ಚಿತ್ರದುರ್ಗ: ಕೊರೊನಾ ವೈರಸ್ ತಡೆಗಟ್ಟುವ ಸಲುವಾಗಿ ಭಾರತ್ ಲಾಕ್‌ಡೌನ್ ಮಾಡಿದ್ದು, ಇದರಿಂದ ಬಡವರ್ಗದ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಊಟ ಸಿಗದೇ ಕಂಗಲಾಗಿದ್ದ ಅಲೆಮಾರಿಗಳಿಗೆ ನಗರದ ತಹಶೀಲ್ದಾರ್ ವೆಂಕಟೇಶಯ್ಯ ಆಸರೆಯಾಗಿದ್ದಾರೆ.
ನಿರ್ಗತಿಕರ ಸಮಸ್ಯೆಗೆ ಸ್ಪಂದಿಸಿದ ತಹಶೀಲ್ದಾರ್ ರಾತ್ರೋರಾತ್ರಿ ಅಲೆಮಾರಿಗಳಿರುವ ಸ್ಥಳಕ್ಕೆ ಆಗಮಿಸಿ ಆಹಾರ ಧಾನ್ಯಗಳನ್ನು ವಿತರಿಸಿ ನಿರ್ಗತಿಕರ ನೋವಿಗೆ ಸ್ಪಂದಿಸಿದರು.