ಚಿತ್ರದುರ್ಗ: ವಿವಾಹೇತರ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ವ್ಯಕ್ತಿವೋರ್ವನನ್ನು ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಲಾಗಿದೆ. ಈ ಘಟನೆ ಹೊಸದುರ್ಗ ತಾಲೂಕಿನ ವೆಂಗಲಾಪುರ ಗ್ರಾಮದಲ್ಲಿ ನಡೆದಿದೆ.
ಯೋಗರಾಜ್ (40) ಹತ್ಯೆಗೀಡಾದ ವ್ಯಕ್ತಿ. ಚಿದಾನಂದ ಹಾಗೂ ಆತನ ಅಳಿಯ ವಿನಯ್ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಚಿದಾನಂದ ಪತ್ನಿಯೊಂದಿಗೆ ಯೋಗರಾಜ್ ವಿವಾಹೇತರ ಸಂಬಂಧ ಇಟ್ಟುಕೊಂಡಿದ್ದ ಎಂದು ಹೇಳಲಾಗುತ್ತಿದೆ. ಇದರಿಂದ ಬೇಸತ್ತ ಚಿದಾನಂದ್, ತನ್ನ ಅಳಿಯ ವಿನಯ್ ಜೊತೆ ಸೇರಿ ಯೋಗರಾಜ್ನನ್ನು ಕೊಲೆ ಮಾಡಿದ್ದಾರೆ ಎನ್ನಲಾಗ್ತಿದೆ.
ಹತ್ಯೆ ಬಳಿಕ ಆರೋಪಿಗಳು ನಾಪತ್ತೆಯಾಗಿದ್ದು, ಶ್ರೀರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.