ETV Bharat / state

ಮುರುಘಾ ಶರಣರ ವಿರುದ್ಧದ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್ ಸಾಧ್ಯತೆ​.. ಬಾಲಕಿಯರ ಮೇಲೆ ಅತ್ಯಾಚಾರ ಆಗಿಲ್ಲ ಎಂದು ವೈದ್ಯರ ರಿಪೋರ್ಟ್​​​! - 1ನೇ ಪೋಕ್ಸೋ ಪ್ರಕರಣದ ಇಬ್ಬರು ಸಂತ್ರಸ್ತೆ ಬಾಲಕಿ

ಮುರುಘಾಶ್ರೀ ವಿರುದ್ಧ ಪೋಕ್ಸೋ ಪ್ರಕರಣ ಸಂಬಂಧ ಮೆಡಿಕಲ್​ ರಿಪೋರ್ಟ್ ಸಲ್ಲಿಕೆ - ಸಂತ್ರಸ್ತ ಬಾಲಕಿಯರ ಮೆಡಿಕಲ್​ ರಿಪೋರ್ಟ್​ ಬಗ್ಗೆ ಭಕ್ತನ ಹೇಳಿಕೆ.

POCSO case against Murughashree
ಮುರುಘಾ ಶರಣರ ಪ್ರಕರಣ
author img

By

Published : Jan 4, 2023, 6:00 PM IST

Updated : Jan 4, 2023, 7:32 PM IST

ಚಿತ್ರದುರ್ಗ: ಮುರುಘಾ ಮಠದ ಪೀಠಾಧಿಪತಿ ಡಾ.ಶಿವಮೂರ್ತಿ ಶರಣರ ವಿರುದ್ಧ ಲೈಂಗಿಕ ಕಿರುಕುಳ ಆರೋಪಕ್ಕೆ ಬಿಗ್​ ಟ್ವಿಸ್ಟ್​ ದೊರೆಯುವ ಸಾಧ್ಯತೆಗಳು ಹೆಚ್ಚಾಗಿವೆ. ಶ್ರೀಗಳ ವಿರುದ್ಧ ಆರೋಪದ ಹಿನ್ನೆಲೆಯಲ್ಲಿ ಬಾಲಕಿಯರ ವೈದ್ಯಕೀಯ ಪರೀಕ್ಷೆ ನಡೆಸಿದ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆ ವೈದ್ಯಾಧಿಕಾರಿಗಳು, ಕೋರ್ಟ್​ಗೆ ನೀಡಿರುವ ವರದಿಯಲ್ಲಿ ಬಾಲಕಿಯರ ಮೇಲೆ ಅತ್ಯಾಚಾರ ಆಗಿಲ್ಲ ಎಂದು ವರದಿ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಆದರೆ, ವೈದ್ಯರು ನೀಡಿರುವ ವರದಿ ಕೋರ್ಟ್​ಗೆ ಸಲ್ಲಿಕೆಯಾಗಿದ್ದು, ಬಹಿರಂಗವಾಗಿಲ್ಲ. 1ನೇ ಪೋಕ್ಸೋ ಪ್ರಕರಣದ ಇಬ್ಬರು ಸಂತ್ರಸ್ತೆ ಬಾಲಕಿಯರ ಮೆಡಿಕಲ್ ರಿಪೋರ್ಟ್​​​ನಲ್ಲಿ ಅತ್ಯಾಚಾರ ಆಗಿಲ್ಲ ಎಂಬ ವರದಿ ಬಂದಿದೆ ಎಂದು ಹೇಳಲಾಗುತ್ತಿದೆ. ಬಾಲಕಿಯರ ತಪಾಸಣಾ ವರದಿಯಲ್ಲಿ ಯಾವುದೇ ಗಾಯಗಳು ಇಲ್ಲ ಎಂದು ಚಿತ್ರದುರ್ಗ‌ ಜಿಲ್ಲಾಸ್ಪತ್ರೆಯ ವೈದ್ಯರು ಕೋರ್ಟ್​​​ಗೆ ಸಲ್ಲಿಸಿರುವ ವೈದ್ಯಕೀಯ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಎನ್ನಲಾಗಿದೆ.

ಈ ನಡುವೆ ಪೊಲೀಸರು ಕೋರ್ಟ್​ಗೆ ಸಲ್ಲಿಸಿರುವ ಚಾರ್ಜ್​ಶೀಟ್​ನಲ್ಲೂ ಪೊಲೀಸರು ಬಾಲಕಿಯರ ಮೆಡಿಕಲ್​ ವರದಿಯನ್ನು ಉಲ್ಲೇಖಿಸಿದ್ದಾರೆ. ಹೀಗಾಗಿ ಈ ಪ್ರಕರಣದಕ್ಕೆ ಟ್ವಿಸ್ಟ್ ಸಿಗುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಏನಿದು ಪ್ರಕರಣ: ಮುರುಘಾ ಮಠದ ಹಾಸ್ಟೆಲ್​ನಲ್ಲಿ ವ್ಯಾಸಂಗ ಮಾಡುತ್ತಿದ್ದ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪದ ಮೇಲೆ ಚಿತ್ರದುರ್ಗದ ಮುರುಘಾ ಮಠದಲ್ಲಿಯೇ ಮುರುಘಾ ಶ್ರೀ ಅವರನ್ನು ಪೋಕ್ಸೋ ಕಾಯ್ದೆಯಡಿ ಆಗಸ್ಟ್ 26 ರಂದು ಮೈಸೂರು ಪೊಲೀಸ್ ಠಾಣೆಯಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣ ದಾಖಲಾದ ಎರಡು ದಿನಗಳ ನಂತರ ಬಾಲಕಿಯರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅಕ್ಟೋಬರ್‌ನಲ್ಲಿ ಶ್ರೀಗಳ ವಿರುದ್ಧ ಇನ್ನೂ ಕೆಲವು ಬಾಲಕಿಯರು ಇಂತಹುದೇ ದೂರು ನೀಡಿದ್ದರು.

ಜಾಮೀನು ಮುಂದೂಡಿಕೆ: ಸಪ್ಟೆಂಬರ್​ 1ರಂದು ಚಿತ್ರದುರ್ಗ ಗ್ರಾಮಾಂತರ ಠಾಣೆಯ ಸಿಪಿಐ ಬಾಲಚಂದ್ರ ನಾಯ್ಕ್‌, ಮೊಳಕಾಲ್ಮೂರು ಠಾಣೆ ಸಿಪಿಐ ಸತೀಶ್ ಅವರುಗಳು ಮಠದ ಒಳಗೆ ಪ್ರವೇಶಿಸಿ ಶ್ರೀಗಳನ್ನು ಬಂಧಿಸಿದ್ದರು. ನಂತರ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಈಗಿನ ವರೆಗೂ ಅವರು ಚಿತ್ರದುರ್ಗ ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಮುರುಘಾ ಶರಣರ ಪ್ರಕರಣ ಸಂಬಂಧ ಬಾಲಕಿಯರ ಮೆಡಿಕಲ್​ ರಿಪೋರ್ಟ್ ಸಲ್ಲಿಕೆ

ವಿದ್ಯಾರ್ಥಿನಿಯರ ವೈದ್ಯಕೀಯ ವರದಿ ಬಗ್ಗೆ ಮಠದ ಭಕ್ತ ಹೇಳುವುದೇನು?: ಈ ವರದಿ ಸಲ್ಲಿಕೆ ಬಗ್ಗೆ ಮುರುಘಾಶ್ರೀ ಭಕ್ತರಲ್ಲಿ ಒಬ್ಬರಾದ ಜೀತೇಂದ್ರ ಎಂಬುವರು ಪ್ರತಿಕ್ರಿಯೆ ನೀಡಿದ್ದಾರೆ. ಶ್ರೀಗಳ ಬಗ್ಗೆ ಸುಳ್ಳು ದೂರು ದಾಖಲಾಗಿದೆ ಎಂದು ಮೊದಲೇ ಗೊತ್ತಿತ್ತು. ಈಗ ಮಾಧ್ಯಮಗಳಲ್ಲಿ ಬಾಲಕಿಯರ ಮೇಲೆ ಯಾವುದೇ ಅತ್ಯಾಚಾರ ಆಗಿಲ್ಲ ಎಂದು ವೈದ್ಯರು ಕೋರ್ಟ್​ಗೆ ರಿಪೋರ್ಟ್​ ಸಲ್ಲಿಸಿದ್ದಾರೆ ಎಂದು ವರದಿ ಆಗುತ್ತಿದೆ. ಶ್ರೀಗಳಿಗೆ ನ್ಯಾಯ ಸಿಗಲಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಮುರುಘಾ ಶ್ರೀ ಜಾಮೀನು ಅರ್ಜಿ ವಿಚಾರಣೆ ಡಿ.16ಕ್ಕೆ ಮುಂದೂಡಿದ ಹೈಕೋರ್ಟ್

ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ ಪ್ರಶ್ನಿಸಿದ್ದ ಅರ್ಜಿ ತಿದ್ದುಪಡಿಗೆ ಹೈಕೋರ್ಟ್ ಅನುಮತಿ

Last Updated : Jan 4, 2023, 7:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.