ETV Bharat / state

ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಯನ್ನು ಸ್ವಾಗತಿಸಿದ ಮುರುಘಾ ಶ್ರೀ - Tumkur Muruga Sri latest news

ವೀರಶೈವ ಲಿಂಗಾಯತರು ಹಾಗೂ ಲಿಂಗಾಯತರಿಗೆ ಶೇ.16 % ರಷ್ಟು ಮೀಸಲಾತಿ ಬೇಕಾಗಿದೆ. ಹಾಗಾಗಿ ಸಮಾಜದ ಏಳಿಗೆಗಾಗಿ ಶೇ%. 16 ರಷ್ಟು ಮೀಸಲಾತಿಯನ್ನು ನೀಡಬೇಕು..

Tumkur Muruga Sri welcomed the establishment of the Veerashaiva- Lingayat Development Corporation
ಮುರುಘಾ ಶ್ರೀ
author img

By

Published : Nov 17, 2020, 5:36 PM IST

Updated : Nov 17, 2020, 6:03 PM IST

ಚಿತ್ರದುರ್ಗ: ಲಿಂಗಾಯತ ಸಮುದಾಯದ ಹಿಂದುಳಿದವರ ಅಭಿವೃದ್ಧಿಗಾಗಿ 'ಕರ್ನಾಟಕ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ' ರಚನೆಗೆ ಕರ್ನಾಟಕ ಸರ್ಕಾರ ಮಂಗಳವಾರ ಆದೇಶಿಸ ನೀಡಿದ್ದು ಮುರುಘಾ ಶ್ರೀಗಳು ಇದನ್ನು ಸ್ವಾಗತಿಸಿದ್ದಾರೆ.

ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಸಮುದಾಯಗಳ ಒಲೈಕೆಗಾಗಿ ಕೆಲವು ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸುತ್ತಿದೆ. ಅದರಂತೆ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮವನ್ನು​ ಯಡಿಯೂರಪ್ಪನವರು ಸ್ಥಾಪಿಸಿದ್ದಾರೆ ಎಂದು ನಿಗಮ ಸ್ಥಾಪನೆ ಮಾಡಿ ಆದೇಶ ಹೊರಡಿಸಿದ್ದನ್ನು ಸ್ವಾಗತಿಸಿದ್ದಾರೆ.

ಯಡಿಯೂರಪ್ಪನವರು ಅಭಿವೃದ್ಧಿ ನಿಗಮ ಸ್ಥಾಪಿಸಿರುವುದು ಸಂತೋಷ ತಂದಿದೆ. ಬೇರೆ ಬೇರೆ ಜನಾಂಗದವರು ಈಗಾಗಲೇ ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದಾರೆ. ಅದು ಅವರವರ ಹಕ್ಕೊತ್ತಾಯ. ಆದರೆ, ವೀರಶೈವ ಲಿಂಗಾಯತ ಸಮುದಾಯದಲ್ಲಿ ಅನೇಕ ಬಡವರು, ಶೋಷಿತರು, ಆರ್ಥಿಕವಾಗಿ ಹಿಂದುಳಿದವರಿದ್ದಾರೆ.

ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಯನ್ನು ಸ್ವಾಗತಿಸಿದ ಮುರುಘಾ ಶ್ರೀ

ಅವರ ಶೈಕ್ಷಣಿಕ ಅಭಿವೃದ್ಧಿಯ ದೆಸೆಯಲ್ಲಿ ಬೇರೆಯವರಿಗೆ ಮೀಸಲಾತಿ ನೀಡುತ್ತಿರುವ ಬೆನ್ನಲ್ಲೇ ನಮ್ಮ ಸಮಾಜದಲ್ಲೂ ಮೀಸಲಾತಿಯ ಕೂಗು ಕೇಳಿಬರುತ್ತಿದೆ. ಆದ್ದರಿಂದ ವೀರಶೈವ ಲಿಂಗಾಯತರು ಹಾಗೂ ಲಿಂಗಾಯತರಿಗೆ ಶೇ.16 % ರಷ್ಟು ಮೀಸಲಾತಿ ಬೇಕಾಗಿದೆ. ಹಾಗಾಗಿ ಸಮಾಜದ ಏಳಿಗೆಗಾಗಿ ಶೇ%. 16 ರಷ್ಟು ಮೀಸಲಾತಿಯನ್ನು ನೀಡಬೇಕೆಂದು ಸಿಎಂ ಬಳಿ ಮಾತನಾಡುವುದಾಗಿ ಶ್ರೀಗಳು ತಿಳಿಸಿದ್ದಾರೆ.

Last Updated : Nov 17, 2020, 6:03 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.