ಚಿತ್ರದುರ್ಗ: ಭಾರಿ ವಿರೋಧದ ನಡುವೆಯೂ ಚಿತ್ರದುರ್ಗದಲ್ಲಿ ಟಿಪ್ಪು ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಕರ್ನಾಟಕ ರಾಜ್ಯ ಹಜರತ್ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆಯಿಂದ ಹಮ್ಮಿಕೊಂಡಿದ್ದ ಟಿಪ್ಪು ಸುಲ್ತಾನ್ 270 ನೇ ಜಯಂತಿಯನ್ನು ಛಲವಾದಿ ಮಠದ ಶ್ರೀ ಬಸವನಾಗಿದೇವ ಶರಣರ ನೇತೃತ್ವದಲ್ಲಿ ವಿಜೃಂಭಣೆಯಿಂದ ನೆರವೇರಸಲಾಯಿತು.
ನಗರದ ತರಾಸು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಜಯಂತಿ ಹಾಗೂ 64 ನೇ ಕನ್ನಡ ರಾಜ್ಯೋತ್ಸವನ್ನು ಸಾಹಿತಿ,ಕವಿ ಬಂಜಿಗೆರೆ ಜಯಪ್ರಕಾಶ್ ಹಾಗೂ ನಾಗಿದೇವ ಶರಣರು ಜಂಟಿಯಾಗಿ ಗಿಡಕ್ಕೆ ನೀರೆಯುವ ಮೂಲಕ ಆಚರಿಸಿದರು. ನಂತರ ಪ್ರತಿಕ್ರಿಯಿಸಿದ ಸಾಹಿತಿ,ಕವಿ ಬಂಜಿಗೆರೆ ಜಯಪ್ರಕಾಶ್ ರವರು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಟಿಪ್ಪುವನ್ನು ಒಂದು ಕೋಮಿಗೆ ಹೋಲಿಸಿ, ಇದು ದೊಡ್ಡ ಸಮಸ್ಯೆ ಎಂದು ಜನರಿಗೆಗೆ ಸಂದೇಶ ರವಾನೆ ಮಾಡಿ ಕೆಲವೇ ತಾಸಿನಲ್ಲಿ ಸ್ವತಂತ್ರ ಹೋರಾಟಗಾರ ಟಿಪ್ಪು ಸುಲ್ತಾನ್ ಜಯಂತಿಯನ್ನು ಸಿಎಂ ಯಡಿಯೂರಪ್ಪ ರದ್ದು ಮಾಡಿದರು. ಬಿಜೆಪಿ ಸರ್ಕಾರ ಪಕ್ಷದ ಸಿದ್ದಾಂತದಂತೆ ನಡೆದುಕೊಳ್ಳುವ ಮೂಲಕ ಸಿದ್ಧಾಂತಗಳನ್ನು ಪರಿಪಾಲಿಸುತ್ತಿದ್ದೇವೆ ಎಂದು ತೋರಿಸಿಕೊಟ್ಟರು ಎಂದರು.
ಇದೇ ವೇಳೆ ಬಂಜಿಗೆರೆ ಜಯಪ್ರಕಾಶ್, ಛಲವಾದಿ ಪೀಠದ ನಾಗಿದೇವ ಶರಣರು, ಖ್ಯಾತ ವಕೀಲಾ ರಹಮತ್ ಉಲ್ಲಾ ರವರಿಗೆ ರಾಜ್ಯ ಮಟ್ಟದ ಟಿಪ್ಪು ಸುಲ್ತಾನ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.