ETV Bharat / state

ಕಾದಂಬರಿಕಾರ ಬಿ.ಎಲ್.ವೇಣುರಿಗೆ ಅನಾಮಧೇಯ ಪತ್ರ; ಸಾವರ್ಕರ್‌ ಹೇಳಿಕೆೆಗೆ ಕ್ಷಮೆ ಕೇಳಲು ಆಗ್ರಹ

ಕಾದಂಬರಿಕಾರ ಬಿ.ಎಲ್‌.ವೇಣು ಅವರಿಗೆ ಅನಾಮಧೇಯ ಪತ್ರ ಬಂದಿದ್ದು, ಸಾವರ್ಕರ್‌ ಕುರಿತ ಹೇಳಿಕೆಗೆ ಕ್ಷಮೆ ಕೋರುವಂತೆ ಸೂಚಿಸಲಾಗಿದೆ.

novelist BL Venu
ಕಾದಂಬರಿಕಾರ ಬಿ.ಎಲ್.ವೇಣು
author img

By

Published : Jul 11, 2022, 9:23 AM IST

ಚಿತ್ರದುರ್ಗ: ಕಾದಂಬರಿಕಾರ ಬಿ.ಎಲ್‌.ವೇಣು ಅವರಿಗೆ ಅನಾಮಧೇಯ ಪತ್ರ ಬಂದಿದ್ದು, ಸಾವರ್ಕರ್‌ ಬಗ್ಗೆ ಹಗುರವಾಗಿ ಮಾತನಾಡಿದಕ್ಕೆ ಕ್ಷಮೆ ಕೇಳುವಂತೆ ತಾಕೀತು ಮಾಡಲಾಗಿದೆ. ಸಾವರ್ಕರ್ ಬಗ್ಗೆ‌ ನೀವು ಹಿಯ್ಯಾಳಿಸಿ ಮಾತನಾಡಿದ್ದು ನಿಮಗೆ ಶೋಭೆ ತರಲ್ಲ. ದಯವಿಟ್ಟು ಕ್ಷಮೆ ಕೇಳಿ ಎಂದು ಪತ್ರದಲ್ಲಿ ಸೂಚನೆ ನೀಡಿದ್ದಾರೆ.

ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು 5ನೇ ತರಗತಿ ಪಠ್ಯದಲ್ಲಿ ಹಲವಾರು ವಿಷಯಗಳನ್ನು ತೆಗೆದಿದ್ದಾರೆ. ಬರಗೂರು ಅವರನ್ನು ಬೆಂಬಲಿಸುವ 61 ಸಾಹಿತಿಗಳನ್ನು ಏನು ಮಾಡಬೇಕು?. ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಕಾರ ಗಲ್ಲಿಗೇರಿಸಬೇಕು ಅಥವಾ ಗುಂಡಿಕ್ಕಿ ಹೊಡೆಯಬೇಕು ಎಂದು ಪತ್ರದಲ್ಲಿ ಉಲ್ಲೇಖವಿದೆ. ಸಾಹಿತಿಗಳ ಜತೆ ಮಾಜಿ ಸಿಎಂ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್, ಹೆಚ್​ಡಿಕೆ ಹೆಸರನ್ನೂ ಉಲ್ಲೇಖಿಸಲಾಗಿದೆ.

ಪಠ್ಯದಲ್ಲಿ ಭಗವದ್ಗೀತೆ ಅಂಶ ಸೇರಿಸದಂತೆ ಎಲ್ಲರೂ ಸರ್ಕಾರಕ್ಕೆ ಪತ್ರ ನೀಡಿದ್ದರು. ಹುಟ್ಟಿದ ದೇಶದ ಬಗ್ಗೆ ನಿಮಗೆ ಯಾಕೆ ಹೀನ ಭಾವನೆ? ಎಂದು ಪತ್ರದಲ್ಲಿ ಅನಾಮಧೇಯ ವ್ಯಕ್ತಿ ಪ್ರಶ್ನಿಸಿದ್ದಾನೆ. 61 ಜನ ಅಲ್ಲ 61 ಕೋಟಿ ಜನ ಸಹಿ ಹಾಕಿ ಕೊಟ್ಟರೂ ಭಗವದ್ಗೀತೆ ಸೂರ್ಯ, ಚಂದ್ರರಿರುವವರೆಗೂ ಇರುತ್ತದೆ. ವೇಣು ಅವರೇ ಇಂಥವರಿಗೆ ನೀವು ಬುದ್ದಿ ಹೇಳಿ. ಇಲ್ಲ ಕಾಲನ ಉಪಚಾರಕ್ಕೆ ಸಿದ್ದರಾಗಿ ಎಂದು ಬೆದರಿಕೆ ಹಾಕಿದ್ದಾರೆ.

ಇದನ್ನೂ ಓದಿ: ವಿವಾದವೆಬ್ಬಿಸಿದ ಬಿ.ಎಲ್​. ವೇಣು: ಪೇಜಾವರ ಶ್ರೀಗಳ ಬಗ್ಗೆ ಫೇಸ್​ಬುಕ್​​ನಲ್ಲಿ ಪೋಸ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.