ETV Bharat / state

ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾಕ್ಕೆ 2 ಎಕರೆ ಜಾಗ : ಆರೋಗ್ಯ ಸಚಿವರು ಭರವಸೆ

author img

By

Published : Jul 21, 2020, 12:52 AM IST

ಚಿತ್ರದುರ್ಗ ಕೊರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ಮಾಡಲು ಜಾಗ ನಿಗದಿಪಡಿಸುವ ಮೂಲಕ ಆರೋಗ್ಯ ಸಚಿವ ಶ್ರೀ ರಾಮುಲು ಅವರು ಇದ್ದ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

2 ಎಕರೆ ಜಾಗ ಗುರುತಿಸಿದ ಆರೋಗ್ಯ ಸಚಿವರು
2 ಎಕರೆ ಜಾಗ ಗುರುತಿಸಿದ ಆರೋಗ್ಯ ಸಚಿವರು

ಚಿತ್ರದುರ್ಗ: ಕೊರೊನಾ ಸೋಂಕಿನಿಂದ ಮೃತಪಟ್ಟವರ ಶವ ಸಂಸ್ಕಾರ ವಿಚಾರದಲ್ಲಿ ಚಿತ್ರದುರ್ಗ ಜಿಲ್ಲಾಡಳಿತ ದಿಟ್ಟ ನಿರ್ಧಾರ ತೆಗೆದುಕೊಳ್ಳುವತ್ತಾ ಹಿಂದೇಟು ಹಾಕುತ್ತಿದೆ. ಸೋಂಕಿನಿಂದ ಸಾವನ್ನಪ್ಪಿದವರನ್ನು ಹೂಳಲು ಪ್ರತ್ಯೇಕ ಜಾಗ ನಿಗದಿ ಪಡಿಸದೆ, ಊರ‌ಮಧ್ಯೆ ಇರುವ ಸ್ಮಾಶನದಲ್ಲೇ ಮೃತ ದೇಹಗಳನ್ನು ಹೂಳಲು ಜಿಲ್ಲಾಡಳಿತ ಆದೇಶ ನೀಡಿರುವುದು ಅ ಭಾಗದ ಜನರ ಆಂತಕಕ್ಕೆ ಕಾರಣವಾಗಿದೆ.

ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರನ್ನು ಚಿತ್ರದುರ್ಗ ನಗರದ ಜಟ್ ಪಟ್ ನಗರದ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡಬೇಕೆಂದು ಜಿಲ್ಲಾಡಳಿತ ಆದೇಶ ಮಾಡಿದೆ. ಕೋವಿಡ್ ಆಸ್ಪತ್ರೆಯಲ್ಲಿ ಕೊರೊನಾದಿಂದ ಬಲಿಯಾದವರನ್ನು ಜಟ್​ ಪಟ್ ನಗರದ ರುದ್ರಭೂಮಿಯ ಜನ್ರು ಸಂಚರಿಸುವ ರಸ್ತೆಯ ಎಡಭಾಗದಲ್ಲೇ ಶವಸಂಸ್ಕಾರ ನೆರವೇರಿಸಲಾಗುತ್ತಿದೆ. ಜಿಲ್ಲಾಡಳಿತದ ನಡೆಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.

2 ಎಕರೆ ಜಾಗ ಗುರುತಿಸಿದ ಆರೋಗ್ಯ ಸಚಿವರು

ಈಗಾಗಲೇ ಕೊರೊನಾ ಸೋಂಕಿತರ ಶವಗಳನ್ನು ಜಟ್ ಪಟ್ ನಗರದ ರುದ್ರಭೂಮಿ ಬಳಿಯೇ ಪೊಲೀಸರ ರಕ್ಷಣೆಯಲ್ಲಿ, ಹಲವು ಗೊಂದಲಗಳ ನಡುವೆ ಆರೋಗ್ಯ ಇಲಾಖೆ ಅಂತ್ಯಸಂಸ್ಕಾರ ನೆರವೇರಿಸುತ್ತಿದೆ. ಹೀಗಾಗಿ ಈ ವಿಚಾರ ತಿಳಿದ ಆರೋಗ್ಯ ಸಚಿವ ಶ್ರೀ ರಾಮುಲು ಕೋವಿಡ್​ನಿಂದ ಸಾವನ್ನಪ್ಪಿದವರ ಅಂತ್ಯಸಂಸ್ಕಾರದ ಗೊಂದಲಗಳಿಗೆ ತೆರೆ ಎಳೆಯೋ ಪ್ರಯತ್ನ ಮಾಡಿದ್ದೂ, ಶವ ಸಂಸ್ಕಾರಕ್ಕೆ ಎರಡು ಎಕರೆ ಜಾಗ ಗುರುತಿಸಿ ಭೂಮಿ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.