ETV Bharat / state

ಸೂರ್ಯ-ಚಂದ್ರರಿರುವ ತನಕ ಟಿಪ್ಪು ಜಯಂತಿ ಆಚರಿಸ್ತೇವೆ: ಟಿಪ್ಪು ಖಾಸಿಂ ಅಲಿ - ಟಿಪ್ಪು ಜಯಂತಿ ಹಾಗೂ ಪಠ್ಯಕ್ರಮ ರದ್ದು

ಇದು ಹುಲಿ ಜಯಂತಿ ಆದ್ದರಿಂದಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೆದರಿಕೊಂಡು ಆಚರಿಸಲು ಬಿಡ್ತಿಲ್ಲ ಎಂದು ಕರ್ನಾಟಕ ಟಿಪ್ಪು ಸುಲ್ತಾನ್ ಅಭಿಮಾನಿಗಳ ವೇದಿಕೆ ರಾಜ್ಯಾಧ್ಯಕ್ಷ ಟಿಪ್ಪು ಖಾಸಿಂ ಅಲಿ ಟೀಕಿಸಿದ್ದಾರೆ..

Tippu jayanthi celebrate in Karnataka
author img

By

Published : Nov 2, 2019, 6:47 PM IST

ಚಿತ್ರದುರ್ಗ: ಸೂರ್ಯ-ಚಂದ್ರರಿರುವ ತನಕ ಟಿಪ್ಪು ಜಯಂತಿ ಆಚರಣೆ ಮಾಡ್ತೇವೆ ಎಂದು ಕರ್ನಾಟಕ ಟಿಪ್ಪು ಸುಲ್ತಾನ್ ಅಭಿಮಾನಿಗಳ ವೇದಿಕೆ ರಾಜ್ಯಾಧ್ಯಕ್ಷ ಟಿಪ್ಪು ಖಾಸಿಂ ಅಲಿ ಸವಾಲ್​ ಹಾಕಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರಂತಹ ನೂರು ಕೋಟಿ ನಾಯಕರು ಬಂದರೂ ಟಿಪ್ಪು ಜಯಂತಿ ನಿಲ್ಲಿಸಲ್ಲ. ಈ ಬಾರಿಯೂ ಚಿತ್ರದುರ್ಗದಲ್ಲಿ ಆಚರಿಸುತ್ತೇವೆ. ಬಿಜೆಪಿ ಅಧಿಕಾರಕ್ಕೆ ಬಂದು ಟಿಪ್ಪು ಜಯಂತಿ ಹಾಗೂ ಪಠ್ಯಕ್ರಮ ರದ್ದು ಮಾಡಲು ಮುಂದಾಗಿರುವುದು ಖಂಡನೀಯ ಎಂದು ಕಿಡಿಕಾರಿದರು.

ಕರ್ನಾಟಕ ಟಿಪ್ಪು ಸುಲ್ತಾನ್ ಅಭಿಮಾನಿಗಳ ವೇದಿಕೆ ರಾಜ್ಯಾಧ್ಯಕ್ಷ ಟಿಪ್ಪು ಖಾಸಿಂ ಅಲಿ

ರಾಷ್ಟ್ರಪತಿ ರಾಮನಾಥ್ ಕೋವಿಂದ್​ ಅವರೂ ಟಿಪ್ಪುವನ್ನು ವಿಧಾನಸಭೆಯಲ್ಲಿ ಹೊಗಳಿದ್ದಾರೆ. ಅಬ್ದುಲ್ ಕಲಾಂ ಅವರು ನಾಸಾಗೆ ತೆರಳಿದ್ದಾಗ ಅಲ್ಲಿದ್ದ ಟಿಪ್ಪು ಚಿತ್ರ ಕಂಡು ಕೊಂಡಾಡಿದ್ದರು. ಆದರೆ, ಯಡಿಯೂರಪ್ಪ ಅವರ ನಡೆ ಖಂಡನೀಯ. ಬಿಜೆಪಿಯವರು ಸ್ವಾತಂತ್ರ್ಯ ಹೋರಾಟಗಾರರಲ್ಲ ಬದಲಾಗಿ ಬ್ರಿಟಿಷರ ಗುಲಾಮರು ಎಂದು ಆರೋಪಿಸಿದರು.

ಯಡಿಯೂರಪ್ಪ ಒಬ್ಬ ಭ್ರಷ್ಟ ರಾಜಕಾರಣಿ. ಅವರಿಗೆ ಟಿಪ್ಪು ಇತಿಹಾಸ ಗೊತ್ತಿಲ್ಲ. ಬದಲಾಗಿ ಟಿಪ್ಪು ,ರಾಮ ಮಂದಿರ, ಪುಲ್ವಾಮಾ ದಾಳಿ, ಹಿಂದೂ-ಮುಸ್ಲಿಂ, ಪಾಕಿಸ್ತಾನ ಎಂಬ ಅಜೆಂಡಾದೊಂದಿಗೆ ಚುನಾವಣೆ ಎದುರಿಸುವುದು ಮಾತ್ರ ಗೊತ್ತು. ಲೂಟಿ ಮಾಡಲು ಅಧಿಕಾರಕ್ಕೆ ಬರುವ ಮೂಲಕ ಧರ್ಮಗಳ ನಡುವೆ ಜಗಳ ಹಚ್ಚುವುದೇ ಬಿಜೆಪಿಯವರ ಅಜೆಂಡವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಟಿಪ್ಪು ಜಯಂತಿ ಮಾಡಬಾರದು ಎಂದು ಹೇಳಿಕೆ ನೀಡಿರುವುದು ಬೇಸರ ತರಿಸಿದೆ. ಮೊದಲು ಜಯಂತಿ ಮಾಡಬೇಕು ಎಂದ ವ್ಯಕ್ತಿ ಈಗ ಬೇಡ ಎನ್ನುತ್ತಿದ್ದಾರೆ ಎಂದರು.

Intro:ಇದು ಹುಲಿಯ ಜಯಂತಿ ಅದಕ್ಕೆ ಯಡಿಯೂರಪ್ಪ ಆಚರಣೆ ಮಾಡಲು ಬಿಡ್ತಿಲ್ಲ, ಸೂರ್ಯ ಚಂದ್ರ ಇರುವ ತನಕ ಟಿಪ್ಪು ಜಯಂತಿ ಆಚರಣೆ ಮಾಡುತ್ತೇವೆ: ಟಿಪ್ಪು ಖಾಸಿಂ ಅಲಿ

ಆ್ಯಂಕರ್:- ಇದು ಹುಲಿ ಜಯಂತಿ ಅದ್ದರಿಂದ ಯಡಿಯೂರಪ್ಪ ಹೆದರಿ ಆಚರಣೆ ಮಾಡಲು ಬಿಡ್ತಿಲ್ಲ,ಅದ್ರೇ ಸೂರ್ಯ ಚಂದ್ರ ಇರುವ ತನಕ ಟಿಪ್ಪು ಜಯಂತಿ ಮಾಡುತ್ತೇವೆ, ಯಡಿಯೂರಪ್ಪ ನಂತಹ ೧೦೦ ಕೋಟಿ ನಾಯಕರು ಬಂದ್ರು ಟಿಪ್ಪು ಜಯಂತಿ ನಿಲ್ಲಿಸಲು ಆಗುವುದಿಲ್ಲ ಎಂದು ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ವೇದಿಕೆಯ ರಾಜ್ಯಧ್ಯಕ್ಷ ಟಿಪ್ಪು ಖಾಸಿಂ ಅಲಿ ಸಿಎಂ ಯಡಿಯೂರಪ್ಪರವರಿಗೆ ಸವಾಲ್ ಹಾಕಿದರು. ಚಿತ್ರದುರ್ಗದಲ್ಲಿ ಮಾತನಾಡಿದ ಅವರು ಪ್ರತಿ ವರ್ಷದಂತೆ ಈ ಬಾರಿಯೂ ಚಿತ್ರದುರ್ಗದಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಲಾಗುತ್ತದೆ. ಬಿಜೆಪಿ ಅಧಿಕಾರಕ್ಕೆ ಬಂದು ಟಿಪ್ಪು ಜಯಂತಿ ಹಾಗು ಪಠ್ಯಕ್ರಮ ರದ್ದು ಮಾಡ್ತಾ ಇರೋದು ಖಂಡನೀಯ ಎಂದು ಖಂಡಿಸಿದರು. ಭಾರತದ ಉನ್ನತ ಸ್ಥಾನದಲ್ಲಿರುವ ರಾಷ್ಟ್ರಪತಿ ರಾಮ್ ನಾಥ್ ಕೋವಿಂಧ್ ರವರು ಕೂಡ ವಿಧಾನ ಸಭೆಯಲ್ಲಿ ಟಿಪ್ಪುವನ್ನು ಹೊಗಳಿದ್ರು, ಬಳಿಕ
ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಜೀ ನಾಸಾಗೆ ತೆರಳಿದ್ದಾಗ ಅಲ್ಲಿದ್ದ ಟಿಪ್ಪು ಫೋಟೊ ನೋಡಿ ಅವರು ಕೂಡ ಕೊಂಡಾಡಿದ್ರು, ಅದ್ರೇ ಸಿಎಂ ಯಡಿಯೂರಪ್ಪರವರ ನಡೆ ಖಂಡನೀಯ ಎಂದರು. ಬಿಜೆಪಿಯವರು ಸ್ವಾತಂತ್ರ್ಯ ಹೋರಾಟಗಾರರಲ್ಲ ಬದಲಾಗಿ ಬ್ರಿಟಿಷ್ ರ ಗುಲಾಮರು. ಯಡಿಯೂರಪ್ಪ ಒಬ್ಬ ಭ್ರಷ್ಟಾ ರಾಜಕಾರಣಿ, ಯಡಿಯೂರಪ್ಪ ನಿಗೆ ಟಿಪ್ಪು ಸುಲ್ತಾನ್ ಬಗ್ಗೆ ಇತಿಹಾಸ ಗೊತ್ತಿಲ್ಲ,ಬದಲಾಗಿ ಟಿಪ್ಪು ,ರಾಮ ಮಂದಿರ, ಪುಲ್ವಾಮಾ ದಾಳಿ,ಹಿಂದೂಮುಸ್ಲಿಂ, ಪಾಕಿಸ್ತಾನ ಎಂಬ ಅಜೆಂಡ್ ಇಟ್ಟು ಚುನಾವಣೆ ಎದುರಿಸುವುದು ಮಾತ್ರ ಗೊತ್ತು ಎಂದು ಗುಡುಗಿದರು. ಬಿಜೆಪಿಯವರು ಹಣ ಮಾಡಲು ಅಧಿಕಾರಕ್ಕೆ ಬರುವ ಮೂಲಕ
ಹಿಂದೂ ಮುಸ್ಲಿಂರ ಮಧ್ಯೆ ಜಗಳ ಹಚ್ಚುವುದೇ ಬಿಜೆಪಿಯವರ ಅಜೆಂಡ್ ವಾಗಿದೆ ಎಂದರು ಇನ್ನೂ ಸಿಎಂ ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯಿಸದ ಅವರು ಟಿಪ್ಪು ಜಯಂತಿ ಮಾಡಬಾರದು ಎಂದು ಹೇಳಿಕೆ ನೀಡಿರುವುದು ಬೇಸರ ತರಿಸಿದ್ದು, ಮೊದಲು ಜಯಂತಿ ಮಾಡ್ಬೇಕೆ ಎಂದ ವ್ಯಕ್ತಿ ಇದೀಗ ಜಯಂತಿ ಮಾಡಬಾರದು ಎಂಬುದು ಆಕ್ರೋಶಕ್ಕೆ ಕಾರಣವಾಗಿದ ಎಂದರು.

ಫ್ಲೋ,,,,,,

ಬೈಟ್01:-ಟಿಪ್ಪು ಖಾಸಿಂ ಅಲಿ, ಕರ್ನಾಟಕ ಟಿಪ್ಪು ಸುಲ್ತಾನ್ ಅಭಿಮಾನಿ ಬಳಗ ವೇದಿಕೆ. ರಾಜ್ಯಧ್ಯಕ್ಷ         

Body:tippuConclusion:jayanthi
ETV Bharat Logo

Copyright © 2024 Ushodaya Enterprises Pvt. Ltd., All Rights Reserved.