ಚಿತ್ರದುರ್ಗ: ಕೊರೊನಾ ವೈರಸ್ ಹೆಚ್ಚಾಗುವ ಸಂಭವ ಎದುರಾದರೇ ಪ್ರತಿ ಜಿಲ್ಲೆಗಳಲ್ಲಿ ಜಿಲ್ಲಾವಾರು ಓಪನ್ (ಫಿಲ್ಡ್ ಆಸ್ಪತ್ರೆ) ತೆರುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ ಎಂದು ಆರೋಗ್ಯ ಸಚಿವ ಶ್ರೀ ರಾಮುಲು ಹೇಳಿದರು.
ಮೊಳಕಾಲ್ಮೂರು ಪಟ್ಟಣದಲ್ಲಿ ಆಶಾ ಕಾರ್ಯಕರ್ತೆಯರಿಗೆ ಪಿಪಿಇ ಕಿಟ್ ವಿತರಿಸಿ ಮಾತನಾಡಿದ ಅವರು, ಪ್ರಾಥಮಿಕವಾಗಿ ಸೋಂಕಿನ ಲಕ್ಷಣಗಳು ಕಂಡುಬಂದವರಿಗೆ ಫೀಲ್ಡ್ ಆಸ್ಪತ್ರೆ ಉಪಯೋಗವಾಗಲಿದೆ. ಈ ಫೀಲ್ಡ್ ಆಸ್ಪತ್ರೆಗಳನ್ನು ರಾಜ್ಯದ ಎಲ್ಲಾ ಕಡೆ ತೆರೆಯಬೇಕೆಂದು ಈಗಾಗಲೇ ಚರ್ಚೆ ಕೂಡ ನಡೆಯುತ್ತಿದೆ. ಇದರ ಬಗ್ಗೆ ಟಾಸ್ಕ್ ಫೋರ್ಸ್ನಲ್ಲಿ ಪ್ರಸ್ತಾಪಿಸಲಾಗಿದೆ ಎಂದರು.
ಹೊರರಾಷ್ಟ್ರಗಳಲ್ಲಿ ತೆರೆದಿರುವ ಫಿಲ್ಡ್ ಆಸ್ಪತ್ರೆಗಳಂತೆ ನಮ್ಮಲ್ಲೂ ಮೈದಾನ (ಖಾಲಿ ಜಾಗದಲ್ಲಿ) ಆಸ್ಪತ್ರೆಗಳನ್ನು ತೆರೆಯುವ ಬಗ್ಗೆ ಸಿಎಂ ಯಡಿಯೂರಪ್ಪನವರ ಬಳಿ ಚರ್ಚಿಸಿ, ಮುಂದಿನ ದಿನಗಳಲ್ಲಿ ಆಸ್ಪತ್ರೆಗಳು ತೆರೆಯುತ್ತೇವೆ ಎಂದರು.