ಜೊತೆಗೆ ಮುರುಘಾ ಶ್ರೀಗಳು ಇರುವ ಫೋಟೋಗಳನ್ನು ಕಳ್ಳತನ ಮಾಡಲಾಗಿತ್ತು. ಮಠದಲ್ಲಿನ ಸಿಸಿ ಕ್ಯಾಮೆರಾ ದೃಶ್ಯ ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಶಿವಮೊಗ್ಗ: ವಿಚಾರಣೆ ವೇಳೆ ಸಹೋದರರಿಂದ ಪೊಲೀಸರ ಮೇಲೆ ಹಲ್ಲೆ